ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಂದರೆ ಈ ವೃದ್ಧೆಗೆ ವಿಪರೀತ ಪ್ರೀತಿ. ತನ್ನ ಬಳಿ ಇದ್ದ ಕೋಟಿ ಬೆಲೆ ಬಾಳುವ ಆಸ್ತಿಯೊಂದಿಗೆ ಬಂಗಾರ, ದುಡ್ಡು ಎಲ್ಲವನ್ನೂ ರಾಹಲ್ ಗಾಂಧಿಗೇ ವರ್ಗಾಯಿಸಿದ್ದಾಳೆ ಈ ಮಹಿಳೆ.
ಡೆಹ್ರಡೂನ್(ಏ.04): ಉದ್ಯಮಿಗಳು, ಶ್ರೀಮಂತರು ಸೇರಿದಂತೆ ಹಲವರು ತಮ್ಮ ಆಸ್ತಿಗಳನ್ನು ಬಡವರಿಗೆ ದಾನ ಮಾಡಿದ ಹಲವು ಉದಾಹರಣೆಗಳಿವೆ. ಕೋಟಿ ಕೋಟಿ ಆಸ್ತಿ ಹೊಂದಿರುವ ರಾಜಕಾರಣಿಗೆ ಆಸ್ತಿಗಳನ್ನು ವರ್ಗಾಯಿಸಿದ ಘಟನೆ ನಡೆದಿಲ್ಲ. 78ರ ಹರೆಯದ ವೃದ್ಧೆ ಪುಷ್ಪಾ ಮುಂಜಿಯಲ್ ತನ್ನ ಎಲ್ಲಾ ಆಸ್ತಿಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಸರಿಗೆ ವರ್ಗಾಯಿಸಿದ್ದಾರೆ. ರಾಹುಲ್ ಗಾಂಧಿ ಸೇವೆ ಈ ದೇಶಕ್ಕೆ ಅವಶ್ಯಕತೆ ಇದೆ ಎಂದು ಪುಷ್ಪಾ ಹೇಳಿದ್ದಾರೆ.
ಉತ್ತರಖಂಡದ ಡೆಹ್ರಡೂನ್‌ನ ನಿವಾಸಿಯಾಗಿರುವ ಪುಷ್ಪಾ ಮುಂಜಿಯಲ್ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಯಿಂತ ಪ್ರಭಾವಿತರಾಗಿದ್ದಾರೆ. ರಾಹುಲ್ ಗಾಂಧಿಯ ವಿಚಾರಧಾರೆಗಳು ಈ ದೇಶದ ಪ್ರಗತಿಗೆ ಅವಶ್ಯಕವಾಗಿದೆ. ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ರಾಹುಲ್ ಗಾಂಧಿಗೆ ಸಾಧ್ಯವಿದೆ. ಹೀಗಾಗಿ ತನ್ನ ಆಸ್ತಿಗಳನ್ನೆಲ್ಲಾ ಮರಣ ನಂತರ ರಾಹುಲ್ ಗಾಂಧಿಗೆ ಸೇರಬೇಕು ಎಂದು ಮರಣಶಾಸನ ಬರೆಸಿದ್ದಾರೆ.
ನಿಮ್ ಬಗ್ಗೆ ಚೆನ್ನಾಗಿ ಗೊತ್ತು ಎನ್ನುತ್ತಲೇ ಸಿದ್ದು, ಡಿಕೆಶಿ, ಖರ್ಗೆಗೆ ರಾಹುಲ್ ಎಚ್ಚರಿಕೆ, ಜತೆಗೊಂದು ಹೊಸ ಟಾಸ್ಕ್
50 ಲಕ್ಷ ರೂಪಾಯಿ ಮೌಲ್ಯದ ಆಸ್ತಿ, 10 ತೊಲೆ ಬಂಗಾರ ಸೇರಿದಂತೆ ಒಟ್ಟು ಕೋಟಿ ರೂಪಾಯಿಗೆ ಬೆಲೆ ಬಾಳುವ ಆಸ್ತಿಗಳನ್ನು ರಾಹುಲ್ ಗಾಂಧಿ ಹೆಸರಿಗೆ ವರ್ಗಾಯಿಸಿದ್ದಾರೆ. ಡೆಹ್ರಡೂನ್ ಕೋರ್ಟ್‌ಗೆ ಮರಣಶಾಸನದ ಪತ್ರವನ್ನು ನೀಡಿದ್ದಾರೆ. ಈ ಕುರಿತು ಕಾಂಗ್ರೆಸ್ ಮೆಟ್ರೋಪೊಲಿಟಿಯನ್ ಅಧ್ಯಕ್ಷ ಲಾಲ್‌ಚಂದ್ ಶರ್ಮಾ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಪುಷ್ಪ ಮುಂಜಿಯಲ್ ಬಾಲ್ಯದಿಂದಲೇ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಅಭಿಮಾನಿಯಾಗಿರುವ ಪುಷ್ಪ ಇದೀಗ ರಾಹುಲ್ ಗಾಂಧಿಯೇ ದೇಶದ ನಾಯಕ ಎಂದಿದ್ದಾರೆ. ದೇಶದಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ರಾಹುಲ್ ಗಾಂಧಿಗೆ ಮಾತ್ರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದು ಪುಷ್ಪ ಹೇಳಿದ್ದಾರೆ.
