ಅಮ್ಮ One ಅಂದ್ರೆ, ಮಗ Two ಅಂತಿದ್ದಾನೆ, ಅಯ್ಯೋ ಎಷ್ಟು ಮುದ್ದು ಈ ಕಂದಮ್ಮ ಎಂದ ನೆಟ್ಟಿಗರು

By Mahmad Rafik  |  First Published Oct 7, 2024, 2:21 PM IST

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ತಾಯಿ 'ಒನ್' ಅಂದ್ರೆ 'ಟು' ಎಂದು ಹೇಳುತ್ತಿರುವ ಮಗುವಿನ ಮುಗ್ಧತೆ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತಿದೆ. 


ಬೆಂಗಳೂರು: ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸಿಗುವ ವಿಡಿಯೋಗಳು ಇಡೀ ದಿನವನ್ನು ಖುಷಿಯಾಗಿರಿಸುತ್ತವೆ. ಇಡೀ ದಿನ ವಿಡಿಯೋ ನೆನಪು ಆಗಿ ನಗು ಬರುತ್ತಿರುತ್ತದೆ. ಇಂತಹ ವಿಡಿಯೋಗಳು ಕೆಲವೇ ಸಮಯದಲ್ಲಿ ವೈರಲ್ ಆಗುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿರುತ್ತವೆ. ಮಕ್ಕಳ ತುಂಟಾಟ, ಅವರು ಮಾಡಿಕೊಳ್ಳುವ ಎಡವಟ್ಟುಗಳು, ತೊದಲು ಮಾತುಗಳು ನೆಟ್ಟಿಗರಿಗೆ ಇಷ್ಟವಾಗುತ್ತವೆ. ಒಂದಿಷ್ಟು ಮಕ್ಕಳು ತಮ್ಮ ಮೆಮೊರಿ ಪವರ್‌ನಿಂದಲೇ ಸೋಶಿಯಲ್ ಮೀಡಿಯಾದಿಂದ ಲಕ್ಷಾಂತರ ಫಾಲವರ್ಸ್‌ಗಳನ್ನು ಹೊಂದಿರುತ್ತಾರೆ. 

ಕೆಲ ಮಕ್ಕಳು ಹೋಮ್ ವರ್ಕ್ ಮಾಡಲು ಹಿಂದೇಟು ಹಾಕಲು ಹೇಳುವ ನೆಪದ ವಿಡಿಯೋಗಳು ನೆಟ್ಟಿಗರನ್ನು ನಗೆಗಡಿಲಿನಲ್ಲಿ ತೇಲಿಸುತ್ತವೆ. ಇದೀಗ ಇಂತಹವುದೇ ಒಂದು ಕ್ಯೂಟ್ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮಗುವಿನ ಮುಗ್ಧತೆಗೆ ಫಿದಾ ಆಗಿದ್ದಾರೆ. ಸದ್ಯ ಈ ವಿಡಿಯೋ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದು, ಶೇರ್ ಮಾಡಿಕೊಳ್ಳತ್ತಿದ್ದಾರೆ. ವೈರಲ್ ಆಗಿರುವ ಬಾಲಕನ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ ಗಳು ರಿಕ್ರಿಯೇಟ್ ಮಾಡುತ್ತಿದ್ದಾರೆ. 

Tap to resize

Latest Videos

20 ವರ್ಷದ ನಂತ್ರ ಕನಸಲ್ಲಿ ಬಂದು ಸಮಾಧಿ ಸರಿ ಮಾಡು ಮಗನೇ ಎಂದ ತಂದೆ; ಗೋರಿ ತೋಡಿದ್ರೆ ಊರಿಗೆ ಊರೇ ಶಾಕ್!

