ಡಿಎಂಕೆ ಧ್ವಜ ತೆರವು ವೇಳೆ ವಿದ್ಯುತ್ ಸ್ಪರ್ಶ: ಕಾರ್ಯಕರ್ತ ಸಾವು

By Anusha Kb  |  First Published Dec 27, 2022, 7:34 PM IST

ಯುವಜನ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ಸ್ವಾಗತಿಸುವ ಸಲುವಾಗಿ ಹಾಕಿದ್ದ ಡಿಎಂಕೆ ಧ್ವಜವೊಂದನ್ನು ತೆರವು ಮಾಡುವ ವೇಳೆ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕರೈಕುಡಿಯಲ್ಲಿ ನಡೆದಿದೆ.


ಚೆನ್ನೈ: ಯುವಜನ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ಸ್ವಾಗತಿಸುವ ಸಲುವಾಗಿ ಹಾಕಿದ್ದ ಡಿಎಂಕೆ ಧ್ವಜವೊಂದನ್ನು ತೆರವು ಮಾಡುವ ವೇಳೆ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕರೈಕುಡಿಯಲ್ಲಿ ನಡೆದಿದೆ. ಡಿಸೆಂಬರ್ 24 ರಂದು ಯುವಜನ ಕಲ್ಯಾಣ ಮತ್ತು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಅವರು ಕರೈಕುಡಿಗೆ ಆಗಮಿಸಿದ್ದು, ಈ ವೇಳೆ ಅವರನ್ನು ಸ್ವಾಗತಿಸಲು ಸ್ಥಾಪಿಸಿದ್ದ ಡಿಎಂಕೆ ಧ್ವಜಸ್ತಂಭವನ್ನು (flagpole) ತೆರವು ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ  56 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

ಕಾರ್ಯಕ್ರಮ ಮುಗಿದ ನಂತರ ಮಧ್ಯರಾತ್ರಿಯ ಸುಮಾರಿಗೆ ಆಡಳಿತ ಪಕ್ಷದ ಕಾರ್ಯಕರ್ತರು ಧ್ವಜಸ್ತಂಭ ತೆಗೆಯುವ ಕಾರ್ಯದಲ್ಲಿ ತೊಡಗಿದ್ದರು. ಈ ವೇಳ ರಾಸಿಪುರಂನ (Rasipuram) ವೀರಮಲೈ ಎಂಬುವವರಿಗೆ ವಿದ್ಯುತ್ ತಂತಿ ತಗುಲಿ ಅವರು ನೆಲದ ಮೇಲೆ ಕುಸಿದು ಬಿದ್ದಿದ್ದಾರೆ ಕೂಡಲೇ ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು ಅಲ್ಲಿಗೆ ಬರುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಕಾರೈಕುಡಿ (Karaikudi) ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, ಘಟನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 174 ರ ಅಡಿಯಲ್ಲಿ ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೇಳಿದರು. 

Tap to resize

Latest Videos

ವಿದ್ಯುತ್ ತಂತಿ ಮೇಲೆ ಬಿದ್ದಿದ್ದ ವಸ್ತು ತೆಗೆಯಲು ಹೋಗಿ ಸಾವು: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಮೃತ ವ್ಯಕ್ತಿ ಗುತ್ತಿಗೆದಾರರಾಗಿದ್ದು (contractor), ಅವರ ಮಗ ಸೇರಿದಂತೆ ಸುಮಾರು 10 ಜನರು ಅವರೊಂದಿಗೆ ಕೆಲಸ ಮಾಡುತ್ತಿದ್ದರು. ರಸ್ತೆಯಲ್ಲಿ ಧ್ವಜಸ್ತಂಭಗಳನ್ನು (flagpoles) ನಿರ್ಮಿಸಬೇಡಿ ಎಂದು ನಾವು ಈ ಜನರಿಗೆ ಪದೇ ಪದೇ ಹೇಳಿದ್ದರೂ ಅವರು ಅದನ್ನು ಕೇಳುತ್ತಿರಲಿಲ್ಲ. ಈ ಎಲ್ಲಾ ಧ್ವಜಸ್ತಂಭಗಳು ಕಬ್ಬಿಣದಿಂದ ಮಾಡಲ್ಪಟ್ಟಿದ್ದವು. ಪ್ರತಿ ಧ್ವಜಸ್ತಂಭಕ್ಕೆ ಅವರು ತಲಾ 50 ರೂಪಾಯಿಯನ್ನು ಸಂಗ್ರಹಿಸುತ್ತಾರೆ. ಹೀಗಾಗಿ ಅವರು ಹತ್ತಿರದಲ್ಲಿ ವಿದ್ಯುತ್ ತಂತಿ ಇದೆಯೇ ಅಥವಾ ಧ್ವಜಸ್ತಂಭಗಳು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತದೆಯೇ ಎಂಬುದನ್ನು ಕೂಡ ನೋಡದೇ ಸಾಧ್ಯವಾದಷ್ಟು ಹೆಚ್ಚು ಹೆಚ್ಚು ಸ್ತಂಭಗಳನ್ನು ಸ್ಥಾಪಿಸಲು ಪ್ರಯತ್ನಿಸುತ್ತಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಚಿಕ್ಕಮಗಳೂರು : ಸಂಭ್ರಮದ ಮನೆಯಲ್ಲಿ ಸೂತ: ಸ್ವಚ್ಛತೆ ವೇಳೆ ವಿದ್ಯುತ್ ಸ್ಪರ್ಶಿಸಿ ಗರ್ಭಿಣಿ ದಾರುಣ ಸಾವು

click me!