Karauli violence ಕೋಮುಗಲಭೆ, ಕಲ್ಲು ತೂರಾಟ, ಬೆಂಕಿ ಜ್ವಾಲೆ ನಡುವೆ ಮುದ್ದು ಕಂದನ ರಕ್ಷಿಸಿದ ಪೊಲೀಸ್ ಪೇದೆ!

By Suvarna NewsFirst Published Apr 4, 2022, 7:11 PM IST
Highlights
  • ರಾಜಸ್ಥಾನದ ಕರೌಲಿಯಲ್ಲಿ ಭುಗಿಲೆದ್ದ ಹಿಂಸಾಚಾರ 
  • ಗಲಭೆ ನಡುವೆ ಕಂದನ ರಕ್ಷಿಸಿದ ಪೊಲೀಸ್ ಪೇದೆ
  • ಪೊಲೀಸ್ ಪೇದೆ ಫೋಟೋ ವೈರಲ್, ಭಾರಿ ಮೆಚ್ಚುಗೆ

ಕರೌಲಿ(ಏ.04): ರಾಜಸ್ಥಾನದ ಕರೌಲಿಯಲ್ಲಿನ ಕೋಮುಗಲಭೆ ಹಿಂಸಾರೂಪ ಪಡೆದಿದೆ. ಯುಗಾದಿ ಹಬ್ಬದಂದು ಹಿಂದೂಗಳ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಇದು ಹಿಂದೂ ಸಮುದಾಯವನ್ನು ಕೆರಳಿಸಿತ್ತು. ಇಲ್ಲಿಂದ ಆರಂಭಗೊಂಡ ಗಲಭೆ ಹಿಂಸಾ ರೂಪ ಪಡೆದಿದೆ. ಹಲವು ಕಟ್ಟಡ, ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಗಲಭೆ ನಡುವೆ ಪೊಲೀಸ್ ಪೇದೆ ಕಂದನ ರಕ್ಷಿಸುತ್ತಿರುವ ಫೋಟೋ ಭಾರಿ ವೈರಲ್ ಆಗಿದೆ. ಪೊಲೀಸ್ ಪೇದೆ ನೇತ್ರೇಶ್ ಶರ್ಮಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಕಿಯ ಜ್ವಾಲೆ, ಕಲ್ಲ ತೂರಾಟ, ದಾಳಿ ನಡುವಿನಿಂದ ಕಂದನನ್ನು  ರಕ್ಷಿಸಿ ತರುತ್ತಿರುವ ಫೋಟೋವನ್ನು ರಾಜಸ್ಥಾನ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಂಚಿಕೊಂಡಿದ್ದಾರೆ. ಈ ಫೋಟೋ ಕರೌಲಿಯ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸುತ್ತಿದೆ. ಹಿಂಭಾಗದಲ್ಲಿ ಕಟ್ಟಗಳು, ವಾಹನಗಳು ಹೊತ್ತಿ ಉರಿಯುತ್ತಿದೆ. ಕಲ್ಲೂ ತೂರಾಟಗಳು ನಡೆಯುತ್ತಿದೆ. ಧೈರ್ಯವಾಗಿ ಮಗುವಿಗೆ ಯಾವುದೇ ಅಪಾಯವಾಗದಂತೆ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ರಾಜಸ್ಥಾನ ಐಪಿಎಸ್ ಅಧಿಕಾರಿ ಸುಕ್ರುತಿ ಮಹದೇವ್ ಮಿಶ್ರಾ ಟ್ವೀಟ್ ಮಾಡಿದ್ದಾರೆ.

Latest Videos

Sri Lanka Crisis ಹಿಂಸಾಚಾರಕ್ಕೆ ತಿರುಗಿದ ಶ್ರೀಲಂಕನ್ನರ ಪ್ರತಿಭಟನೆ, ಸೇನಾ ವಾಹನಕ್ಕೆ ಬೆಂಕಿ!

ನೇತ್ರೇಶ್ ಶರ್ಮಾ ಕಾರ್ಯಕ್ಕೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ನೇತ್ರೇಶ್ ಶರ್ಮಾ, ನಾನು ಕರ್ತವ್ಯ ಮಾಡಿದ್ದೇನೆ. ಇದನ್ನು ಪ್ರಚಾರ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ. ಪೊಲೀಸರು ಈ ಜನರ ರಕ್ಷಣೆಗಾಗಿ ಇದೆ. ಅದನ್ನು ಮಾಡಿದ್ದೇನೆ ಎಂದು ನೇತ್ರೇಶ್ ಶರ್ಮಾ ಹೇಳಿದ್ದಾರೆ.

