ಡ್ರಗ್ ಲಾರ್ಡ್‌ ಹತ್ಯೆಯ ಬಳಿಕ ಬೆಂಕಿಯುಂಡೆಯಾದ ಮೆಕ್ಸಿಕೋ: ಉದ್ಯೋಗಿಯ ರಕ್ಷಣೆಗೆ ಪ್ರತಿ ವಿಮಾನವನ್ನು ಬುಕ್ ಮಾಡಿದ ಅಮೆರಿಕ ಕಂಪನಿ

Published : Feb 24, 2026, 10:59 AM IST
American Company Books Every US-Bound Flight To Evacuate Employee Amid Mexico Unrest

ಸಾರಾಂಶ

ಮೆಕ್ಸಿಕೋದಲ್ಲಿ ಡ್ರಗ್ ಮಾಫಿಯಾ ಹಿಂಸಾಚಾರದ ನಡುವೆ ಸಿಲುಕಿದ್ದ ತನ್ನ ಉದ್ಯೋಗಿಯನ್ನು ರಕ್ಷಿಸಲು, ಅಮೆರಿಕದ ಟೆಕ್ ಸಂಸ್ಥೆ ವರ್ಸೆಲ್ ಲಭ್ಯವಿದ್ದ ಎಲ್ಲಾ ವಿಮಾನಗಳನ್ನು ಬುಕ್ ಮಾಡಿದೆ. ಕಂಪನಿಯ ಈ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗ್ತಿದೆ.

ಎಲ್ ಮೆಂಚೊ ಎಂದೇ ಪ್ರಸಿದ್ಧಿ ಹೊಂದಿರುವ ಮೆಕ್ಸಿಕೋದ ಡ್ರಗ್ ದೊರೆ ಜಲಿಸ್ಕೊ ​​ನ್ಯೂ ಜನರೇಷನ್ ಕಾರ್ಟೆಲ್ (ಸಿಜೆಎನ್‌ಜಿ) ಮುಖ್ಯಸ್ಥ ನೆಮೆಸಿಯೊ ಒಸೆಗುರಾ ಸೆರ್ವಾಂಟೆಸ್ ಹತ್ಯೆಯ ನಂತರ ಮೆಕ್ಸಿಕೋದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಹಲವು ಹೆದ್ದಾರಿಗಳ ಬಂದ್ ಜೊತೆಗೆ ವಿಮಾನಗಳ ಸಂಚಾರದಲ್ಲೂ ವ್ಯತ್ಯಯಕ್ಕೆ ಕಾರಣವಾಗಿದೆ. ಡ್ರಗ್ ಮಾಫಿಯಾ ಗುಂಪು ದೇಶದೆಲ್ಲೆಡೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದು, ಹಲವು ವಾಹನಗಳಿಗೆ ಬೆಂಕಿ ಹಚ್ಚಿವೆ. ಹೀಗಾಗಿ ಮೆಕ್ಸಿಕೋದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ದೇಶದ ಹಲವಾರು ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಅವ್ಯವಸ್ಥೆ ವರದಿಯಾಗಿದೆ. ಈ ಪ್ರಕ್ಷುಬ್ಧತೆಯ ನಡುವೆ, ಯುಎಸ್ ಮೂಲದ ಟೆಕ್ ಸಂಸ್ಥೆಯೊಂದು ತನ್ನ ಉದ್ಯೋಗಿಯೊಬ್ಬರು ಮೆಕ್ಸಕೋವನ್ನು ಸುರಕ್ಷಿತವಾಗಿ ತೊರೆಯಲು ಹಲವು ವಿಮಾನಗಳನ್ನು ಬುಕ್ ಮಾಡಿತ್ತು. ಕ್ಲೌಡ್ ಪ್ಲಾಟ್‌ಫಾರ್ಮ್ ಕಂಪನಿ ವರ್ಸೆಲ್, ತಮ್ಮ ಸಿಬ್ಬಂದಿ ಮೆಕ್ಸಿಕೋದಿಂದ ಸುರಕ್ಷಿತವಾಗಿ ಹೊರಬರುವುದನ್ನು ಖಚಿತಪಡಿಸಿಕೊಳ್ಳಲು ಗ್ವಾಡಲಜರಾದಿಂದ ಯುನೈಟೆಡ್ ಸ್ಟೇಟ್ಸ್‌ಗೆ ಹೋಗುವ ಲಭ್ಯವಿರುವ ಪ್ರತಿಯೊಂದು ವಿಮಾನದಲ್ಲಿ ಆಸನಗಳನ್ನು ಬುಕ್ ಮಾಡಿತ್ತು.

