ಮದುವೆಗೂ ಮುನ್ನ ದೇಶದ ಎರಡು ಪ್ರಮುಖ ದೇವಸ್ಥಾನಕ್ಕೆ 5 ಕೋಟಿ ದಾನ ನೀಡಿದ ಅನಂತ್‌ ಅಂಬಾನಿ!

By Santosh NaikFirst Published Apr 18, 2024, 11:00 AM IST
Highlights

Anant Ambani ಜುಲೈನಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಚೇರ್ಮನ್‌ ಮುಖೇಶ್‌ ಅಂಬಾನಿಯ ಕಿರಿಯ ಪುತ್ರ,  ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹ ಸಮಾರಂಭ ನಡೆಯಲಿದೆ. ಇದಕ್ಕೂ ಮುನ್ನ ಅನಂತ್‌ ಅಂಬಾನಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.

ಮುಂಬೈ (ಏ.18): ರಿಲಯನ್ಸ್‌ ಇಂಡಸ್ಟ್ರೀಸ್‌ನ ಚೇರ್ಮನ್‌ ಮುಖೇಶ್‌ ಅಂಬಾನಿ ಹಾಗೂ ನೀತಾ ಅಂಬಾನಿಯ ಕಿರಿಯ ಪುತ್ರ ಅನಂತ್‌ ಅಂಬಾನಿ ದೈವಭಕ್ತ. ಚಿಕ್ಕ ವಯಸ್ಸಿನಲ್ಲಿ, ಅವರು ದಾನ ಮತ್ತು ಭೂಮಿಯಲ್ಲಿ ಬದುಕುವ ಮಹತ್ವವನ್ನು ಅರ್ಥ ಮಾಡಿಕೊಂಡಿದ್ದಾರೆ. ಒಂದು ತಿಂಗಳ ಹಿಂದೆ ಗುಜರಾತ್‌ನ ಜಾಮ್‌ನಗರದಲ್ಲಿ ಇವರ ಅದ್ದೂರಿ ಪ್ರೀ ವೆಡ್ಡಿಂಗ್‌ ಸಮಾರಂಭ ಕೂಡ ನಡೆದಿತ್ತು. ಇದೇ ಸಮಯದಲ್ಲಿ ತಮ್ಮ ಕನಸಿನ ಯೋಜನೆಯಾವ ವಂತರಾವನ್ನು ಎಲ್ಲರಿಗೂ ಪರಿಚಯಿಸಿದ್ದರು. ಆನೆ ಸೇರಿದಂತೆ ಗಾಯಗೊಂಡ ಕಾಡುಪ್ರಾಣಿಗಳಿಗೆ ವಿಶ್ವದರ್ಜೆಯ ವ್ಯವಸ್ಥೆಗಳನ್ನು ಈ ಕೇಂದ್ರದಲ್ಲಿ ನೀಡಲಾಗುತ್ತದೆ. ವಂತರಾ ಪ್ರಾಜೆಕ್ಟ್‌ಅನ್ನು ನೋಡಿದ ಬಳಿಕ ಅನಂತ್‌ ಅಂಬಾನಿ ಅವರ ವೈಲ್ಡ್‌ವೈಫ್‌ ಪ್ರೀತಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 

ಕಾಡುಪ್ರಾಣಿಗಳ ಮೇಲಿನ ಆಸಕ್ತಿ ಮಾತ್ರವಲ್ಲ, ಅನಂತ್‌ ಅಂಬಾನಿ ದೈವಭಕ್ತ. ನವರಾತ್ರಿ ಸಮಯದಲ್ಲಿ ಉಪವಾಸವನ್ನೂ ಅವರು ಆಚರಿಸುತ್ತಾರೆ. ಮದುವೆಗೂ ಮುನ್ನ ಹಲವು ದೇವಸ್ಥಾನಳಿಗೆ ಭೇಟಿ ನೀಡುತ್ತಿರುವ ಅನಂತ್‌ ಅಂಬಾನಿ ಇತ್ತೀಚೆಗೆ ಒಡಿಶಾದ ಪುರಿ ಜಗನ್ನಾತ ದೇವಸ್ಥಾನ ಹಾಗೂ ಅಸ್ಸಾಂನ ಮಾ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಎರಡೂ ದೇವಸ್ಥಾನಗಳಿಗೆ ದೊಡ್ಡ ಪ್ರಮಾಣದ ದಾನವನ್ನು ಮಾಡಿದ್ದಾರೆ.

ಈ ದೇವಾಲಯವನ್ನು ಭಾರತದ ಅತ್ಯುನ್ನತ ಮತ್ತು ಅತ್ಯಂತ ಪ್ರಸಿದ್ಧವಾದ ಶಕ್ತಿ ಪೀಠಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಚೈತ್ರ ನವರಾತ್ರಿಯ ಅಷ್ಟಮಿಯ ದಿನವಾದ ಮಂಗಳವಾರ ಈ ಎರಡೂ ದೇವಸ್ಥಾನಕ್ಕೆ ಭೇಟಿ ನೀಡಿದ ರಿಲಯನ್ಸ್‌ ವೆಂಚರ್ಸ್‌ ಲಿಮಿಟೆಡ್‌ನ ನಿರ್ದೇಶಕ ಅನಂತ್‌ ಅಂಬಾನಿ ಎರಡೂ ದೇವಸ್ಥಾನಗಳಿಗೆ ತಲಾ 2.51 ಕೋಟಿ ರೂಪಾಯಿಯ ದಾನ ಮಾಡಿದ್ದಾರೆ.

