
ನವದೆಹಲಿ(ಡಿ.27): ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೆಲ ನಗರ, ಪಟ್ಟಣ, ಐತಿಹಾಸಿಕ ಸ್ಥಳಗಳ ಹೆಸರನ್ನು ಮರುನಾಮಕರಣ ಮಾಡಿದ್ದಾರೆ. ಇದೀಗ ಮತ್ತೆರೆಡು ಹೆಸರು ಬದಲಾಗುತ್ತಿದೆ. ಇದಕ್ಕೆ ಕೇಂದ್ರ ಗೃಹ ಸಚಿವಾಲಯ ಕ್ಲೀನಿಯರೆನ್ಸ್ ನೀಡಿದೆ. ಯೋಗಿ ಆದಿತ್ಯನಾಥ್ ಕ್ಷೇತ್ರವಾಗಿರುವ ಗೋರಖಪುರ ಜಿಲ್ಲೆಯ ಮುಂದೇರಾ ಬಜಾರ್ ಹಾಗೂ ದಿಯೋರಾ ಜಿಲ್ಲೆಯ ತೆಲಿಯಾ ಅಫ್ಘಾನ್ ಗ್ರಾಮದ ಹೆಸರು ಮರನಾಮಕರಣಗೊಳ್ಳುತ್ತಿದೆ. ಮುಂದೇರಾ ಬಜಾರ್ ಇನ್ನು ಮುಂದೆ ಚೌರಿ ಚೌರಾ ಎಂದು ಬದಲಾದರೆ, ತೆಲಿಯಾ ಆಫ್ಘಾನ್ ಇನ್ನು ಮುಂದೆ ತೆಲಿಯಾ ಶುಕ್ಲಾ ಎಂದು ಮರುನಾಮಕರಣಗೊಳ್ಳುತ್ತಿದೆ.
ಅಕ್ಟೋಬರ್ 6 ರಂದು ಮರುನಾಮಕರಣ ಮಾಡಲು ಅನುಮತಿ ನೀಡುವಂತೆ ಉತ್ತರ ಪ್ರದೇಶ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿತ್ತು. ಇದೀಗ ಕೇಂದ್ರ ಗೃಹಸಚಿವಾಲಯದಿಂದ ಅನುಮತಿ ಸಿಕ್ಕಿದೆ. ಶೀಘ್ರದಲ್ಲೇ ಕಾನೂನು ಪ್ರಕ್ರಿಯೆ ಮುಗಿಸಲಿರುವ ಉತ್ತರ ಪ್ರದೇಶ ಸರ್ಕಾರ, ಅಧಿಕೃತ ಘೋಷಣೆ ಹೊರಡಿಸಲಿದೆ.
ಅಟಲ್ ಸುರಂಗ ಹೆಸರು ಬದಲಿಸುವ ನಿರ್ಧಾರ ಕೈಬಿಟ್ಟ ಹಿಮಾಚಲ ಕಾಂಗ್ರೆಸ್!
