ಮೋದಿ ನಿಮಗಿಂತ ಉತ್ತಮ ನಟ, ಕಾಪಿ ಸಾಧ್ಯವಿಲ್ಲ; ಸುರೇಶ್ ಗೋಪಿ ಸ್ಚಚ್ಚ ಅಭಿಯಾನಕ್ಕೆ ಕಾಂಗ್ರೆಸ್ ವ್ಯಂಗ್ಯ!

By Chethan Kumar  |  First Published Oct 7, 2024, 12:34 PM IST

ಪ್ರಧಾನಿ ಮೋದಿಯನ್ನು ನಕಲು ಮಾಡಲು ನಿಮಗೆ ಸಾಧ್ಯವಿಲ್ಲ, ಕಾರಣ ಮೋದಿ ನಿಮಗಿಂತ ಉತ್ತಮ ನಟ ಎಂದು ಸಂಸದ ಸುರೇಶ್ ಗೋಪಿ ಸ್ವಚ್ಚತಾ ಕಾರ್ಯಕ್ಕೆ ಕಾಂಗ್ರೆಸ್ ವ್ಯಂಗ್ಯವಾಡಿದೆ. 


ತ್ರಿಶೂರ್(ಅ.07) ಕೇರಳ ಬಿಜೆಪಿಯ ಏಕೈಕ ಸಂಸದ, ಕೇಂದ್ರ ಸಚಿವ ಸುರೇಶ್ ಗೋಪಿ ಸ್ವಚ್ಚತಾ ಅಭಿಯಾನಕ್ಕೆ ಕಾಂಗ್ರೆಸ್ ವ್ಯಂಗ್ಯವಾಡಿದೆ. ಪ್ರಧಾನಿ ನರೇಂದ್ರ ಮೋದಿ ಸ್ವಚ್ಚ ಭಾರತ ಅಭಿಯಾನದಡಿಯಲ್ಲಿ ಸುರೇಶ್ ಗೋಪಿ ತಮ್ಮ ಕ್ಷೇತ್ರದ ಕೆಲ ಭಾಗದಲ್ಲಿ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಈ ವಿಡಿಯೋವನ್ನು ಟ್ವೀಟ್ ಮಾಡಿವು ಕೇರಳ ಕಾಂಗ್ರೆಸ್, ಸುರೇಶ್ ಗೋಪಿ ಸ್ವಚ್ಚತಾ ಕಾರ್ಯವನ್ನು ವ್ಯಂಗ್ಯವಾಡಿದೆ. ಸುರೇಶ್ ಗೋಪಿ ಪ್ರಖ್ಯಾತ ಚಿತ್ರನಟ, ಸಿನಿಮಾ ಕ್ಷೇತ್ರದಿಂದ ಬಂದು ರಾಜಕೀಯ ಪ್ರವೇಶಿಸಿದ್ದರೂ, ನಿಮಗೆ ಮೋದಿಯನ್ನು ನಕಲು ಮಾಡಲು ಸಾಧ್ಯವಿಲ್ಲ. ಕಾರಣ ಮೋದಿ ನಿಮಗಿಂತ ಉತ್ತಮ ನಟ ಎಂದು ವ್ಯಂಗ್ಯವಾಡಿದೆ. ಆದರೆ ಕೇರಳ ಕಾಂಗ್ರೆಸ್ ಟ್ವೀಟ್‌ಗೆ ವಿರೋಧಗಳು ವ್ಯಕ್ತವಾಗಿದೆ.

ತ್ರಿಶೂರ್ ಸಂಸದ ಹಾಗೂ ನಟ ಸುರೇಶ್ ಗೋಪಿ ಕೇಂದ್ರದ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಸದನಾಗುವ ಮೊದಲು ಸಾಮಾಜಿಕ ಕಾರ್ಯಗಳ ಮೂಲಕ ಕೇರಳದಲ್ಲಿ ಜನಪ್ರಿಯವಾಗಿರುವ ಸುರೇಶ್ ಗೋಪಿ ಈ ಬಾರಿಯ ಸ್ಚಚ್ಚ ಭಾರತ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ತಮ್ಮ ಕ್ಷೇತ್ರದ ಹಲವು ಭಾಗದಲ್ಲಿ, ಪ್ರಮುಖವಾಗಿ ಸಮುದ್ರ ಕಿನಾರೆಗಳಲ್ಲಿನ ಕಸ ಕಡ್ಡಿಗಳು, ಪ್ಲಾಸ್ಟಿಕ್ ಬಾಟಲ್‌ಗಳನ್ನು ಹೆಕ್ಕಿ ಸ್ವಚ್ಚಗೊಳಿಸಿದ್ದಾರೆ. 

Tap to resize

Latest Videos

undefined

ಕ್ಯಾನ್ಸರ್‌ನಿಂದ ಬೀದಿಗೆ ಬಿದ್ದ ಕುಟುಂಬದ ಬ್ಯಾಂಕ್ ಸಾಲ ತೀರಿಸಿ ಮನೆ ಹಿಂದಿರುಗಿಸಿದ ಕೇಂದ್ರ ಸಚಿವ!

