
ನವದೆಹಲಿ(ನ.13) ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿ ಮಣಿಪುರ ಹೊತ್ತಿ ಉರಿದಿತ್ತು. ಗುಂಡಿನ ದಾಳಿ, ಬೆಂಕಿ, ಬೆತ್ತಲೇ ಮೆರವಣಿ ಸೇರಿದಂತೆ ಹೃದಯವಿದ್ರಾವಕ ಘಟನೆಗಳು ಮಣಿಪುರದಲ್ಲಿ ನಡೆದಿತ್ತು. ಹಲವು ತಿಂಗಳ ಸತತ ಪರಿಶ್ರಮದ ಬಳಿಕ ಮಣಿಪುರ ಸಹಜಸ್ಥಿತಿಗೆ ಮರಳಿದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಕೆಲ ಭಾಗದಲ್ಲೂ ಸಮುದಾಯದ ಜನರನ್ನು ಗುರಿಯಾಗಿಸಿಕೊಂಡು ಈಗಲೂ ದಾಳಿಗಳು ನಡೆಯುತ್ತಿದೆ. ಇದೀಗ ಮಣಿಪುರದ ಶಾಂತಿ ಸುವ್ಯವಸ್ಥೆಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಕ್ರಮ ಕೈಗೊಂಡಿದೆ. ಮಣಿಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೈತೈ ಸಮುದಾಯದ 9ಕ್ಕೂ ಹೆಚ್ಚು ಉಗ್ರಗಾಮಿ ಗುಂಪುಗಳನ್ನು 5 ವರ್ಷಗಳ ಕಾಲ ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (UAPA) ಅಡಿಯಲ್ಲಿ ಉಗ್ರಗಾಮಿ ಗುಂಪುಗಳನ್ನು ಬ್ಯಾನ್ ಮಾಡಲಾಗಿದೆ. ಈ ಕುರಿತು ಸುತ್ತೋಲೆ ಹೊರಡಿಸಿರುವ ಗೃಹ ಸಚಿವಾಲಯ, ಭಾರತದ ಸಾರ್ವಭೌಮತೆ, ಸಮಗ್ರತೆಗೆ ಧಕ್ಕೆ ತರುತ್ತಿರುವ ಹಾಗೂ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಉಗ್ರಗಾಮಿಗಳ ಗುಂಪುಗನ್ನು 5 ವರ್ಷ ನಿಷೇಧಿಸಲಾಗಿದೆ ಎಂದಿದೆ.
ಮೈತೇಯಿ ವಿದ್ಯಾರ್ಥಿಗಳಿಬ್ಬರ ಹತ್ಯೆಗೈದ 6 ಬಂಡುಕೋರರ ಬಂಧನ, ಇದರಲ್ಲಿ ಇಬ್ಬರು ಮಹಿಳೆಯರು!
ಭಯೋತ್ಪಾದನೆ ಹಾಗೂ ಹಿಂಸಾಚಾರ ಕೃತ್ಯಗಳಲ್ಲಿ ಈ ಗುಂಪುಗಳು ಭಾಗಿಯಾಗಿದೆ. ಮಣಿಪುರದಲ್ಲಿನ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಯಾವುದೇ ಗುಂಪು ಅಥವಾ ಘಟನೆಗೆ ಅವಕಾಶವಿಲ್ಲ ಎಂದು ಗೃಹ ಸಚಿವಾಲಯ ಹೇಳಿದೆ.
ಮೈತೈ ಸಮುದಾಯದ ಉಗ್ರಗಾಮಿ ಗುಂಪುಗಳಾದ ಪೀಪಲ್ಸ್ ಲಿಬರೇಶನ್ ಆರ್ಮಿ(PLA), ಇದರ ರಾಜಕೀಯ ಘಟಕ ರೆವಲ್ಯೂಶನರಿ ಪೀಪಲ್ಸ್ ಫ್ರಂಟ್((RPF)ನ್ನೂ ನಿಷೇಧ ಮಾಡಲಾಗಿದೆ. ಯೂನೈಟೆಡ್ ನೇಷನ್ ಲಿಬರೇಶನ್ ಫ್ರಂಟ್((UNLF), ಮಣಿಪುರ ಪೀಪಲ್ಸ್ ಆರ್ಮಿ(MPA), ಪೀಪಲ್ಸ್ ರೆವಲ್ಯೂಶನರಿ ಪಾರ್ಟಿ ಆಫ್ ಕಂಗ್ಲಿಪಾಕ್((PREPAK) ರೆಡ್ ಆರ್ಮಿ, ಕಾಂಗ್ಲಿಪಾಕ್ ಕಮ್ಯೂನಿಸ್ಟ್ ಪಾರ್ಟಿ(KCP) , ಅಲಯನ್ಸ್ ಫಾರ್ ಸೋಶಿಯಲಿಸ್ಟ್ ಯೂನೈಟೆಡ್ ಕಂಗ್ಲಿಪಾಕ್(ASUK) ಸೇರಿದಂತೆ ಕೆಲ ಉಗ್ರಗಾಮಿ ಸಂಘಟನೆಗಳನ್ನು ನಿಷೇಧ ಮಾಡಲಾಗಿದೆ.
ಮಣಿಪುರ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ವಿಸ್ತರಣೆ: ಮ್ಯಾನ್ಮಾರ್- ಭಾರತ ಗಡಿಯಲ್ಲಿ ಬೇಲಿ ಹಾಕಲು ನಿರ್ಧಾರ
ಈ ಉಗ್ರಗಾಮಿ ಸಂಘಟನೆಗಳು ಮಣಿಪುರವನ್ನು ಸ್ವತಂತ್ರಗೊಳಿಸುವ ಹೆಸರಿನಲ್ಲಿ ಶಸ್ತ್ರಾಸ್ತ್ರ ಹೋರಾಟ ನಡೆಸಿದೆ. ಅಮಾಯಕ ಜನರ ಸಾವು ನೋವಿಗೆ ಕಾರಣವಾಗಿದೆ. ಇದೇ ವೇಳೆ ಯುವ ಸಮೂಹವನ್ನು ದಾರಿ ತಪ್ಪಿಸಿ ತಮ್ಮ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದೆ. ಇಷ್ಟೇ ಅಲ್ಲ ಸಮುದಾಯದ ನಡುವೆ ದ್ವೇಷ ಬಿತ್ತಿ, ಭಾರತದ ವಿರುದ್ಧ, ಭದ್ರತಾ ಪಡೆಗಳ ವಿರುದ್ಧವೇ ಹೋರಾಟ ಮಾಡಿದೆ. ಕಾನೂನು ಬಾಹಿರವಾಗಿ ನಡೆದುಕೊಂಡಿರುವ ಈ ಸಂಘಟನೆಗಳನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