ಯುಗಾದಿ ಹಬ್ಬದ ದಿನ ರಾಜಸ್ಥಾನದ ಕರೌಲಿಯಲ್ಲಿ ಹಿಂದೂ ಸಮುದಾಯ ಮೆರವಣಿಗೆ ನಡೆಸಿತ್ತು. ಕರೌಲಿಯ ಮುಸ್ಲಿಮ್ ಪ್ರಾಬಲ್ಯವಿರುವ ಪ್ರದೇಶ ಸಮೀಪಿಸುತ್ತಿದ್ದಂತೆ ಹಿಂದೂಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಕಟ್ಟಡ ಮೇಲೆ ಕಲ್ಲುಗಳನ್ನುು ಶೇಖರಿಸಿಟ್ಟ, ಏಕಾಏಕಿ ಹಿಂದೂಗಳ ಮೇಲೆ ಕಲ್ಲು ತೂರಿದ್ದಾರೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದರು. ಮೆರವಣಿಗೆಯಲ್ಲಿ ಪಾಲ್ಗೊಂಡ ಮಹಿಳೆಯರು ಮಕ್ಕಳ ಮೇಲೂ ಕಲ್ಲು ತೂರಾಟ ನಡೆಸಲಾಗಿತ್ತು. 

 

"तम में प्रकाश हूँ,
कठिन वक़्त की आस हूँ।"
So proud of constable Netresh Sharma of Rajasthan Police for saving a precious life. This picture is in deed worth a thousand words.. pic.twitter.com/U2DMRE3EpR

— Sukirti Madhav Mishra (@SukirtiMadhav)

 

ಈ ಘಟನೆಗೆ ಆಕ್ರೋಶ ಹೆಚ್ಚಾಯಿತು. ಪರಿಣಾಮ ಗಲಭೆ ಹಿಂಸಾ ರೂಪ ಪಡೆದುಕೊಂಡಿದೆ. ಕರೌಲಿ ಪ್ರದೇಶದಲ್ಲಿ ಎರಡು ಸಮುದಾಯದ ನಡುವೆ ಮಾರಾಮಾರಿ ನಡೆದಿದೆ. ಕಟ್ಟಡ, ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಲಾಗಿದೆ. 

Birbhum Violence ಸಿಬಿಐ ತನಿಖೆಗೆ ಆದೇಶ ನೀಡಿದ ಕಲ್ಕತ್ತಾ ಹೈಕೋರ್ಟ್!

ಈ ಹಿಂಸಾಚಾರದ ನಡುವೆ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಕೇಂದ್ರದ ಮೇಲೆ ಆರೋಪ ಹೊರಿಸಿದೆ. ಗಲಭೆಗೆ ಕೇಂದ್ರ ಸರ್ಕಾರ ಗಾಗೂ ನರೇಂದ್ರ ಮೋದಿ ಕಾರಣ, ಅವರೇ ಈ ಗಲಭೆಯ ಹೊಣೆ ಹೊತ್ತುಕೊಳ್ಳಬೇಕು ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಘಟನೆಯನ್ನು ಖಂಡಿಸಿಲ್ಲ. ಇದು ರಾಜ್ಯದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದು ಕೇಂದ್ರ ಹಾಗೂ ನರೇಂದ್ರ ಮೋದಿಯ ಜವಾಬ್ದಾರಿಯಾಗಿದೆ. ತಕ್ಷಣವೇ ಈ ಸಮಸ್ಯೆ ಕುರಿತು ಮೋದಿ ಮಾತನಾಡಬೇಕು ಎಂದು ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.

ಹಿಂದೂಗಳ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿ ಗಲಭೆ ಸೃಷ್ಟಿಸಿದ 46 ಮಂದಿಯನ್ನು ಇಲ್ಲೀವರೆಗೆ ಬಂಧಿಸಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಸೆಕ್ಷನ್ 144 ಜಾರಿ ಮಾಡಲಾಗಿದೆ. ಎಪ್ರಿಲ್ 2 ರಿಂದ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಏಪ್ರಿಲ್ 4ರ ವರೆಗೆ ಇಂಟರ್ನೆಟ್ ಸೇವೆ ಬಂದ್ ಮಾಡಲಾಗಿದೆ. ಹಿಂಸಾಚಾರ ಭುಗಿಲೆದ್ದಿರುವ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಶಾಂತಿಯುತವಾಗಿದ್ದ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿ  ಗಲಭೆ ಸೃಷ್ಟಿಸಿದವರಿಗೆ ಕಠಿಣ ಶಿಕ್ಷೆ ನೀಡಲು ಪ್ರತಿಭಟನಗಳು ನಡೆಯುತ್ತಿದೆ.

click me!