Communal Harmony ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ಅನುಗ್ರಹ ಪಡೆದ ಮುಸ್ಲಿಮರು,ಇದು ಭಾವೈಕ್ಯತೆ ಭಾರತ!

Published : Apr 04, 2022, 09:08 PM IST
Communal Harmony ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ಅನುಗ್ರಹ ಪಡೆದ ಮುಸ್ಲಿಮರು,ಇದು ಭಾವೈಕ್ಯತೆ ಭಾರತ!

ಸಾರಾಂಶ

ಹಿಜಾಬ್, ಹಲಾಲ್ ವಿವಾದ ನಡುವೆ ಮಾದರಿ ನಡೆ ಕಡಪ ಜಿಲ್ಲೆಯ ಹಿಂದೂ ದೇಗುಲದಲ್ಲಿ ಮುಸ್ಲಿಮರ ಪೂಜೆ ಯುಗಾದಿ ನಮಗೆ ಹೊಸ ವರ್ಷ ಎಂದು ಮುಸ್ಲಿಮ್ ಮಹಿಳೆ

ಕಡಪ(ಏ.04): ಹಲಾಲ್, ಹಿಜಾಬ್ ಸೇರಿದಂತೆ ಹಲವು ಕಾರಣಗಳಿಂದ ಹಿಂದೂ ಮುಸ್ಲಿಮರ ನಡುವೆ ಕಂದಕ ಹೆಚ್ಚಾಗುತ್ತಿದೆ ಅನ್ನೋ ಆತಂಕ ಮನೆ ಮಾಡಿದೆ. ಆದರೆ ಈ ಘಟನೆಗಳ ನಡುವೆ ಐಕ್ಯತೆಯ ನಡೆ ಭಾರಿ ಸದ್ದು ಮಾಡುತ್ತಿದೆ. ಆಂಧ್ರಪ್ರದೇಶದ ಕಡಪ ಜಿಲ್ಲೆಯ ದೇವುನಿಯಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಮಂದಿರದಲ್ಲಿ ಮುಸ್ಲಿಮರು ಯುಗಾದಿ ಹಬ್ಬಕ್ಕೆ ಪೂಜೆ ಸಲ್ಲಿಸಿ ಅನುಗ್ರಹ ಪಡೆದ ಘಟನೆ ನಡೆದಿದೆ.

ತಿರುಪತಿಯ ತಿರುಮಲ ದೇವಸ್ಥಾನದಿಂದ ಸುಮಾರು 120 ಕಿಲೋಮೀಟರ್ ದೂರದಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಯುಗಾದಿ ಹಬ್ಬದ ಬೆಳಗ್ಗೆ ಹಿಂದೂಗಳ ಜೊತೆಗ ಹಲವು ಮುಸ್ಲಿಮರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದ ಮುಸ್ಲಿಮರು ದೇವಗ ಅನುಗ್ರಹ ಪಡೆದಿದ್ದಾರೆ.

Ugadi 2022: ಬದುಕಿನ ಪಾಠ ಹೇಳುವ ಬೇವು ಬೆಲ್ಲ.. ಈ ಕಾರಣಕ್ಕೆ ಸೇವಿಸಿ

ಈ ವೇಳೆ ಮಾತನಾಡಿರುವ ಮುಸ್ಲಿಮ್ ಮಹಿಳೆ, ಭಾರತೀಯರಿಗೆ ಜನವರಿ 1 ಹೊಸ ವರ್ಷವಲ್ಲ, ಯುಗಾದಿ ನಮ್ಮ ಹೊಸ ವರ್ಷ ಎಂದಿದ್ದಾರೆ. ನಾನು ಚಿತ್ತೂರಿನಿಂದ ಈ ದೇವಸ್ಥಾನಕ್ಕೆ ಆಗಮಿಸಿರುವುದಾಗಿ ಮುಸ್ಲಿಮ್ ಮಹಿಳೆ ಹೇಳಿದ್ದಾರೆ. ಕಳೆದ 8 ವರ್ಷಗಳಿಂದ ಈ ದೇವಸ್ಥಾನಕ್ಕೆ ಬಂದು ಸ್ವಾಮಿಯ ಅನಗ್ರಹ ಪಡೆಯುತ್ತಿರುವುದಾಗಿ ಮತ್ತೊರ್ವ ಮುಸ್ಲಿಮ್ ಹೇಳಿದ್ದಾರೆ.

ನಮ್ಮ ಪೋಷಕರು ಈ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದರು. ನಾವು ಈ ಸಂಪ್ರದಾಯ ಮುಂದುವರಿಸಿದ್ದೇವೆ. ಇದೀಗ ನಮ್ಮ ಮಕ್ಕಳು ಪಾಲಿಸುತ್ತಿದ್ದಾರೆ.  ದೇವಸ್ಥಾನಕ್ಕೆ ಆಗಮಿಸಿ ತೆಂಗಿನ ಕಾಯಿ ಒಡೆದಿದ್ದೇವೆ. ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದ್ದೇವೆ ಎಂದು ಮುಸ್ಲಿಮರು ಹೇಳಿದ್ದಾರೆ.