ಆಂಡ್ರ್ಯೂ ಬಾರ್ಬಾ ಎಂಬ ಆ ಉದ್ಯೋಗಿ ನಂತರ ತಮ್ಮ ಕಂಪನಿ ತಮ್ಮ ಉದ್ಯೋಗಿಗಳ ಮೇಲೆ ತೋರಿದ ಕಾಳಜಿಯ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಬಾರ್ಬಾ, ಹಿಂಸಾಚಾರ ಹೆಚ್ಚಾದಾಗ ತಾನು ಮತ್ತು ತನ್ನ ಪತ್ನಿ ಗ್ವಾಡಲಜಾರಾದ ವಿಮಾನ ನಿಲ್ದಾಣದಲ್ಲಿದ್ದೆವು ಎಂದು ಹೇಳಿದರು. ಉದ್ವಿಗ್ನತೆ ಹೆಚ್ಚಾದಂತೆ, ಅನಿಶ್ಚಿತತೆ ತಲೆದೋರುತ್ತಿದ್ದಂತೆ ತಾವು ವಿಶ್ರಾಂತಿ ಕೋಣೆಯೊಳಗೆ ಆಶ್ರಯ ಪಡೆದೆವು. ಇಂಟರ್ನೆಟ್ ಸಂಪರ್ಕವು ವಿಶ್ವಾಸಾರ್ಹವಲ್ಲ, ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿತ್ತು ಮತ್ತು ಅವರು ಯಾವಾಗ ಹೊರಡಲು ಸಾಧ್ಯವಾಗುತ್ತದೆ ಎಂಬುದು ಸ್ಪಷ್ಟವಿರಲಿಲ್ಲ.

ಈ ಮಧ್ಯೆ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ವರ್ಸೆಲ್ ಕಂಪನಿ ತನ್ನ ಉದ್ಯೋಗಿಗಳ ಕರೆತರಲು ತ್ವರಿತವಾಗಿ ಸಜ್ಜುಗೊಂಡಿತು. ಉದ್ಯೋಗಿಗಳ ಸುರಕ್ಷಿತ ನಿರ್ಗಮನವನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಿ, ಕನಿಷ್ಠ ಒಂದು ವಿಮಾನವಾದರೂ ಹೊರಡಲು ಸಾಧ್ಯವಾಗುತ್ತದೆ ಎಂದು ಆಶಿಸುತ್ತಾ, ಅವರು ವಿಮಾನ ನಿಲ್ದಾಣದಿಂದ ಅಮೆರಿಕಕ್ಕೆ ಹೋಗುವ ಎಲ್ಲಾ ವಿಮಾನಗಳಿಗೆ ಟಿಕೆಟ್‌ಗಳನ್ನು ಖರೀದಿಸಿದರು. ಅವರ ತಂತ್ರವು ಅಂತಿಮವಾಗಿ ಯಶಸ್ವಿಯಾಯಿತು. ಬಾರ್ಬಾ ಮತ್ತು ಅವರ ಪತ್ನಿ ವಿಮಾನಗಳಲ್ಲಿ ಒಂದನ್ನು ಹತ್ತಲು ಸಾಧ್ಯವಾಯಿತು, ಅದು ಟೇಕ್ ಆಫ್ ಆಗಿ ನಂತರ ಟೆಕ್ಸಾಸ್‌ನ ಡಲ್ಲಾಸ್‌ಗೆ ಸುರಕ್ಷಿತವಾಗಿ ತಲುಪಿತು. ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಕಂಪನಿಯಲ್ಲಿ ಸುಮಾರು ಮೂರು ವರ್ಷಗಳ ಕಾಲ ಕೆಲಸ ಮಾಡಿದ ಬಾರ್ಬಾ, ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನನ್ನು ರಕ್ಷಿಸಲು ಇಷ್ಟೊಂದು ಪ್ರಯತ್ನ ಮಾಡಿದ್ದಕ್ಕಾಗಿ ತನ್ನ ಉದ್ಯೋಗದಾತರಿಗೆ ಸಾರ್ವಜನಿಕವಾಗಿ ಧನ್ಯವಾದ ಅರ್ಪಿಸಿದರು.

