Comedian Kunal Kamra Controversy: ಕುನಾಲ್ ಕಾಮ್ರಾ ಮತ್ತೆ ವಿವಾದ ಸೃಷ್ಟಿಸಿದ್ದಾರೆ. ಈ ಬಾರಿ ಅವರು ನಿರ್ಮಲಾ ಸೀತಾರಾಮನ್ ಮತ್ತು ಸುಧಾ ಮೂರ್ತಿ ಅವರನ್ನ ಟೀಕಿಸಿದ್ದಾರೆ. ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನ ಟೀಕಿಸಿದ್ದ ಸ್ಟ್ಯಾಂಡ್ ಕಾಮಿಡಿಯನ್ ಕುನಾಲ್ ಕಮ್ರಾ, ಇದೀಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಅವರನ್ನು ಟೀಕಿಸಿ ಹಾಡು ಹೇಳಿದ್ದಾರೆ. ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಕುನಾಲ್ ಕಮ್ರಾ ಹಂಚಿಕೊಂಡಿದ್ದಾರೆ. ಶಿಂಧೆ ಕುರಿತ ಹೇಳಿಕೆ ವಿವಾದ ತಣ್ಣಗಾಗುವಷ್ಟರಲ್ಲಿ ಮತ್ತೊಂದು ಹಾಡು ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಡಿಸಿಎಂ ಏಕನಾಥ್ ಶಿಂಧೆ ಅವರನ್ನು ಟೀಕಿಸಿದ್ದಕ್ಕೆ ಕುನಾಲ್ ಕಮ್ರಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕುನಾಲ್ ಅವರ ಫೋನ್ ರೆಕಾರ್ಡ್ ಮತ್ತು ಹಣದ ವ್ಯವಹಾರದ ಬಗ್ಗೆ ತನಿಖೆ ನಡೆಯುತ್ತಿದೆ.
ಈ ಎಲ್ಲಾ ಬೆಳವಣಿಗೆ ನಡುವೆಯೇ ತಮ್ಮ 'ನಯಾ ಭಾರತ್ ಶೋ'ನಲ್ಲಿ ಇನ್ಫೋಸಿಸ್‌ನ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರನ್ನ ಟೀಕಿಸಿದ್ದಾರೆ. ಸುಧಾ ಮೂರ್ತಿ ಅವರ ಸರಳತೆ ಮತ್ತು ನಾರಾಯಣ ಮೂರ್ತಿ ಅವರ ಕೆಲಸದ ಸಂಸ್ಕೃತಿಯ ಬಗ್ಗೆ ತಮ್ಮ ಶೋನಲಲ್ಲಿ ಮಾತನಾಡಿದ್ದಾರೆ.
ತಮ್ಮ 45 ನಿಮಿಷದ ಕಾರ್ಯಕ್ರಮದಲ್ಲಿ ಸುಧಾ ಮೂರ್ತಿ ಅವರ ಸರಳ ಜೀವನಶೈಲಿಯನ್ನ ವ್ಯಂಗ್ಯವಾಡಿದ್ದಾರೆ. "ಮಧ್ಯಮ ವರ್ಗದಂತೆ ನಟಿಸುವ ಶ್ರೀಮಂತರಲ್ಲಿ ಸುಧಾ ಮೂರ್ತಿ ಎಂಬ ಮಹಾನ್ ಮಹಿಳೆ ಇದ್ದಾರೆ. ಅವರು ಸರಳತೆಯ ಪ್ರತಿರೂಪ. ಅವರೇ ಹಾಗೆ ಹೇಳಿಕೊಳ್ಳುತ್ತಾರೆ. ಅವರು ತಮ್ಮ ಸರಳತೆಯ ಬಗ್ಗೆ 50 ಪುಸ್ತಕಗಳನ್ನು ಬರೆದಿದ್ದಾರೆ. ಪ್ರತಿಯೊಂದು ಪುಸ್ತಕದ ವಿಷಯವೂ ಅವರು ಸರಳವಾಗಿದ್ದಾರೆ ಎಂಬುದೇ ಆಗಿದೆ ಎಂದು ಹೇಳಿದ್ದಾರೆ. ನಾರಾಯಣ ಮೂರ್ತಿ ಅವರು ದೇಶದ ಆರ್ಥಿಕ ಅಭಿವೃದ್ಧಿಗಾಗಿ ವಾರಕ್ಕೆ 70 ಗಂಟೆ ಕೆಲಸ ಮಾಡುವ ಸಲಹೆಯನ್ನೂ ಕುನಾಲ್ ಕಾಮ್ರಾ ಟೀಕಿಸಿದ್ದಾರೆ.