ಸುರೇಶ್ ಗೋಪಿ ಸ್ವಚ್ಚ ಭಾರತ ಅಭಿಯಾನ ಹಾಗೂ ಜನರಲ್ಲಿ ಜಾಗೃತಿ ಮೂಡಿಸಿದ ಕಾರ್ಯಕ್ಕೆ  ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಕೇರಳ ಕಾಂಗ್ರೆಸ್, ಸುರೇಶ್ ಗೋಪಿ ಸ್ವಚ್ಚತಾ ಕಾರ್ಯದ ವಿಡಿಯೋವನ್ನು ಪೋಸ್ಟ್ ಮಾಡಿ ವ್ಯಂಗ್ಯವಾಡಿದೆ. ನೀವು ಸಿನಿಮಾ ಕ್ಷೇತ್ರದಿಂದ ಬಂದಿರಬಹುದು, ಆದರೆ ನಿಮಗೆ ಮೋದಿಜಿಯನ್ನು ಕಾಪಿ ಮಾಡಲು ಸಾಧ್ಯವಿಲ್ಲ, ಯಾಕೆಂದರೆ ಮೋದಿ ನಿಮಗಿಂತ ಉತ್ತಮ ನಟ. ಮೋದಿ ಸ್ವಚ್ಚತಾ ಅಭಿಯಾನದಲ್ಲಿ ತಮ್ಮ ಕೈಗಳಲ್ಲೇ ಕಸ ಕಡ್ಡಿ, ಪ್ಲಾಸ್ಟಿಕ್ ಬಾಟಲಿ ಹೆಕ್ಕುತ್ತಾರೆ. ನೆನಪಿಡಿ, ಈ ಸ್ವಚ್ಚ ಭಾರತ ಅಭಿಯಾನದ ನಾಟಕ ಏಕಪಾತ್ರ ಅಭಿನಯವಾಗಿದೆ. ಆದರೆ ನೀವು ಇಲ್ಲಿ ಹಲವು ನಟರನ್ನು ಸೇರಿಸಿಕೊಂಡು ಮಾಡಿದ್ದೀರಿ ಎಂದು ಕಾಂಗ್ರೆಸ್ ಟೀಕಿಸಿದೆ.

 

Even if you are from the film industry, you can't copy Modiji, a better actor any day. At least he used to pick up plastic bottles (clean props) with his bare hands.

Remember this Swacch Bharat skit is generally a solo act. The presence of too many actors spoils the scene. pic.twitter.com/2BN9oEGRbM

— Congress Kerala (@INCKerala)

 

ಕಾಂಗ್ರೆಸ್ ಟ್ವೀಟ್‌ಗೆ ಪರ ವಿರೋಧಗಳು ವ್ಯಕ್ತವಾಗಿದೆ. ಹಲವರು ಕಾಂಗ್ರೆಸ್ ಟ್ವೀಟ್ ಬೆಂಬಲಿಸಿದ್ದಾರೆ. ಮೋದಿ ಹಾಗೂ ಬಿಜೆಪಿ ನಾಯಕರು ಮಾಡುತ್ತಿರುದು ನಾಟಕ. ಅವರಿಗೆ ಈ ದೇಶದ, ಇಲ್ಲಿಯ ಜನ, ಪರಿಸರದ ಬಗ್ಗೆ ಕಾಳಜಿ ಇಲ್ಲ. ತ್ರಿಶೂರ್ ಜನತಗೆ ಈ ನಾಟಕ ನೋಡು ದೌರ್ಬಾಗ್ಯ ಬಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇತ್ತ ಹಲವರು ಸುರೇಶ್ ಗೋಪಿ ಪರವಾಗಿ ಟ್ವೀಟ್ ಮಾಡಿದ್ದಾರೆ. ಸ್ವಚ್ಚ ಭಾರತ ಒಂದು ಅಭಿಯಾನ, ಪ್ರತಿಯೊಬ್ಬ ಭಾರತೀಯನಲ್ಲಿ ಸ್ವಚ್ಚತೆ ಜಾಗೃತೆಗೊಳ್ಳಬೇಕು. ಈ ಕೆಲಸವನ್ನು ಅಭಿಯಾನದ ಮೂಲಕ ನಾಯಕರು ಮಾಡುತ್ತಿದ್ದಾರೆ. ಕಾಂಗ್ರೆಸ್‌ಗೆ ಭಾರತವನ್ನು ಸ್ವಚ್ಚಗೊಳಿಸಲು ಸಾಧ್ಯವಾಗಿಲ್ಲ, ಗಂಗಾ ನದಿ ಶುದ್ಧೀಕರಣಗೊಳಿಸಲು ಸಾಧ್ಯವಾಗಿಲ್ಲ. ಇಷ್ಟೇ ಯಾಕೆ 60 ವರ್ಷದಲ್ಲಿ ಶೌಚಾಲಯ ನಿರ್ಮಿಸಿಕೊಡಲು ಸಾಧ್ಯವಾಗಿಲ್ಲ. ಆರೋಗ್ಯ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ. ಕಾರಣ ಗಾಂಧಿ ಕುಟುಂಬ ಈ ಎಲ್ಲಾ ಹಣವನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡಿತ್ತು ಎಂದು ಟ್ವೀಟ್ ಮಾಡಿದ್ದಾರೆ.

ಸೆಕ್ಸ್‌ ಹಗರಣದ ಆರೋಪಿ ಪರ ಕೇಂದ್ರ ಸಚಿವ ಗೋಪಿ ಬ್ಯಾಟಿಂಗ್‌: ಇದು ಅವರ ವೈಯಕ್ತಿಕ ಹೇಳಿಕೆ ಎಂದ ಬಿಜೆಪಿ

click me!