ಯುಗಾದಿಯ ಹೊಸ ತೊಡಕು ಆಚರಣೆ: ಮಟನ್‌ ಖರೀದಿಗೆ ಜನವೋ ಜನ..!

ಯುಗಾದಿ ಹಬ್ಬಕ್ಕೆ ಕರ್ನಾಟಕದ ಹಲವು ಭಾಗಗಲ್ಲೂ ಹಿಂದೂ ಮುಸ್ಲಿಮರು  ಭಾವೈಕ್ಯತೆ ಸಾರಿದ ಘಟನೆಗಳು ನಡೆದಿದೆ. ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್‌ ವೃ ತ್ತದಲ್ಲಿ ಸೌಹಾರ್ದ ವೇದಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿಂದು, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದ ಮುಖಂಡರ ಪಾಲ್ಗೊಂಡು ಬೇವು, ಬೆಲ್ಲವನ್ನು ಎಲ್ಲಾ ಸಮುದಾಯದ ಜನರಿಗೆ ಹಂಚುವ ಮೂಲಕ ಯುಗಾದಿ ಹಬ್ಬವನ್ನು ಸೌಹಾರ್ದಯುತವಾಗಿ ಆಚರಿಸಿ ಗಮನ ಸೆಳೆದರು.

ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಹಿಂದೂ-ಮುಸ್ಲಿಂ ಸಹೋದರರು ಸೇರಿ ಯುಗಾದಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಜಾತಿ ಧರ್ಮಗಳ ಅಮಲಿನಲ್ಲಿ ತೇಲಾಡುತ್ತಿರುವ, ಸಾಮರಸ್ಯ ಹಾಳು ಮಾಡುವ ಪ್ರಯತ್ನಕ್ಕಿಳಿದವರಿಗೆ ಇದು ನೀತಿಪಾಠದಂತಿದೆ.ಯುಗಾದಿ ಹಬ್ಬದಂದು ಬೇವು-ಬೆಲ್ಲ ಹಂಚಿ, ಒಬ್ಬರಿಗೊಬ್ಬರು ಯುಗಾದಿ ಆಚರಿಸುತ್ತಾರೆ. ಯಾದಗಿರಿಯ ವಡಗೇರಾದ ಜನ ಯುಗಾದಿಯನ್ನು ನಾವೆಲ್ಲ ಒಂದೇ ಎಂಬ ಭಾವನೆಯಿಂದ ಆಚರಿಸಿದ್ದಾರೆ. ಯುಗಾದಿ ಹಿಂದೂಗಳ ಹಬ್ಬ, ಆದ್ರೆ ಹಿಂದೂ-ಮುಸ್ಲಿಂ ರೆಲ್ಲಾ ಸೇರಿ ಯುಗಾದಿ ಹಬ್ಬದ ದಿನದಂದು ಬೇವು-ಬೆಲ್ಲ ತಯಾರಿಸಿ ಸಾರ್ವಜನಿಕರಿಗೆ ವಿತರಣೆ ಮಾಡಿದ್ದಾರೆ. ಹಾಗಾಗಿ ಯುಗಾದಿ ದಿನದಂದು ರಾಜ್ಯದ ಜನರಿಗೆ ವಡಗೇರಾ ಜನರು ಮಾದರಿಯಾಗಿದ್ದಾರೆ.

ಮಾಂಸ ಖರೀದಿಯಲ್ಲಿ ಸಾಮರಸ್ಯ
ರಾಜ್ಯದ ಎಲ್ಲೆಡೆ ಹಲಾಲ್‌, ಜಟ್ಕಾ ಕಟ್‌ನದ್ದೇ ಸುದ್ದಿ, ಆದರೆ, ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರ ಹಲಾಲ್‌, ಜಟ್ಕಾ ಕಟ್‌ ಎಂಬ ಜಂಜಾಟವಿಲ್ಲದೇ ಜನರು ಸಾಮರಸ್ಯದಿಂದ ಮುಸ್ಲಿಂ ಮಾಂಸದಂಗಡಿಗಳಲ್ಲಿ ಭಾನುವಾರ ಭರ್ಜರಿಯಾಗಿಯೇ ಮಾಂಸ ಖರೀದಿಸಿದರು. ಒಂದೆಡೆ ಭಾನುವಾರ ಮತ್ತೊಂದೆಡೆ ಹೊಸ ವರ್ಷತೊಡಕು. ಜಿಲ್ಲಾದ್ಯಂತ ಮಾಂಸದಂಗಡಿಗಳಿಗೆ ಜನರು ಮುಗಿಬಿದ್ದು ಕೋಳಿ, ಕುರಿ, ಆಡು ಮಾಂಸ ಮತ್ತು ಮೊಟ್ಟೆಖರೀದಿ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !
ಇನ್ನೂ 3 ದಿನ ತಗ್ಗುವುದಿಲ್ಲ ಇಂಡಿಗೋಳು! - ನಿನ್ನೆ ಮತ್ತೆ 650 ವಿಮಾನ ರದ್ದು