
ನವದೆಹಲಿ (ಅಕ್ಟೋಬರ್ 11): ದೆಹಲಿಯಿಂದ ಚೆನ್ನೈಗೆ ಪ್ರಯಾಣ ಬೆಳೆಸುತ್ತಿದ್ದ ಇಂಡಿಗೋ ವಿಮಾನದ (IndiGo fligh)ಲ್ಲಿ ಕೆಲ ಕಾಲ ಆತಂಕ ಸೃಷ್ಟಿಯಾದ ಘಟನೆ ವರದಿಯಾಗಿದೆ. ಇದಕ್ಕೆ ವಿಮಾನಲ್ಲಿದ್ದ ಪ್ರಯಾಣಕನ ಎಲೆಕ್ಟ್ರಿಕ್ ಡಿವೈಸ್‌ನಿಂದ ಹೊಗೆ ಬರಲು ಆರಂಭಿಸಿತ್ತು. ಇದರಿಂದ ಗಾಬರಿಯಾದ ಸಿಬ್ಬಂದಿ ಹೈದರಾಬಾದ್‌ನಲ್ಲಿ ಎಮರ್ಜೆನ್ಸಿ ಲ್ಯಾಂಡ್ ಮಾಡಲಾಗಿದೆ.
ಹೊಗೆ ಕಾಣಿಸಿಕೊಂಡ ಕೂಡಲೇ ವಿಮಾನದ ಸಿಬ್ಬಂದಿಗೆ ಗಮನಕ್ಕೆ ಇದು ಗೊತ್ತಾಗಿದೆ. ಕೂಡಲೇ ಅವರು ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಬೆನ್ನಲ್ಲೇ, ವಿಮಾನವನ್ನು ಹೈದರಾಬಾದ್‌ನ ರಾಜೀವ್ ಗಾಂಧಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ಆ ಬಳಿಕ ಪ್ರಯಾಣಿಕರೆಲ್ಲ ನಿಟ್ಟುಸಿರು ಬಿಟ್ಟಿದ್ದಾರೆ.
ದೆಹಲಿ-ಚೆನ್ನೈ ಮಾರ್ಗದಲ್ಲಿ (Delhi to Chennai) ಪ್ರಯಾಣಿಸುತ್ತಿದ್ದ 6E 6115 ವಿಮಾನದಲ್ಲಿ ಅವಘಡ ಸಂಭವಿಸಿದೆ. ವಿಮಾನದಲ್ಲೇ ಎಲೆಕ್ಟ್ರಿಕ್ ಸಾಧನದ ಹೊಗೆಯನ್ನು ನಿಯಂತ್ರಿಸಲಾಗಿದೆ. ಆದರೆ, ಪ್ರೋಟೋಕಾಲ್ ಪ್ರಕಾರ ಆಗಸದ ಮಧ್ಯದಲ್ಲೇ ವಿಮಾನವನ್ನು ಪೈಲೆಟ್‌ಗಳು ಹೈದರಾಬಾದ್‌ಗೆ ತಿರುಗಿಸಿದ್ದಾರೆ.
ಆದರೆ ವಿಮಾನ ಸಿಬ್ಬಂದಿ, ಹೊಗೆ ಕಾಣಿಸಿಕೊಂಡಿದ್ದು ಯಾವ ಡಿವೈಸ್? ಅದಕ್ಕೆ ಬೆಂಕಿ ಹೇಗೆ ತಗುಲಿತು ಅನ್ನೋದ್ರ ಬಗ್ಗೆ ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ಬಹಿರಂಗ ಮಾಡಿಲ್ಲ. ಕೆಲವು ವರದಿಗಳ ಪ್ರಕಾರ, ಪ್ರಯಾಣಿಕರೊಬ್ಬರು ಬಳಸುತ್ತಿದ್ದ ಪವರ್ ಬ್ಯಾಂಕ್‌ನಲ್ಲಿ (Power bank) ಹೊಗೆ ಕಾಣಿಸಿಕೊಂಡಿತ್ತು ಎಂದು ಹೇಳಲಾಗಿದೆ.
ಹೈದಾರಾಬಾದ್ ವಿಮಾನವನ್ನು ನಿಲ್ಲಿಸಿದ ಬಳಿಕ ಎಲ್ಲಾ ಸಿಬ್ಬಂದಿಯನ್ನು ಕೆಳಗೆ ಇಳಿಸಲಾಯಿತು. ನಂತರ ಬೇರೆ ವಿಮಾನದ ವ್ಯವಸ್ಥೆ ಮಾಡಿಸಿ ಚೆನ್ನೈಗೆ ಕಳುಹಿಸಲಾಗಿದೆ ಎಂದು ಇಂಡಿಗೋ ಸಂಸ್ಥೆ ತಿಳಿಸಿದೆ. ಇನ್ನು ಘಟನೆಯಿಂದ ಅಡಚಣೆ ಉಂಟಾಗಿದೆ. ದಯಮಾಡಿ ಕ್ಷಮಿಸಬೇಕು ಎಂದು ವಿಮಾನ ಸಂಸ್ಥೆ ಕೇಳಿಕೊಂಡಿದೆ.
ಈ ಅನಿರೀಕ್ಷಿತ ಅನಾನೂಕೂಲತೆಗೆ ವಿಷಾದಿಸುತ್ತೇವೆ. ಇಂಥ ಅವಘಡಗಳು ಮುಂದೆ ಆಗದಂತೆ ನೋಡಿಕೊಳ್ಳುತ್ತವೆ ಎಂದು ವಿಮಾನ ಸಂಸ್ಥೆ ಹೇಳಿಕೊಂಡಿದೆ. ಇನ್ನು ಅವಘಡದಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿದೆಯಾ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಎಷ್ಟು ಗಂಟೆಗಳ ಕಾಲ ಕಾಯಬೇಕಾಯಿತು ಎಂಬುವುದರ ಬಗ್ಗೆಯೂ ಯಾವುದೇ ಮಾಹಿತಿಯನ್ನ ನೀಡಿಲ್ಲ.
ವಿಮಾನ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, ಎಲೆಕ್ಟ್ರಿಕ್ ಡಿವೈಸ್‌ಗೆ ಹೇಗೆ ಬೆಂಕಿ ಹತ್ತಿಕೊಂಡಿತು ಅನ್ನೋದ್ರ ಬಗ್ಗೆ ತನಿಖೆ ನಡೆಸಲು ಸಂಸ್ಥೆ ಮುಂದಾಗಿದೆ. ಡಿವೈಸ್ ಮೊದಲೇ ಹಾಳಾಗಿತ್ತಾ? ಅದನ್ನು ಉದ್ದೇಶಪೂರ್ವಕವಾಗಿ ತರಲಾಗಿತ್ತಾ? ಬೆಂಕಿ ಹತ್ತಿಕೊಳ್ಳಲು ಕಾರಣ ಏನು? ಎಂಬಿತ್ಯಾದಿಗಳ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