ಇದನ್ನೂ ಓದಿ: 64 ವರ್ಷಗಳ ಹಿಂದೆ ಮನೆಯಿಂದ ಓಡಿ ಹೋಗಿದ್ದ ಜೋಡಿಗೆ 80ರ ಹರೆಯದಲ್ಲಿ ಮದುವೆ ಭಾಗ್ಯ
ಸೀತಾರಾಮನ್‌ಗೆ ಸರ್ವಾಧಿಕಾರಿ ಎಂದು ಟೀಕೆ
ಕುನಾಲ್ ಕಾಮ್ರಾ ಬುಧವಾರ ಹೊಸ ಪ್ಯಾರಡಿ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅವರು ನಿರ್ಮಲಾ ಸೀತಾರಾಮನ್ ಅವರನ್ನ ಟೀಕಿಸಿದ್ದಾರೆ. ಬಿಜೆಪಿಯನ್ನ "ಸರ್ವಾಧಿಕಾರಿ" ಎಂದು ಆರೋಪಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರನ್ನ ಟೀಕಿಸಲು ಕಾಮ್ರಾ 'ಮಿಸ್ಟರ್ ಇಂಡಿಯಾ' ಚಿತ್ರದ 'ಹವಾ ಹವಾಯಿ' ಹಾಡಿನ ಪ್ಯಾರಡಿಯನ್ನ ಮಾಡಿದ್ದಾರೆ.
"ಟ್ರಾಫಿಕ್ ಜಾಮ್ ಮಾಡಲು ಇವಳು ಬಂದಳು, ಸೇತುವೆ ಕೆಡವಲು ಇವಳು ಬಂದಳು, ಇದನ್ನ ಸರ್ವಾಧಿಕಾರ ಎನ್ನುತ್ತಾರೆ. ಜನರ ದುಡಿಮೆಯನ್ನ ಲೂಟಿ ಮಾಡಲು ಇವಳು ಬಂದಳು, ಸೀರೆ ಹುಟ್ಟೋ ಅಕ್ಕ ಬಂದಳು, ಸಂಬಳ ಕದಿಯಲು ಇವಳು ಬಂದಳು, ಮಧ್ಯಮ ವರ್ಗವನ್ನ ತುಳಿಯಲು ಇವಳು ಬಂದಳು, ಪಾಪ್‌ಕಾರ್ನ್ ತಿನ್ನಿಸಲು ಇವಳು ಬಂದಳು, ಇದನ್ನ ನಿರ್ಮಲಾ ತಾಯಿ ಎನ್ನುತ್ತಾರೆ" ಎಂದು ಹಾಡಿದ್ದಾರೆ.
ಇದನ್ನೂ ಓದಿ: ಲೋಕಸಭೆಯಲ್ಲಿ ಸೋದರಿ ಪ್ರಿಯಾಂಕಾ ಕೆನ್ನೆ ಗಿಂಡಿದ ರಾಹುಲ್ ಗಾಂಧಿ, ಶಿಸ್ತಿನ ಪಾಠ ಮಾಡಿದ ಸ್ಪೀಕರ್ ಓಂ ಬಿರ್ಲಾ!