ಮೊದಲಿಗೆ ಅಸ್ಸಾಂನ ಗುವಾಹಟಿಗೆ ಭೇಟಿ ನೀಡಿದ ಅನಂತ್‌ ಅಂಬಾನಿ, ಏರ್‌ಪೋರ್ಟ್‌ನಿಂದ ನೇರವಾಗಿ ದೇವಸ್ಥಾನಕ್ಕೆ ತಲುಪಿದರು. ಕಾಮಾಕ್ಯವು ದೇಶದ ಅತ್ಯುನ್ನತ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ದೇವಾಲಯದ ಪರಿಕ್ರಮ ಮಾಡಿದ ಅನಂತ್‌ ಅಂಬಾನಿ,  ದೇವಾಲಯದ ಆವರಣದಲ್ಲಿ ಪಾರಿವಾಳಗಳನ್ನು ಬಿಡುಗಡೆ ಮಾಡಿದರು. ನೀಲಾಚಲ ಬೆಟ್ಟದಲ್ಲಿರುವ ಮಾ ಬಗಲಮುಖಿ ದೇವಸ್ಥಾನಕ್ಕೂ ತೆರಳಿ ಪೂಜೆ ಸಲ್ಲಿಸಿದರು.

ದೀಪಿಕಾ ಪಡುಕೋಣೆ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ 820000 ಕೋಟಿ ಸಂಸ್ಥೆಯ ಒಡತಿ ಇಶಾ ಅಂಬಾನಿ!

ಫೆಬ್ರವರಿಯಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಆಚರಣೆಗಳ ಭಾಗವಾಗಿ, ಅಂಬಾನಿ ಕುಟುಂಬವು ಗುಜರಾತ್‌ನ ಜಾಮ್‌ನಗರದಲ್ಲಿರುವ ವಿಸ್ತಾರವಾದ ದೇವಾಲಯದ ಸಂಕೀರ್ಣದಲ್ಲಿ 14 ಹೊಸ ದೇವಾಲಯಗಳನ್ನು ನಿರ್ಮಾಣ ಮಾಡಿದೆ. ಮಾರ್ಚ್ 1 ರಿಂದ 3 ರವರೆಗೆ ಜಾಮ್‌ನಗರ ನಗರದಲ್ಲಿ ಮೂರು ದಿನಗಳ ವಿವಾಹ ಪೂರ್ವ ಸಮಾರಂಭದಲ್ಲಿ ದೇವಸ್ಥಾನವನ್ನು ಕಟ್ಟಿದ ಕಾರ್ಮಿಕರಿಗೆ ಹಾಗೂ ಊರ ನಾಗರೀಕರಿಗೆ ಭೋಜನ ಕೂಟ ಏರ್ಪಡಿಸಿತ್ತು.

ಭಾಗಲ್ಪುರಿ ರೇಷ್ಮೆ ಸೀರೆಯಲ್ಲಿ ಮಿಂಚಿದ ನೀತಾ ಅಂಬಾನಿ, ನೆಕ್ಲೇಸ್ ಬೆಲೆ ಎಷ್ಟೂಂತ ತಲೆಕೆಡಿಸಿಕೊಂಡ ನೆಟ್ಟಿಗರು!

ಏಪ್ರಿಲ್ 11ರಂದು, ಅನಂತ್ ಅಂಬಾನಿ ಅವರು ಭರತ್ ಜೆ ಮೆಹ್ರಾ ಅವರಿಂದ ವಿಶೇಷ ಉಡುಗೊರೆಯನ್ನು ಪಡೆದರು. ಅನಂತ್‌ ಅಂಬಾನಿ ಅವರ ಜನ್ಮದಿನದ (ಏಪ್ರಿಲ್‌10) ಸಮಾರಂಭದಲ್ಲಿ ಭಾಗಿಯಾಗಿದ್ದ ಅವರಿಗೆ ಭರತ್‌ ಮೆಹ್ರಾ,  ಖ್ಯಾತ ಕಲಾವಿದ ಎಂ.ಎಫ್ ಹುಸೇನ್ ಅವರು ರಚಿಸಿದ ಗಣಪತಿ ವರ್ಣಚಿತ್ರವನ್ನು ಉಡುಗೊರೆಯಾಗಿ ನೀಡಿದರು. ಭರತ್ ಅವರಿ ಅನಂತ್ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಗಣೇಶನ ಭಕ್ತನಾಗಿರುವ ಅನಂತ್ ಅವರು ಅಮೂಲ್ಯವಾದ ಉಡುಗೊರೆಯನ್ನು ಸಂಭ್ರಮದಿಂದಲೇ ಸ್ವೀಕರಿಸಿದ್ದರು.

click me!