68ಕ್ಕೆ ಫಿಟ್ನೆಸ್ ಮಂತ್ರ: ಜಿಮ್‌ನಲ್ಲಿ ವರ್ಕ್ಔಟ್ ಶುರು ಮಾಡಿದ ಅಮ್ಮ... ವೀಡಿಯೋ ವೈರಲ್‌

By Anusha Kb  |  First Published Aug 1, 2023, 1:28 PM IST

ಇಲ್ಲೊಬ್ಬರು ತಾಯಿ ತಮ್ಮ 68ನೇ ವಯಸ್ಸಿಗೆ ಜಿಮ್‌ನಲ್ಲಿ ಹೋಗಿ ವ್ಯಾಯಾಮ ಮಾಡುತ್ತಿದ್ದಾರೆ. ಅವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


ಬಹುತೇಕ ಮಹಿಳೆಯರು ಅದರಲ್ಲೂ ವಿಶೇಷವಾಗಿ ಅಮ್ಮಂದಿರು ತಮಗಾಗಿ ತಮ್ಮ ಆರೋಗ್ಯಕ್ಕಾಗಿ ಸಮಯ ವ್ಯಯಿಸುವುದು ಬಲು ಅಪರೂಪ. ಅವರ ಆದ್ಯತೆ ಯಾವಾಗಲೂ ಮೊದಲು ಕುಟುಂಬ, ನಂತರ ತನ್ನ ಆರೋಗ್ಯ ಹವ್ಯಾಸ ಇತ್ಯಾದಿ. ವಿವಾಹದ ನಂತರ ಮಕ್ಕಳು ಸಂಸಾರ ಎಂದು ಬಹುತೇಕ ಸಮಯವನ್ನು ಮಕ್ಕಳ ಹಾಗೂ ಪತಿ, ಅತ್ತೆ ಮಾವ ಹಾಗೂ ಇಡೀ ಕುಟುಂಬದ ಪಾಲನೆಯಲ್ಲೇ ತೊಡಗುವ  ಮಹಿಳೆಯರಿಗೆ ಕೆಲವು ಕುಟುಂಬಗಳಲ್ಲಂತೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಮಯವೇ ಇರುವುದಿಲ್ಲ, ತಾನೇ ಸ್ವತಃ ಅನಾರೋಗ್ಯಕ್ಕೀಡಾದರೂ ಅಮ್ಮನಿಗೆ ವಿಶ್ರಾಂತಿ ಎಂಬುದಿರುವುದಿಲ್ಲ, ಆಕೆ ದಿನವೂ ಮಾಡಬೇಕಾದ ಕೆಲಸಗಳನ್ನು ಮಾಡುತ್ತಾ ತನ್ನ ಆರೋಗ್ಯವನ್ನು ನಿರ್ಲಕ್ಷಿಸುತ್ತಾ ದಿನ ದೂಡುತ್ತಾಳೆ. ಇಂತಹ ಲಕ್ಷಾಂತರ ಅಮ್ಮಂದಿರಿಗೆ ಮಕ್ಕಳು ದೊಡ್ಡವರಾಗಿ ಉದ್ಯೋಗಕ್ಕೆ ಹೋದಾಗಲೇ ಅಥವಾ ವಿವಾಹವಾಗಿ ದೂರ ಹೋದಾಗಲೇ ತುಸು ವಿಶ್ರಾಂತಿ ಎಂದರೆ ತಪ್ಪಾಗದು. ಮಕ್ಕಳು ಶಿಕ್ಷಣ, ವೃತ್ತಿ ಎಂದರಸಿ ದೂರ ಹೋದಾಗಲೇ ಅಮ್ಮನಿಗೆ ಏಕತಾನತೆ ಕಾಡಲಾರಂಭಿಸುತ್ತದೆ. ಹೊತ್ತು ಕಳೆಯುವುದರ ಜೊತೆ ವಯಸ್ಸಾದ ನಂತರ ಕಾಡುವ ಆರೋಗ್ಯ ಸಮಸ್ಯೆಯ ಜೊತೆ ಉತ್ತಮ ಆರೋಗ್ಯಕ್ಕೆ ಆಕೆ ಬೇರೆ ಚಟುವಟಿಕೆಯತ್ತ ತೊಡಗಲು ಮನಸ್ಸು ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬರು ತಾಯಿ ತಮ್ಮ 68ನೇ ವಯಸ್ಸಿಗೆ ಜಿಮ್‌ನಲ್ಲಿ ಹೋಗಿ ವ್ಯಾಯಾಮ ಮಾಡುತ್ತಿದ್ದಾರೆ. ಅವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಅಂದಹಾಗೆ ಈ ವೀಡಿಯೋವನ್ನು weightliftermummy ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ Choudhary Ajay Sangwan ಎಂಬುವವರು ಪೋಸ್ಟ್ ಮಾಡಿದ್ದು, ತಮ್ಮ 68ನೇ ವಯಸ್ಸಿಗೆ ನಮ್ಮಮ್ಮ ಆಕೆಯ ಬದುಕಿನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲು ನಿರ್ಧರಿಸಿದಳು ಎಂದು ಬರೆದುಕೊಂಡಿದ್ದಾರೆ. ವೀಡಿಯೋದಲ್ಲಿ ಹಿರಿಯ ಪ್ರಾಯದ ಮಹಿಳೆ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಜಿಮ್ ಟ್ರೈನರ್ ಅವರಿಗೆ ಸಾವಧಾನವಾಗಿ ತರಬೇತಿ ನೀಡುತ್ತಿದ್ದು, ಮಹಿಳೆ ವೈಟ್ ಲಿಫ್ಟ್ ಮಾಡುವ ಜೊತೆಗೆ ಹಲವು ರೀತಿಯ ವ್ಯಾಯಾಮ ಮಾಡುವ ದೃಶ್ಯವಿದೆ.

