ಬಿಜೆಪಿಯಿಂದ ಮತ್ತೆ ಮೂಲಪಕ್ಷಕ್ಕೆ ಘರ್‌ವಾಪಸಿ : ಮೋದಿ ದೂರವಾಣಿ ಕರೆ

By Kannadaprabha NewsFirst Published Jun 4, 2021, 9:07 AM IST
Highlights
  •   ಬಿಜೆಪಿ ಸೋಲಿನಿಂದ ಹತಾಶೆಗೊಂಡು ಘರ್ ವಾಪ್ಸಿ
  • ಪ್ರಧಾನಿ ನರೇಂದ್ರ ಮೋದಿಯಿಂದ ಮುಖಂಡಗೆ ಕರೆ
  •  ದೂರವಾಣಿ ಕರೆ ಮಾಡಿ  ಆರೋಗ್ಯ ವಿಚಾರಿಸಿದ ಪಿಎಂ

ನವದೆಹಲಿ (ಜೂ.04): ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋಲಿನಿಂದ ಹತಾಶೆಗೊಂಡು ತೃಣಮೂಲ ಕಾಂಗ್ರೆಸ್‌ಗೆ ‘ಘರ್‌ವಾಪಸಿ’ಗೆ ಯತ್ನಿಸುತ್ತಿದ್ದಾರೆ ಎಂಬ ಗುಮಾನಿಯ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮುಂಜಾನೆ ಮುಕುಲ್‌ ರಾಯ್‌ಗೆ ದೂರವಾಣಿ ಕರೆ ಮಾಡಿ ಪತ್ನಿಯ ಆರೋಗ್ಯ ವಿಚಾರಿಸಿದ್ದಾರೆ. 

ಕೇಂದ್ರ ಸೇವೆಗೆ ನಿಯೋಜಿತರಾಗಿದ್ದ ಆಲಾಪನ್‌ ನಿವೃತ್ತಿ, ಮಮತಾ ಸಲಹೆಗಾರರಾಗಿ ನೇಮಕ! .

ಅನಾರೋಗ್ಯದ ಕಾರಣ ಮುಕುಲ್‌ ರಾಯ್‌ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಹೋದರ ಸಂಬಂಧಿ ಅಭಿಷೇಕ್‌ ಬ್ಯಾನರ್ಜಿ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದು, ಘರ್‌ವಾಪಸಿ ವದಂತಿಗೆ ಇನ್ನಷ್ಟುಪುಷ್ಠಿ ನೀಡಿದೆ. 

ಬಂಗಾಳ ಬಿಜೆಪಿ ನಾಯಕ ಮುಕುಲ್‌ ವಿರುದ್ಧ ಹತ್ಯೆಗೆ ಸಂಚು ಆರೋಪ! .

ಮಮತಾ ಬ್ಯಾನರ್ಜಿ ವಿರುದ್ಧ ಬಂಡೆದ್ದು ಮುಕುಲ್‌ ರಾಯ್‌ 2017ರಲ್ಲಿ ಬಿಜೆಪಿಗೆ ಸೇರ್ಪಡೆ ಆಗಿದ್ದರು. 

ಇತ್ತೀಚೆಗೆ ಕೊನೆಗೊಂಡ ವಿಧಾನಸಭೆ ಚುನಾವಣೆಯ ಬಳಿಕ ತಮ್ಮನ್ನು ಕಡೆಗಣಿಸಿ ಸುವೇಂದು ಅಧಿಕಾರಿ ಅವರನ್ನು ವಿಪಕ್ಷ ನಾಯಕನನ್ನಾಗಿ ಮಾಡಿರುವುದು ಮುಕುಲ್‌ ರಾಯ್‌ ಅವರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.

click me!