* ಜಮ್ಮುವಿನಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿವೆ ಡ್ರೋನ್
* ಡ್ರೋನ್ ದಾಳಿ ತನಿಖೆಯನ್ನು ಎನ್‌ಐಎಗೆ ವಹಿಸಿದ ಗೃಹ ಸಚಿವಾಲಯ
* ಉಗ್ರರ ಹೆಡೆಮುರಿ ಕಟ್ಟಲು ಸಜ್ಜಾದ ಸೇನೆ
ಶ್ರೀನಗರ(ಜೂ.29): ಆರ್ಟಿಕಲ್ 370 ರದ್ದುಪಡಿಸಿದ ಬಳಿಕ ಬಿಲ ಸೇರಿದ್ದ ಉಗ್ರ ಸಂಘಟನೆಗಳು ಈಗ ಡ್ರೋನ್ ಮೂಲಕ ಉಗ್ರ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದಾರೆ. ಸೋಮವಾರ ತಡರಾತ್ರಿ ರತ್ನುಚಕ್ ಪ್ರದೇಶದ ಕುಂಜ್ವಾನಿಯಲ್ಲಿ ಮತ್ತೆ ಶಂಕಿತ ಡ್ರೋನ್ ಚಟುವಟಿಕೆ ನಡೆದಿದೆ. ಭದ್ರತಾ ಪಡೆ ಈ ವಿಚಾರವಾಗಿ ಪರಿಶೀಲನೆ ನಡೆಸುತ್ತಿವೆ.
ಶ್ರೀನಗರ ಎನ್‌ಕೌಂಟರ್‌ನಲ್ಲಿ CRPF ಯೋಧರಿಗೆ ಗಾಯ, ಬೆಚ್ಚಿ ಬೀಳಿಸುವ ಗುಂಡಿನ ಚಕಮಕಿ ವಿಡಿಯೋ!
ಜಮ್ಮು ವಾಯುಪಡೆ ನಿಲ್ದಾಣದಲ್ಲಿ ಡ್ರೋನ್ ಮೂಲಕ ಜೂನ್ 26-27ರ ರಾತ್ರಿ ಐದು ನಿಮಿಷದಲ್ಲಿ ಎರಡು ಸ್ಫೋಟ ಸಂಭವಿಸಿತ್ತಿ.. ಮೊದಲ ಸ್ಫೋಟ ಮಧ್ಯಾಹ್ನ 1.37 ಕ್ಕೆ ನಡೆದರೆ ಮಧ್ಯಾಹ್ನ 1.42 ಕ್ಕೆ ಎರಡನೇ ಸ್ಫೋಟ ನಡೆದಿದೆ. ಈ ಸ್ಫೋಟದಲ್ಲಿ ವಾಯುಪಡೆಯ ಇಬ್ಬರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ರಕ್ಷಣಾ ಇಲಾಖೆ ತಿಳಿಸಿತ್ತು. ಇದಾದ ಬಳಿಕ ಮತ್ತೆ ಸೇನಾ ಕ್ಯಾಂಪ್ ಮೇಲೆ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಡ್ರೋನ್ ಹಾರಾಟ ಕಂಡು ಬಂದಿತ್ತು. ಈ ವೇಳೆ 25 ಸುತ್ತಿನ ಗುಂಡು ಹಾರಿಸಿದ್ದ ಸೇನೆ ಡ್ರೋನ್ ಹೊಡೆದೋಡಿಸುವಲ್ಲಿ ಯಶಸ್ವಿಯಾಗಿತ್ತು.
ಡ್ರೋನ್ ದಾಳಿ: ಕಾಶ್ಮೀರ ಉಗ್ರವಾದದಲ್ಲಿ ಟರ್ನಿಂಗ್ ಪಾಯಿಂಟ್!
NIAಗೆ ತನಿಖೆ ವಹಿಸಿದ ಸಚಿವಾಲಯ
ಹೀಗಿರುವಾಗಲೇ ಕೇಂದ್ರ ಗೃಹ ಸಚಿವಾಲಯ ಡ್ರೋನ್ ದಾಳಿ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದೆ. ಎನ್‌ಐಎ ಜಮ್ಮು ಕಾಶ್ಮೀರ ಪೊಲೀಸರ ಬಳಿ ಈವರೆಗಿನ ನಡೆದ ತನಿಖೆಯ ಎಲ್ಲಾ ದಾಖಲೆಯನ್ನು ನೀಡುವಂತೆ ಮನವಿ ಮಾಡಿದೆ. ಈ ಡ್ರೋನ್ ದಾಳಿಯಲ್ಲಿ ಹೈ ಗ್ರೇಡ್ ಎಕ್ಸ್‌ಪ್ಲೋಸಿವ್ ಬಳಸಲಾಗಿತ್ತೆನ್ನಲಾಗಿದೆ. ಇದು ಆರ್ಡಿಎಕ್ಸ್ ಅಥವಾ ಟಿಎನ್‌ಟಿ ಆಗಿರಬಹುದೆಂದು ಅಂದಾಜಿಸಲಾಗಿದೆ.