
ಮುಂಬೈ(ಫೆ.17): ಜೀವನದಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವಾಗ ನಾವು ನಡೆದು ಬಂದ ಹಾದಿಯನ್ನು ಯಾವತ್ತೂ ಮರೆಯಬಾರದು ಎನ್ನುವ ಮಾತಿದೆ. ಸದ್ಯ ಮಿಸ್ ಇಂಡಿಯಾ 2020ರ ರನ್ನರ್ ಅಪ್ ಮಾನ್ಯ ಸಿಂಗ್ ನಡೆ ಈ ಮಾತನ್ನು ಮತ್ತೆ ನೆನಪಿಸಿದೆ. ಉತ್ತರ ಪ್ರದೇಶದ ದೇವರಿಯಾ ನಿವಾಸಿ ಮಾನ್ಯಾ ಸಿಂಗ್ ತನ್ನ ತಂದೆಯ ಆಟೋ ರಿಕ್ಷಾದಲ್ಲಿ ಮುಂಬೈನಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಮುಂಬೈನ ಠಾಕೂರ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಮಾನ್ಯಾರವರ ತಂದೆ ತಾಯಿಯನ್ನೂ ಸನ್ಮಾನಿಸಿದ್ದಾರೆ.
ಮಾನಸ 2020ರ ಮಿಸ್ ಇಂಡಿಯಾ : ಕಡು ಬಡತನದಲ್ಲಿ ಬೆಳೆದ ಮಾನ್ಯ ರನ್ನರ್ ಅಪ್
ಮಾನ್ಯಾ ತಂದೆ ಆಟೋ ರ್ಯಾಲಿ ಆಯೋಜಿಸಿದ್ದು, ಇದರ ಮುಂದಾಳತ್ವ ಖುದ್ದು ಅವರೇ ವಹಿಸಿದ್ದರು. ಆಟೋ ಹಿಂದಿನ ಸೀಟಿನಲ್ಲಿ ಮಾನ್ಯಾ ಹಾಗೂ ಆಕೆಯ ತಾಯಿ ಕುಳಿತುಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಪೋಟೋ ಭಾರೀ ವೈರಲ್ ಆಗಿದೆ.
ಮನೆ ಮನೆ ಮುಸುರೆ ತಿಕ್ಕುತ್ತಿದ್ದವಳು ಈಗ ಮಿಸ್ ಇಂಡಿಯಾ ರನ್ನರ್ ಅಪ್
ಕಪ್ಪು ಬಣ್ಣದ ಬಟ್ಟೆಯಲ್ಲಿ ಕಂಗೊಳಿಸುತ್ತಿದ್ದ ಸುಂದರಿ
ಕಪ್ಪು ಬಣ್ಣದ ಡ್ರೆಸ್ ಧರಿಸಿದ್ದ ಮಾನ್ಯಾರವರು ಮಿಸ್ ಇಂಡಿಯಾ ಕಿರೀಟವನ್ನೂ ಧರಿಸಿದ್ದರು. ಇನ್ನು ಅವರ ತಂದೆ ಜೀನ್ಸ್ ಹಾಗೂ ಶರ್ಟ್ ಧರಿಸಿದ್ದರು. ತಾಯಿ ಕೆಂಪು ಹಾಗೂ ಹಳದಿ ಔಟ್‌ಫಿರ್ಟ ಧರಿಸಿದ್ದರು. ಓರ್ವ ಆಟೋ ಚಾಲಕನ ಮಗಳಾಗಿರುವ ಮಾನ್ಯಾ ಮಿಸ್ ಇಂಡಿಯಾ 2020ರ ರನ್ನರ್ ಅಪ್ ಕೂಡಾ ಆಗಿದ್ದಾರೆ. ಇದು ಕೇವಲ ಆಕೆ ತಂದೆ, ತಾಯಿ ಮಾತ್ರವಲ್ಲ ಇಡೀ ರಾಜ್ಯಕ್ಕೇ ಹೆಮ್ಮೆಯ ವಿಚಾರ.
ನಮ್ಮಂತಹವರು ಕನಸು ಕೂಡಾ ಕಾಣುವುದಿಲ್ಲ:
ಫೆಮಿನಾ ಮಿಸ್ ಇಂಡಿಯಾ 2020ರ ರನ್ನರ್ ಅಪ್ ಆಗಿರುವ ಮಾನ್ಯಾ ತಾವು ನಡೆದು ಬಂದ ಹಾದಿಯನ್ನು ನೆನಪಿಸಿಕೊಂಡಿದ್ದಾರೆ. ತಾನು ಈ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತೇನೆ ಎನ್ನುವಾಗ ತಂದೆ ತಾಯಿ ನಮ್ಮಂತಹವರು ಕನಸು ಕಾಣುವುದಿಲ್ಲ. ಹೀಗಿರುವಾಗ ನೀನು ಮಿಸ್ ಇಂಡಿಯಾ ಆಗುವ ಬಗ್ಗೆ ಯೋಚಿಸುತ್ತಿದ್ದೀಯಲ್ಲಾ? ಎಂದು ಪ್ರಶ್ನಿಸಿದ್ದರು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