ಇದನ್ನೂ ಓದಿ: ಮಗನ ಜೀವಕ್ಕಿಂತ ಸೀರೆ ಅಷ್ಟೊಂದು ಮುಖ್ಯ ಆಯ್ತಾ: ಅಪಾರ್ಟ್‌ಮೆಂಟ್‌ನಿಂದ ಕೆಳಗೆ ಜಾರಿದ ಸೀರೆಗಾಗಿ ಮಹಿಳೆ ಮಾಡಿದ್ದೇನು ನೋಡಿ?

10 ಗಂಟೆಗಳ ಹಿಂದೆ ನಾನು ಪ್ಯುರ್ಟೊ ವಲ್ಲರ್ಟಾಗೆ ಹೋಗುವ ದಾರಿಯಲ್ಲಿ ಗ್ವಾಡಲಜರಾದಲ್ಲಿದ್ದಾಗ ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ ಭುಗಿಲೆದ್ದಿತು ಮತ್ತು ಸ್ನಾನಗೃಹದಲ್ಲಿ ಅಡಗಿಕೊಳ್ಳಬೇಕಾಯಿತು. ಆದರೆ ವರ್ಸೆಲ್ ಸಂಸ್ಥೆಯ ನಾಯಕತ್ವವು ಒಟ್ಟಾಗಿ ಸೇರಿ ನನ್ನ ಹೆಂಡತಿ ಮತ್ತು ನಾನು ಸುರಕ್ಷಿತವಾಗುವವರೆಗೂ ವಿರಮಿಸಲಿಲ್ಲ. ಇಂಟರ್ನೆಟ್ ಅಷ್ಟೇನೂ ಕೆಲಸ ಮಾಡುತ್ತಿರಲಿಲ್ಲ, ಆದ್ದರಿಂದ ಅವರು ನಮ್ಮ ಪರವಾಗಿ ಪ್ರತಿ ಯುಎಸ್ ಹೋಗುವ ವಿಮಾನವನ್ನು ಬುಕ್ ಮಾಡಿದರು, ಯಾವುದಾದರೂ ಒಂದು ವಿಮಾನವಾದರೂ ಟೇಕ್ ಆಫ್ ಆಗುತ್ತದೆ ಎನ್ನು ವಿಶ್ವಾಸ ಅವರದ್ದಾಗಿತ್ತು. ಅಂತಿಮವಾಗಿ ಒಂದು ಟೇಕ್ ಆಫ್ ಆಯಿತು. ನಾವು ಇದೀಗ ಡಲ್ಲಾಸ್‌ನಲ್ಲಿ ಇಳಿದಿದ್ದೇವೆ. ಯುಎಸ್ ವಿಮಾನ ಪ್ಲಾನ್ ಎ ಆಗಿತ್ತು ಆದರೆ ವರ್ಸೆಲ್ ಸಂಸ್ಥೆ ಪ್ಲಾನ್ ಬಿ ಮತ್ತು ಪ್ಲಾನ್ ಸಿ ಮೇಲೆ ಕಾರ್ಯನಿರ್ವಹಿಸಿ ನಮ್ಮನ್ನು ರಕ್ಷಿಸಿದ್ದಾರೆ, ಅವರಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ ಎಂದು ಬಾರ್ಬಾ ಬರೆದಿದ್ದಾರೆ.

