ಭಾರೀ ಗಾತ್ರದ ಬಿಳಿ ಬಣ್ಣದ ಹಾವು ಪತ್ತೆ: ವೀಡಿಯೋ ವೈರಲ್

Published : Aug 01, 2023, 12:37 PM IST
ಭಾರೀ ಗಾತ್ರದ ಬಿಳಿ ಬಣ್ಣದ ಹಾವು ಪತ್ತೆ: ವೀಡಿಯೋ ವೈರಲ್

ಸಾರಾಂಶ

ಹಿಮಾಚಲದಲ್ಲಿ ಅಪರೂಪದ ಬಿಳಿ ಬಣ್ಣದ ಹಾವೊಂದು ಕಾಣಿಸಿಕೊಂಡಿದ್ದು, ಇದು ಹುಲ್ಲಿನ ಮೇಲೆ ತೆವಳಿಕೊಂಡು ಹೋಗುತ್ತಿರುವ ವೀಡಿಯೋವನ್ನು ಜನ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. 

ಛಂಬಾ: ಹಿಮಾಚಲದಲ್ಲಿ ಅಪರೂಪದ ಬಿಳಿ ಬಣ್ಣದ ಹಾವೊಂದು ಕಾಣಿಸಿಕೊಂಡಿದ್ದು, ಇದು ಹುಲ್ಲಿನ ಮೇಲೆ ತೆವಳಿಕೊಂಡು ಹೋಗುತ್ತಿರುವ ವೀಡಿಯೋವನ್ನು ಜನ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಅಂದಹಾಗೆ ಈ ಬಿಳಿ ಬಣ್ಣದ ಹಾವು ಪತ್ತೆಯಾಗಿದ್ದು ಹಿಮಾಚಲ ಪ್ರದೇಶದ ಛಂಬಾದಲ್ಲಿ. ಅಪರೂಪಕ್ಕೆ ಕಾಣಿಸಿಕೊಂಡ ಈ ಹಾವು ಜನರ ಕುತೂಹಲ ಹೆಚ್ಚಿಸಿದೆ. ಆನುವಂಶಿಕ ಅಸ್ವಸ್ಥತೆಯ ಕಾರಣದಿಂದ ಬಿಳಿ ಬಣ್ಣದ ಹಾವುಗಳು ರೂಪುಗೊಳ್ಳುತ್ತವೆ. 

ವರದಿಯ ಪ್ರಕಾರ ಈ ಹಾವು ಐದು ಅಡಿ ಉದ್ದವಿದ್ದು, ಹುಲ್ಲು ಪೊದೆಯ ಮೇಲೆ ಹರಿದಾಡುತ್ತಾ ಸಾಗುತ್ತಿರುವುದು ಕಂಡು ಬಂದಿದೆ. ಅಲ್ಬಿನೋ ಎಂದು ಕರೆಯಲ್ಪಡುವ ಈ ಹಾವುಗಳು ಅತೀ ಅಪರೂಪವಾಗಿದ್ದು, ಕಳೆದ ವರ್ಷ ಪುಣೆಯಲ್ಲಿ ಇದೇ ರೀತಿಯ ಹಾವೊಂದು ಕಂಡು ಬಂದಿತ್ತು.  ಅಲ್ಬಿನೋಸ್ ತಮ್ಮ ವಿಶಿಷ್ಟ ನೋಟಕ್ಕೆ ಹೆಸರುವಾಸಿಯಾಗಿದ್ದು, ಅವುಗಳ ವಿಭಿನ್ನವಾದ ವರ್ಣದ್ರವ್ಯದಿಂದಾಗಿ ಅಪರೂಪವಾಗಿ ಕಂಡು ಬರುತ್ತದೆ. ಅವುಗಳನ್ನು ಅಪರೂಪದ ಜಾತಿಯೆಂದು ಗುರುತಿಸಲಾಗಿದೆ.

ಅಲ್ಬಿನೋ ಹಾವು ಎಂದರೇನು?
ಅಲ್ಬಿನೋ ಹಾವು ಒಂದು ರೀತಿಯ ಹಾವು ಆಗಿದ್ದು ಅದು ಅಲ್ಬಿನಿಸಂ ಎಂದು ಕರೆಯಲ್ಪಡುವ ಆನುವಂಶಿಕ ಅಸ್ವಸ್ಥತೆಯೊಂದಿಗೆ ಜನಿಸುತ್ತದೆ, ಇದರ ದೇಹ ಮತ್ತು ಕಣ್ಣುಗಳಲ್ಲಿ ವರ್ಣದ್ರವ್ಯದ ಕೊರತೆ ಇರುತ್ತದೆ. ಇದೇ ಕಾರಣಕ್ಕೆ ಇದರ ಬಣ್ಣ ಬಿಳಿಯಾಗಿರುತ್ತದೆ. ಇವು ವಿಶಿಷ್ಟವಾದ ನಿರ್ದಿಷ್ಟ ಬಣ್ಣವನ್ನು ಹೊಂದಿದ್ದು, ಈ ಸಮಸ್ಯೆಯಿಂದಾಗಿ ಕೆಲವೊಮ್ಮೆ ಹಳದಿ ಬಣ್ಣದ ಹಾವು ಬಿಳಿ ಬಣ್ಣ ಹೊಂದುತ್ತವೆ. ಹಾಗೆಯೇ ಕೆಂಪು ಬಣ್ಣದ ಹಾವು ಹಳದಿ ಹಾಗೂ ಬಿಳಿ ಬಣ್ಣಕ್ಕೆ ಕಾರಣವಾಗಬಹುದು. 