Latest Videos

undefined

ಅಮ್ಮನ ಪ್ರಾಣಕ್ಕಿಂತಲೂ ದುಬಾರಿಯಾಯ್ತು ಶಿಕ್ಷಣ: ಮಗನ ಶಿಕ್ಷಣ ವೆಚ್ಚ ಭರಿಸಲಾಗದೇ ಜೀವತೆತ್ತ ಅಮ್ಮ

ವೀಡಿಯೋ ನೋಡಿದ ಅನೇಕರು ಈ ಇಳಿವಯಸ್ಸಿನಲ್ಲಿ ಜಿಮ್‌ಗೆ ಹೋಗಿ ವ್ಯಾಯಾಮ ಮಾಡುವ ಮೂಲಕ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವ ಮಹಿಳೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ಅನೇಕ ಮಹಿಳೆಯರಿಗೆ ಮಾದರಿಯಾಗಿದ್ದೀರಿ ಎಂದು ಓರ್ವ ನೋಡುಗ ಕಾಮೆಂಟ್ ಮಾಡಿದ್ದಾರೆ. ಇದು ನೀಜವಾಗಿಯೂ ಗ್ರೇಟ್, ನಾವು ಜಿಮ್‌ಗೆ ಹೋಗುವ ಬಗ್ಗೆ ಬರಿ ಯೋಚಿಸಿಯೇ ಕಾಲ ಕಳೆಯುತ್ತಿದ್ದೇವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ರೀತಿ ದಿನ ವ್ಯಾಯಾಮ ಮಾಡುತ್ತಾ ನಮಗೆ ಪ್ರೇರಣೆಯಾಗಿ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.  ಇವರನ್ನು ಆಂಟಿ ಎಂದು ಕರೆಯಬೇಡಿ ಇವರು ಯಂಗ್ ಲೇಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಅಂತು ಬಹುತೇಕ ಎಲ್ಲರೂ ಮಹಿಳೆಯನ್ನು ಪ್ರೋತ್ಸಾಹಿಸಿ ಕಾಮೆಂಟ್ ಮಾಡಿದ್ದಾರೆ. 

ತನ್ನ ಆರೋಗ್ಯವನ್ನು ನಿರ್ಲಕ್ಷಿಸುತ್ತಾ ಮನೆಯಲ್ಲಿ ಇರುವ ಎಲ್ಲರ ಕಾಳಜಿ ವಹಿಸುವ ಅಮ್ಮನ ಬಗ್ಗೆ ಬಹುತೇಕ ಎಲ್ಲರಿಗೂ ಆಸಡ್ಡೆಯೇ ಆಕೆಗೆ ಅನಾರೋಗ್ಯವಾದರೂ ಮಕ್ಕಳಿಗೆ ಸಂಗಾತಿಗೆ ತಿಳಿಯುವುದೇ ಇಲ್ಲ, ಆಕೆ ಹೇಳಿಕೊಳ್ಳುವುದೂ ಇಲ್ಲ, ಕುಟುಂಬದ ಅನೇಕರ ವಿನಾಕಾರಣ ಸಿಟ್ಟು , ಆಕ್ರೋಶಕ್ಕೂ ಅಮ್ಮ ಕಾರಣವಿಲ್ಲದೇ ಬಲಿಯಾಗುತ್ತಾಳೆ. ಮನದೊಳಗೆ ದುಖಃವಿದ್ದರೂ ಆಕೆ ಅದನ್ನು ಯಾರ ಬಳಿಯೂ ತೋರಿಸಿಕೊಳ್ಳದೇ ಮತ್ತದೇ ಅಮ್ಮನ ಪ್ರೀತಿ ತೋರುತ್ತಾಳೆ. ಇಂತಹ ಅಮ್ಮಂದಿರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಹೊಸ ಚಟುವಟಿಕೆಯಲ್ಲಿ ತೊಡಗಿದಾಗ ಅವರನ್ನು ಅವಮಾನಿಸಿ ನಿರ್ಲಕ್ಷ್ಯ ಮಾಡದೇ ಪ್ರೋತ್ಸಾಹಿಸಿ, ಪ್ರೀತಿ ತೋರಿ, ಏಕೆಂದರೆ ಕಾಲ ಯಾರ ಸ್ವತ್ತು ಅಲ್ಲ, ನಾಳೆ ನಮಗೂ ವಯಸ್ಸಾಗುತ್ತದೆ..! 

ಮೆಷಿನ್‌ಗೆ ಸಿಲುಕಿ ಕೈ ಕಟ್‌: ಕೈ ಕಳೆದುಕೊಂಡ ತನ್ನ ನೋಡಿ ಬಿಕ್ಕಳಿಸುತ್ತಿದ್ದ ಅಮ್ಮನ ಸಂತೈಸಿದ ಕಂದ

 

click me!