ಈ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ಸರ್ಕಾರ ದಂಡುಪುರ್ ಹಾಗೂ ನೌಗರ್ ರೈಲು ನಿಲ್ದಾಣಗಳ ಹೆಸರು ಬದಲಿಸಲಾಗಿತ್ತು. ದಂಡುಪುರ್ ಹೆಸರನ್ನು ಮಾ ಬಾರಾಹಿ ದೇವಿ ಧಾಮ್ ಎಂದು ಮರುನಾಮಕರಣ ಮಾಡಿದ್ದರೆ, ನೌಕರ್ ರೈಲು ನಿಲ್ದಾಣ ಹೆಸರನ್ನು ಸಿದ್ದಾರ್ಥನಗರ ಎಂದು ಮರುನಾಮಕರಣ ಮಾಡಲಾಗಿತ್ತು. ಯೋಗಿ ಆದಿತ್ಯನಾಥ್ ಸರ್ಕಾರದ ವಿವಾದಗಳಲ್ಲಿ ಮರುನಾಮಕರಣ ಕೂಡ ಒಂದಾಗಿದೆ. ಹಲವು ಹೆಸರುಗಳ ಮರುನಾಮಕರಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಹುಬ್ಬಳ್ಳಿ-ನಿಜಾಮುದ್ದೀನ್ ರೈಲಿಗೆ ಪಂ. ಸವಾಯಿ ಗಂಧರ್ವ ಹೆಸರು
ಹುಬ್ಬಳ್ಳಿ-ನಿಜಾಮುದ್ದೀನ್ ರೈಲಿಗೆ ‘ಪಂಡಿತ ಸವಾಯಿ ಗಂಧರ್ವ’ ರೈಲು ಎಂದು ಮರುನಾಮಕರಣ ಮಾಡಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು. ಧಾರವಾಡದ ನವೀಕೃತ ರೈಲ್ವೆ ನಿಲ್ದಾಣ, ಹುಬ್ಬಳ್ಳಿಯ ರೈಲು ನಿಲ್ದಾಣದ 3ನೆಯ ಪ್ರವೇಶ ದ್ವಾರವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದ್ದರು.. ಹುಬ್ಬಳ್ಳಿ-ನಿಜಾಮುದ್ದೀನ್ ರೈಲು ಸಾಪ್ತಾಹಿಕ ಸಂಚರಿಸುತ್ತದೆ. ಸದ್ಯ ಈ ರೈಲಿನ ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ಎಂಬ ಹೆಸರಿದೆ. ಇದಕ್ಕೆ ಈ ಭಾಗದ ಸಂಗೀತ ದಿಗ್ಗಜ ಪಂಡಿತ ಸವಾಯಿ ಗಂಧರ್ವರ ಹೆಸರಿಡಬೇಕೆಂಬ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮನವಿ ಮಾಡಿರುವುದುಂಟು. ಈ ನಿಟ್ಟಿನಲ್ಲಿ ಸವಾಯಿ ಗಂಧರ್ವರ ಹೆಸರಿಡಲು ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದರು. ಹುಬ್ಬಳ್ಳಿಯಿಂದ ವಾರಣಾಸಿಗೆ ಸದ್ಯ ವಾರಕ್ಕೆ ಒಂದು ಬಾರಿ ಮಾತ್ರ ರೈಲು ಸಂಚರಿಸುತ್ತಿದೆ. ಇದನ್ನು ವಾರಕ್ಕೆ ಎರಡು ಬಾರಿ ಸಂಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದೂ ಇದೇ ವೇಳೆ ತಿಳಿಸಿದರು.
ಟಿಪ್ಪು ಎಕ್ಸ್‌ಪ್ರೆಸ್ ಇನ್ಮುಂದೆ ಒಡೆಯರ್ ಎಕ್ಸ್‌ಪ್ರೆಸ್ ರೈಲು, ಹೆಸರು ಬದಲಿಸಿ ಕೇಂದ್ರದ ಆದೇಶ!
ಬಿಜೆಪಿ ಸರ್ಕಾರಬಂದ ಮೇಲೆ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಿತ್ತು. ಇದೀಗ ನಿಜಾಮುದ್ದೀನ ರೈಲಿಗೆ ಗಂಧರ್ವರ ಹೆಸರಿಡಲು ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿರುವುದು ಜನತೆಯಲ್ಲಿ ಸಂತಸವನ್ನುಂಟು ಮಾಡಿದೆ.
ಕುಂದಗೋಳ ನಿಲ್ದಾಣ;
ಈ ನಡುವೆ ಕುಂದಗೋಳ ರೈಲ್ವೆ ನಿಲ್ದಾಣಕ್ಕೂ ಸವಾಯಿ ಗಂಧರ್ವರ ಹೆಸರನ್ನಿಡಬೇಕೆಂದು ಕೂಡ ಗಂಧರ್ವರ ವಂಶಸ್ಥರಾದ ನಾರಾಯಣ ಜೋಶಿ ಸಚಿವರಿಗೆ ಮನವಿ ಸಲ್ಲಿಸಿದರು. ಈ ಬಗ್ಗೆಯೂ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