 

ಚುಕ್ಕಿ ಜಿಂಕೆಯ ಜೊತೆ ಶ್ವೇತವರ್ಣದ ಜಿಂಕೆ ಪತ್ತೆ: ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಚುಕ್ಕಿ ಜಿಂಕೆ, ಸಾರಂಗ ಮುಂತಾದವುಗಳು ಸಾಮಾನ್ಯವಾಗಿ  ಕಾಣಿಸಿಗುತ್ತವೆ. ಆದರೆ ಬಿಳಿ ಬಣ್ಣದ ಜಿಂಕೆಗಳನ್ನು ಎಲ್ಲದರೂ ನೋಡಿದ್ದೀರಾ ಇಲ್ಲ ಎಂದಾದರೆ ಇಲ್ಲಿದೆ ನೋಡಿ... ಸಾಮಾನ್ಯವಾಗಿ ಕಾಣ ಸಿಗುವ ಚುಕ್ಕಿ ಜಿಂಕೆಯ ಜೊತೆ ಇಲ್ಲೊಂದು ಕಡೆ ಬಿಳಿಜಿಂಕೆಯೊಂದು ಪತ್ತೆಯಾಗಿದೆ. ಉತ್ತರಪ್ರದೇಶದ ಕತರ್ನಿಯಾ ಘಾಟ್‌ ವನ್ಯಜೀವಿ ಅಭಯಾರಣ್ಯದಲ್ಲಿ ಅಪರೂಪದ ದೃಶ್ಯ ಕಂಡು ಬಂದಿದೆ.  ಭಾರತೀಯ ಅರಣ್ಯ ಸೇವೆ ಅಧಿಕಾರಿ ಆಕಾಶ್ ದೀಪ್ ಬಧವಾನ್ (Akash Deep Badhawan) ಎಂಬುವವರು ಈ ಅಪರೂಪದ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಬಿಳಿ ಬಣ್ಣದ ಜಿಂಕೆಗೆ ಅಲ್ಬಿನೋ ಜಿಂಕೆ ಎಂದು ಕರೆಯಲಾಗುತ್ತದೆ.

ಆಕಾಶ್ ದೀಪ್ ಬಧವಾನ್ ಅವರು ಈ ಅಪರೂಪದ ಫೋಟೋದ ಜೊತೆ 'ಕತಾರ್ನಿಯಾ ಘಾಟ್ ಎಂಬ ಹೆಸರಿಗೆ ಬದ್ಧವಾಗಿರುವಂತೆ ಇಲ್ಲಿ ಅಪರೂಪವಾದವುಗಳು ಕಾಣಸಿಗುವುದು ಸಾಮಾನ್ಯ ಎನಿಸಿದೆ.  ಇಲ್ಲಿ ಇಂದು ಅಲ್ವಿನೋ ಜಿಂಕೆ ಕಾಣಿಸಿಕೊಂಡಿದೆ ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಹುಲ್ಲಿನ ಮಧ್ಯೆ ಚುಕ್ಕಿ ಜಿಂಕೆ ಜೊತೆಗೆ ಈ ಬಿಳಿ ಬಣ್ಣದ ಜಿಂಕೆ ಓಡಾಡುತ್ತಿರುವುದು ಕಾಣಿಸಿದೆ. 

Snake Smuggling: ಬ್ರಾನಲ್ಲಿ 5 ಜೀವಂತ ಹಾವುಗಳನ್ನು ಸಾಗಿಸಿದ ಮಹಿಳೆ

ಈ ಅಪರೂಪದ ಫೋಟೋಗೆ ಹಲವು ಬಳಕೆದಾರರ ಜೊತೆ ದೇಶದ ಹಲವು ಐಎಫ್‌ಎಸ್ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.   ಐಎಫ್‌ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್‌ ಈ ಫೋಟೋಗೆ ಪ್ರತಿಕ್ರಿಯಿಸಿ, ಅಪರೂಪದವುಗಳನ್ನು ಪ್ರಕೃತಿಯಿಂದ ಬೇಗ ತೆಗೆದು ಹಾಕಲಾಗುತ್ತದೆ., ಈ ಪ್ರಕೃತಿಗೆ ಅವುಗಳು ಹೊಂದಿಕೊಳ್ಳುವುದು ಕಷ್ಟ ಎಂದು ಬರೆದುಕೊಂಡಿದ್ದಾರೆ.  ಹಾಗೆಯೇ  ಮತ್ತೊಬ್ಬ ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ (Susanta Nanda) ಪ್ರತಿಕೃಯಿಸಿ,  ರಾಮಾಯಣದಲ್ಲಿ (Ramayana) ಬಂಗಾರದ ಬಣ್ಣದ ಜಿಂಕೆಯ (Golden deer) ಉಲ್ಲೇಖವಿರುವುದು ನಿಮಗೆ ಗೊತ್ತು. ಒಡಿಶಾ ಅಂಗುಲ್ ಜಿಲ್ಲೆಯಲ್ಲಿ 15 ವರ್ಷಗಳ ಹಿಂದೆ ಇದೇ ರೀತಿಯ ದೃಶ್ಯ ಕಂಡು ಬಂದಿತ್ತು.  ಅಲ್ಲಿನ ಲಬಂಗಿ  ಅತಿಥಿ ಗೃಹದ (Labangi guest house) ಬಳಿ ಇದನ್ನು ನೋಡಿದ್ದೆ ಎಂದು ಕಾಮೆಂಟ್ ಮಾಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?