ಇಂದು ರಾಹುಲ್‌ಗಾಂಧಿ ರಾಜ್ಯಕ್ಕೆ, ಪಕ್ಷದ ನಾಯಕರೊಂದಿಗೆ ಸರಣಿ ಸಭೆ, ಚುನಾವಣಾ ರಣತಂತ್ರ ತಯಾರಿ
ರಾಹುಲ್ ಗಾಂಧಿ ಕುಟುಂಬ ಈ ದೇಶಕ್ಕೆ ಹಲವು ತ್ಯಾಗಗಳನ್ನು ಮಾಡಿದೆ. ಸ್ವಾತಂತ್ರ್ಯ ಸಮಯದಿಂದ ಇಲ್ಲೀವರೆಗೂ ಕಾಂಗ್ರೆಸ್ ತ್ಯಾಗಗಳನ್ನು ಮಾಡುತ್ತಲೇ ಬಂದಿದೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಈ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಆದರೆ ಇತ್ತೀಚೆಗೆ ದೇಶದ ಜನರಲ್ಲಿ ಕಾಂಗ್ರೆಸ್ ಮೇಲಿನ ಅಭಿಮಾನ ಕಡಿಮೆಯಾಗಿದೆ. ಚುನಾವಣೆಯಲ್ಲೂ ಸೋಲು ಕಂಡಿದೆ. ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಹೆಚ್ಚು ಶಕ್ತಿಯುತವಾಗಿ ಸ್ಪರ್ಧಿಸಲು ತನ್ನ ಆಸ್ತಿಗಳನ್ನು ರಾಹುಲ್ ಗಾಂಧಿಗೆ ನೀಡುವುದಾಗಿ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾ ಸೋಲು ಕಂಡಿದೆ. ಐದು ರಾಜ್ಯಗಳಲ್ಲಿ ಸೋಲು ಕಂಡಿದೆ. ಅಧಿಕಾರದಲ್ಲಿ ಪಂಜಾಬ್‌ನಲ್ಲೂ ಹಿನ್ನಡೆ ಅನುಭವಿಸಿದೆ. ಇದೀಗ ಕಾಂಗ್ರೆಸ್ ಕರ್ನಾಟಕದಿಂದ ಮತ್ತೆ ದೇಶದಲ್ಲಿ ಅಧಿಕಾರ ಹಿಡಿಯಲು ತಯಾರಿ ನಡೆಸುತ್ತಿದೆ.
ಡೀಸೆಲ…, ಪೆಟ್ರೋಲ್…, ಅಡುಗೆಎಣ್ಣೆ, ಎಲ…ಪಿಜಿ ಗ್ಯಾಸ್, ರಸಾಯನಿಕ ಗೊಬ್ಬರ ಸೇರಿದಂತೆ ಇನ್ನಿತರ ವಸ್ತುಗಳ ಬೆಲೆ ಏರಿಕೆ ಮಾಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಸತತ ಪ್ರತಿಭಟನೆ ಹಮ್ಮಿಕೊಂಡಿದೆ. ಬೆಲೆ ಏರಿಕೆ ಖಂಡಿಸಿ ದೇಶವ್ಯಾಪಿ ಪ್ರತಿಭಟನೆ ನಡೆಸುತ್ತಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಔಷಧಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನರ ಗಾಯದ ಮೇಲೆ ಬರೆ ಎಳೆಯುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡುತ್ತಿದೆ. ಈಗಾಗಲೇ ಇಂತಹ ಜನ, ರೈತ ವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಜನರು ಭ್ರಮನಿರಸಗೊಂಡಿದ್ದಾರೆ. ಸುಳ್ಳು ಭರವಸೆ ನೀಡಿದ ಅಧಿಕಾರಕ್ಕೆ ಬಂದ ಬಿಜೆಪಿ ನಿಜ ಬಣ್ಣ ಇದೀಗ ಬಯಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