ಇವರ ಪೋಸ್ಟ್ ವೈರಲ್ ಆಗಿದ್ದು, ಇಂಟರ್ನೆಟ್ ಬಳಕೆದಾರರೆಲ್ಲರೂ ಒಬ್ಬನಿಗಾಗಿ ಕಂಪನಿ ಮಾಡಿದ ಈ ಸಾಹಸಕ್ಕೆ ಅಚ್ಚರಿಯ ಜೊತೆಗೆ ಶ್ಮಾಘನೆ ವ್ಯಕ್ತಪಡಿಸಿದ್ದಾರೆ. ಅದು ನಾಯಕತ್ವ ಅಂದ್ರೆ, ಪರಿಸ್ಥಿತಿ ಹದಗೆಟ್ಟಾಗ, ನೀವು ಹೇಳಿಕೆಗಳನ್ನು ಬಯಸುವುದಿಲ್ಲ. ನಿಮಗೆ ಕ್ರಮ ಮತ್ತು ಬ್ಯಾಕಪ್ ಯೋಜನೆಗಳು ಬೇಕಾಗುತ್ತವೆ. ನೀವು ಸುರಕ್ಷಿತವಾಗಿರುವುದಕ್ಕೆ ಸಂತೋಷವಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಮನೆ ಕೆಲಸದಾಕೆ ಮಾಡಿದ ತಪ್ಪಾದರು ಏನು: ವೀಡಿಯೋ ಮಾಡಿ ಈಕೆನಾ ಕೆಲಸದಿಂದ ತೆಗಿಲಾ ಬೇಡ್ವಾ ಕೇಳಿದ ಮನೆ ಒಡತಿ

ನಿಮಗೆ ಸಹಾಯ ಮಾಡಲು ಹಣ ಮತ್ತು ಸಹಾಯಕರು ಇದ್ದದ್ದು ಅದೃಷ್ಟ. ಎಷ್ಟೋ ಜನರು ಅಷ್ಟು ಅದೃಷ್ಟವಂತರು ಅಲ್ಲ. ಮತ್ತು ಸ್ಥಳಾಂತರಿಸಲು ಸಾಧ್ಯವಾಗದ ಸ್ಥಳೀಯರು. ನಿಮ್ಮ ಸವಲತ್ತಿಗೆ ನೀವು ಕೃತಜ್ಞರಾಗಿರುತ್ತೀರಿ ಎಂದು ಭಾವಿಸುತ್ತೇನೆಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಅದು ಘಟನೆಗಳ ಒಂದು ಹುಚ್ಚು ತಿರುವು ಒಂದು ಪ್ರವಾಸವು ಎಷ್ಟು ಬೇಗನೆ ಬದುಕುಳಿಯುವ ಕಥೆಯಾಗಿ ಬದಲಾಗಬಹುದು ಎಂಬುದು ಹುಚ್ಚುತನ. ಆದರೂ ನೀವು ಸುರಕ್ಷಿತವಾಗಿ ಹೊರಬಂದಿದ್ದಕ್ಕೆ ಸಂತೋಷವಾಗಿದೆ ಎಂದು ಮೂರನೆಯವರು ಕಾಮೆಂಟ್ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಡ್ರಗ್ ಲಾರ್ಡ್‌ ಹತ್ಯೆಯ ಬಳಿಕ ಬೆಂಕಿಯುಂಡೆಯಾದ ಮೆಕ್ಸಿಕೋ - ಉದ್ಯೋಗಿಯ ರಕ್ಷಣೆಗೆ ಪ್ರತಿ ವಿಮಾನವನ್ನು ಬುಕ್ ಮಾಡಿದ ಅಮೆರಿಕ್ ಕಂಪನಿ
ರಾಷ್ಟ್ರಪತಿ ಭವನದ ಲೂಟನ್ಸ್‌ ಮೂರ್ತಿಯ ಜಾಗಕ್ಕೆ ರಾಜಾಜಿ