ಆರತಿ ರೋಹಿತ್ (Aarti rohit yadav) ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬಾಲಕನ ವಿಡಿಯೋ ಪೋಸ್ಟ್ ಮಾಡಿಕೊಳ್ಳಲಾಗಿದೆ. ಬಾಲಕನಿಗೆ ಆತನ ತಾಯಿ ಕಾಗುಣಿತ ಹೇಳಿಕೊಡುತ್ತಿರೋದನ್ನು ವಿಡಿಯೋದಲ್ಲಿ ನೋಡಬಹುದು. ನಾನು ಹೇಳಿದಂತೆ ಹೇಳುವಂತೆ ತಾಯಿ ಹೇಳುತ್ತಾರೆ. ತಾಯಿ 'ಒನ್' ಅಂತ ಹೇಳಿದ್ರೆ ಬಾಲಕ 'ಟು' ಎಂದು ಹೇಳುತ್ತಾರೆ. ಮೊದಲು 'ಒನ್' ಹೇಳಿ ನಂತರ 'ಟು' ಅನ್ನಬೇಕೆಂದು ಅಮ್ಮ ತಿಳಿಸುತ್ತಾರೆ. ಅಮ್ಮನ ಮಾತಿಗೆ ತಲೆಯಾಡಿಸಿದ ಬಾಲಕ, ತಾಯ 'ಒನ್' ಅಂದ್ಕೂಡಲೇ 'ಟು' ಎಂದು ಹೇಳುತ್ತಾನೆ. ತಾಯಿ ನಗುತ್ತಲೇ 'ಒನ್' ಯಾರು ಹೇಳಬೇಕು ಅಂದಾಗ ಬಾಲಕ ಅಳಲು ಆರಂಭಿಸುತ್ತಾನೆ. 

ಇದಾದ ಬಳಿಕ ತಾಯಿ O.N.E ಅಂತ ಸ್ಪೆಲ್ಲಿಂಗ್ ಹೇಳಿ ಒನ್ ಅಂತರೆ. ಆದ್ರೆ ಬಾಲಕ ಮಾತ್ರ ಸ್ಪೆಲ್ಲಿಂಗ್ ಹೇಳಿ 'ಒನ್' ಅನ್ನದೇ ಮತ್ತೆ 'ಟು' ಅಂತಾನೆ. ಬಾಲಕನ ಕ್ಯೂಟ್ ವಿಡಿಯೋ ಕಂಡು ನೆಟ್ಟಿಗರು ಕಮೆಂಟ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ತಾಯಿ ಪದೇ ಪದೇ ಒನ್ ಅಂದರೂ ಬಾಲಕ ಮಾತ್ರ ಟು ಎಂದೇ ಹೇಳಿದ್ದಾನೆ. ಮುಂದೆ ಟು ಬಗ್ಗೆಯೂ ಮುಂದೆ ನೋಡೋಣ. ಮೊದಲು ಒನ್ ಹೇಳುವಂತೆ ತಾಯಿ ಮಗನಿಗೆ ಹೇಳುತ್ತಾರೆ. ಕೆಲವರು ಕಮೆಂಟ್ ಮಾಡಿ, ಮಕ್ಕಳು ಹೀಗೆ ಮುದ್ದಾಗಿ ತಪ್ಪು ಮಾಡಿದ್ರೆ ಏಟು ಕೊಡಲು ಸಹ ಮನಸ್ಸು ಬರಲ್ಲ. ನಮ್ಮ ಮಕ್ಕಳು ಸಹ ಹೀಗೆ ಮಾಡುತ್ತವೆ ಎಂದು ಬರೆದುಕೊಂಡಿದ್ದಾರೆ.

ಒಂಟಿ ಮಹಿಳೆ ಮನೆಗೆ ನುಗ್ಗಿದ ಕಳ್ಳ ಪಾತ್ರೆ, ಬಟ್ಟೆ ತೊಳೆದು ಅಡುಗೆ ಮಾಡಿಟ್ಟು ಪತ್ರ ಬರೆದಿಟ್ಟು ಹೋದ!

click me!