ಏರ್‌ಪೋರ್ಟ್ ಭದ್ರತಾ ವಿಭಾಗವು ತಕ್ಷಣವೇ ಸಹಾರ್ ರಸ್ತೆ ಪೊಲೀಸರಿಗೆ ಮಾಹಿತಿ ನೀಡಿದೆ. ಅವರು ಸ್ಥಳಕ್ಕೆ ಬಂದು ಮಗುವನ್ನು ಹೊರತೆಗೆದು ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ, ಮಗು ಮೃತಪಟ್ಟಿತ್ತು.
ಮುಂಬೈ (ಮಾ.26): ಮುಂಬೈ ವಿಮಾನ ನಿಲ್ದಾಣದ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾದ ಪ್ರಕರಣದಲ್ಲಿ, ವಿಮಾನ ಪ್ರಯಾಣಿಕರ ಮಾಹಿತಿಯನ್ನು ಮುಂಬೈ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಮಗು ಜನಿಸಿದ ತಕ್ಷಣವೇ ಕೊಲೆ ಮಾಡಿರಬಹುದು ಎಂಬ ತೀರ್ಮಾನಕ್ಕೆ ತನಿಖಾ ತಂಡ ಬಂದಿದೆ. ನಿನ್ನೆ ರಾತ್ರಿ 10:30ರ ಸುಮಾರಿಗೆ ವಿಮಾನ ನಿಲ್ದಾಣದ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಬಂದ ಸಿಬ್ಬಂದಿಗೆ ಮೃತದೇಹ ಪತ್ತೆಯಾಗಿದೆ. ಶೌಚಾಲಯದ ಡಸ್ಟ್‌ಬಿನ್‌ನಲ್ಲಿ ಮಗುವಿನ ಮೃತದೇಹವನ್ನು ಎಸೆಯಾಗಿತ್ತು.
ವಿಮಾನ ನಿಲ್ದಾಣದ ಭದ್ರತಾ ವಿಭಾಗವು ತಕ್ಷಣವೇ ಸಹಾರ್ ರಸ್ತೆ ಪೊಲೀಸರಿಗೆ ಮಾಹಿತಿ ರವಾನೆ ಮಾಡಿತ್ತು. ಅವರು ಸ್ಥಳಕ್ಕೆ ಬಂದು ಮಗುವನ್ನು ಹೊರತೆಗೆದು ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ, ಮಗು ಆ ವೇಳೆಗಾಗಲೇ ಸಾವು ಕಂಡಿತ್ತು ಎನ್ನಲಾಗಿದೆ. ಹುಟ್ಟಿ ಹೆಚ್ಚು ದಿನವಾಗಿರುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಹೊಸ ಲುಕ್! ಎಲ್ಲರ ಕಣ್ಣು ಹೊಕ್ಕಳಿನಲ್ಲಿದ್ದ ₹2.7 ಕೋಟಿ ಮೌಲ್ಯದ ಡೈಮೆಂಡ್ ಪಿನ್ ಮೇಲಿತ್ತು!
ಮೃತದೇಹವನ್ನು ವಿಮಾನದಲ್ಲಿ ಪ್ರಯಾಣಿಸಿದವರು ಅಥವಾ ಪ್ರಯಾಣಿಸಲು ವಿಮಾನ ನಿಲ್ದಾಣಕ್ಕೆ ಬಂದವರು ಎಸೆದಿರಬಹುದು ಎಂದು ತನಿಖಾ ತಂಡದ ಪ್ರಾಥಮಿಕ ತೀರ್ಮಾನವಾಗಿದೆ. ಭದ್ರತಾ ತಪಾಸಣೆ ಪೂರ್ಣಗೊಳಿಸಿ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದ ಎಲ್ಲ ಜನರ ಮಾಹಿತಿಯನ್ನು ಈಗ ತನಿಖಾ ತಂಡ ಪರಿಶೀಲಿಸುತ್ತಿದೆ. ಟಾಯ್ಲೆಟ್‌ಗೆ ಪ್ರವೇಶಿಸಿದವರ ಸಿಸಿಟಿವಿ ದೃಶ್ಯಗಳನ್ನು ಸಹ ಪರಿಶೀಲಿಸಲಾಗುತ್ತಿದೆ. ಮುಂಬೈಗೆ ಬಂದ ವಿದೇಶಿಯರಲ್ಲಿ ಯಾರಾದರೂ ಈ ಕೃತ್ಯದ ಹಿಂದೆ ಇದ್ದಾರೆಯೇ ಎಂಬ ಅನುಮಾನ ಪೊಲೀಸರಿಗೆ ಇದೆ. ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳ ಸಹಾಯದಿಂದ ಮುಂಬೈ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.
ನವೀ ಮುಂಬೈ ಏರ್‌ಪೋರ್ಟ್ ಬಳಿಯ 5286 ಎಕರೆ ಕೈಗಾರಿಕಾ ಭೂಮಿ ರಿಲಯನ್ಸ್ ಇಂಡಸ್ಟ್ರೀಸ್‌ಗೆ ಕೇವಲ 2200 ಕೋಟಿಗೆ ಮಾರಾಟ