
ಶ್ರೀನಗರ(ಏ.17) ಲೋಕಸಭಾ ಚುನಾವಣೆ ಅಖಾಡ ರಂಗೇರುತ್ತಿದೆ. ಅಭ್ಯರ್ಥಿಗಳ ಪ್ರಚಾರ, ಪ್ರತಿಸ್ಪರ್ಧಿಗಳ ವಿರುದ್ದ ವಾಕ್ಸಮರ ಜೋರಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅನಂತನಾಗ್-ರಜೌರಿ ಕ್ಷೇತ್ರದಿಂದ ಅಖಾಡಕ್ಕಿಳಿದಿರುವ ಡೆಮಾಕ್ರಟಿಕ್ ಪ್ರೊಗೆಸ್ಸ್ ಅಜಾದ್ ಪಾರ್ಟಿ(DPAP) ಮುಖ್ಯಸ್ಥ ಗುಲಾಮ್ ನಬಿ ಆಜಾದ್ ಮಹತ್ವದ ಘೋಷಣೆ ಮಾಡಿದ್ದಾರೆ. ಅನಂತನಾಗ್-ರಜೌರಿ ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಮೆಹಬೂಬಾ ಮುಫ್ತಿ ವಿರುದ್ಧ ಕಣಕ್ಕಿಳಿದಿದ್ದ ಅಜಾದ್, ಭಾರಿ ಅಂತರದ ಗೆಲುವಿನ ವಿಶ್ವಾಸದಲ್ಲಿದ್ದರು. ಆದರೆ ದಿಢೀರ್ ಅಖಾಡದಿಂದ ಹಿಂದೆ ಸರಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಅನಂತನಾಗ್ ರಜೌರಿ ಕ್ಷೇತ್ರದಿಂದ ಸ್ಪರ್ಧೆ ಘೋಷಿಸಿದ್ದ ಅಜಾದ್ ಇದೀಗ ಹಿಂದೆ ಸರಿದಿದ್ದಾರೆ. ಗುಲಾಮ್ ನಬಿ ಅಜಾದ್ ಬದಲು ಅನಂತನಾಗ್ ರಜೌರಿ ಕ್ಷೇತ್ರದಿಂದ DPAP ಪಕ್ಷದ ಮೊಹಮ್ಮದ್ ಸಲೀಮ್ ಪರೇಯನ್ನು ಕಣಕ್ಕಿಳಿಸಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ DPAP ಪಕ್ಷದ ಕಾಶ್ಮೀರ ಅಧ್ಯಕ್ಷ ಮೊಹಮ್ಮದ್ ಅಮಿನ್ ಭಟ್ ಸ್ಪಷ್ಟಪಡಿಸಿದ್ದಾರೆ. ಅಜಾದ್ ಸೇರಿ ಹಿರಿಯ ಮುಖಂಡರ ಜೊತೆ ಸುದೀರ್ಘ ಚರ್ಚೆ ಬಳಿಕ ಅಜಾದ್ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಈ ಸ್ಥಾನದಲ್ಲಿ ಪಕ್ಷದ ನಾಯಕ ಅಡ್ವೋಕೇಟ್ ಮೊಹಮ್ಮದ್ ಸಲೀಮ್ ಪರೇಯನ್ನು ಕಣಕ್ಕಿಳಿಸಲಾಗುತ್ತದೆ ಎಂದಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಮೊಬೈಲ್ ಬಿಲ್ 5000 ದಾಟುತ್ತಿತ್ತು, ಕಾಂಗ್ರೆಸ್ ಕುಟುಕಿದ ಮೋದಿ!
ಅನಂತನಾಗ್-ರಜೌರಿ ಕ್ಷೇತ್ರ ಭಾರಿ ಕುತೂಹಲ ಕೆರಳಿಸಿತ್ತು. ಇದಕ್ಕೆ ಮುಖ್ಯಕಾರಣ ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ಗುಲಾಮ್ ನಬಿ ಆಜಾದ್ ನಡುವಿನ ಸ್ಪರ್ಧೆಯಿಂದ. ಇದೀಗ ಅಜಾದ್ ಹಿಂದೆ ಸರಿದಿರುವ ಕಾರಣ ಮುಪ್ತಿ ಗೆಲುವು ಸುಲಭ ಎನ್ನಲಾಗುತ್ತಿದೆ. ಇತ್ತೀಚೆಗೆ ಮುಫ್ತಿ ನೀಡಿದ ಹೇಳಿಕೆಯೂ ಇದೀಗ ವೈರಲ್ ಆಗುತ್ತಿದೆ. ಪ್ರತಿಸ್ಪರ್ಧಿಗಳ ಕುರಿತು ಮಾತನಾಡಿದ ಮುಪ್ತಿ, ಒಬ್ಬರು ಇನ್ನೊಬ್ಬರ ಮೇಲೆ ದೂಷಿಸುವ ಕಾಲವಲ್ಲ, ನಾವು ಒಗ್ಗಾಟ್ಟಾಗಿ ಹೋರಾಡಿ ಇಂಡಿಯಾ ಒಕ್ಕೂಟವನ್ನು ಅಧಿಕಾರಕ್ಕೆ ತರಬೇಕಿದೆ ಎಂದಿದ್ದರು. ಈ ಹೇಳಿಕೆ ಬಳಿಕ ಇದೀಗ ಅಜಾದ್ ಕಣದಿಂದ ಹಿಂದಿ ಸರಿದಿರುವುದು ಕೆಲ ಚರ್ಚೆಗಳಿಗೆ ಕಾರಣಾಗಿದೆ.
ಕಾಂಗ್ರೆಸ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಗೆ ಬೇಸತ್ತು ಪಕ್ಷ ತೊರೆದ ಹಿರಿಯ ನಾಯಕ ಹಾಗೂ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ತಮ್ಮದೇ ಸ್ವಂತ ಪಕ್ಷ ರಚಿಸಿಕೊಂಡು ಭಾರಿ ಸಂಚಲನ ಸೃಷ್ಟಿಸಿದ್ದರು. ಆದರೆ ಕಣದಿಂದ ಹಿಂದೆ ಸರಿಯುವ ಮೂಲಕ ಅಚ್ಚರಿ ನೀಡಿದ್ದಾರೆ.
ಚುನಾವಣೆ ಮುಗಿದ 15 ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ; ಹೊಸ ಬಾಂಬ್ ಸಿಡಿಸಿದ ಶಾಸಕ ಯತ್ನಾಳ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