ದೆಹಲಿ: 500ಕ್ಕಿಂತ ಕಡಿಮೆ ಕೇಸ್‌, 45 ಸಾವು

By Kannadaprabha News  |  First Published Jun 4, 2021, 8:17 AM IST
  • ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ವೈರಸ್‌ ಪ್ರಕರಣ ಇಳಿಕೆ
  • ಸಾವಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆ
  • ದೆಹಲಿಯಲ್ಲಿ ಗುರುವಾರ 487 ಹೊಸ ಪ್ರಕರಣಗಳು ದಾಖಲು

ನವದೆಹಲಿ (ಜೂ.04): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ವೈರಸ್‌ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿದೆ. 

ದೆಹಲಿಯಲ್ಲಿ ಗುರುವಾರ 487 ಹೊಸ ಪ್ರಕರಣಗಳು ದಾಖಲಾಗಿದ್ದು, ಕಳೆದ ಎರಡೂವರೆ ತಿಂಗಳಿನಲ್ಲಿಯೇ ಕನಿಷ್ಠ ಎನಿಸಿದೆ. ಇದೇ ವೇಳೆ ಸೋಂಕಿಗೆ 45 ಮಂದಿ ಬಲಿ ಆಗಿದ್ದು, 50 ದಿನಗಳ ಕನಿಷ್ಠ ಎನಿಸಿಕೊಂಡಿದೆ. 

Latest Videos

undefined

ಪಾಸಿಟೀವ್ ರೇಟ್ ಶೇ.1.5ಕ್ಕೆ ಇಳಿಕೆ; ದೆಹಲಿಯಲ್ಲಿ ಮೇ.31ರಿಂದ ಅನ್‌ಲಾಕ್ ಆರಂಭ!

ಅಲ್ಲದೇ ಏ.11ರ ಬಳಿಕ ಮೊದಲ ಬಾರಿ ಸಾವಿನ ಸಂಖ್ಯೆ 50ಕ್ಕಿಂತ ಕೆಳಗಿಳಿದಿದೆ. ಏ.11ರಂದು ದೆಹಲಿಯಲ್ಲಿ ಕೊರೋನಾಕ್ಕೆ 48 ಮಂದಿ ಬಲಿ ಆಗಿದ್ದರು. ಅದೇ ರೀತಿ ಮಾ.16ರಂದು ದೆಹಲಿಯಲ್ಲಿ 425 ಕೇಸ್‌ಗಳು ದಾಖಲಾಗಿದ್ದವು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!