ತ್ರಿವರ್ಣ ಧ್ವಜವನ್ನು ಕೇಸರಿ ಮಾಡಲು ಬಿಜೆಪಿ ಪ್ರಯತ್ನ: ಮೆಹಬೂಬಾ ಮುಫ್ತಿ

Published : Aug 06, 2022, 04:13 PM ISTUpdated : Aug 06, 2022, 04:29 PM IST
ತ್ರಿವರ್ಣ ಧ್ವಜವನ್ನು ಕೇಸರಿ ಮಾಡಲು ಬಿಜೆಪಿ ಪ್ರಯತ್ನ: ಮೆಹಬೂಬಾ ಮುಫ್ತಿ

ಸಾರಾಂಶ

ಜಮ್ಮು-ಕಾಶ್ಮೀರಕ್ಕೆ ನೀಡಿದ್ದ 370ನೇ ವಿಧಿಯ ವಿಶೇಷಾಧಿಕಾರವನ್ನು ನರೇಂದ್ರ ಮೋದಿ ಸರ್ಕಾರ ರದ್ದು ಮಾಡಿ ಮೂರು ವರ್ಷವಾದ ಹಿನ್ನಲೆಯಲ್ಲಿ ಶುಕ್ರವಾರ ಶ್ರೀನಗರದಲ್ಲಿ ಪ್ರತಿಭಟನೆ ನಡೆಸಿದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಇದೊಂದು ಕಪ್ಪು ನಿರ್ಧಾರ ಎಂದು ಟೀಕೆ ಮಾಡಿದ್ದಾರೆ.  

ನವದೆಹಲಿ (ಆ. 6): ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ ಮುಖ್ಯಸ್ಥೆ ಹಾಗೂ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ 2019 ಆಗಸ್ಟ್‌ 5 ರಾಜ್ಯದ ಪಾಲಿಗೆ ಕಪ್ಪು ದಿನ ಎಂದು ಹೇಳಿದ್ದಾರೆ. ಆ ದಿನ ಕೇಂದ್ರ ಸರ್ಕಾರ, ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ರದ್ದು ಮಾಡುವ ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು. ಶ್ರೀನಗರದಲ್ಲಿ ಶುಕ್ರವಾರ ಈ ಕುರಿತಾಗಿ ಪ್ರತಿಭಟನೆ ನಡೆಸಿದ ಪಿಡಿಪಿ, ಸರ್ಕಾರಿ ವಿರೋಧಿ ಘೋಷಣೆಗಳನ್ನು ಕೂಗಿತು. ಪ್ರತಿಭಟನೆಯ ಮುಂದಾಳತ್ವ ವಹಿಸಿಕೊಂಡಿದ್ದ ಮೆಹಬೂಬಾ ಮುಫ್ತಿ, ಆಗಸ್ಟ್‌ 5 ಇಡೀ ಜಮ್ಮು ಕಾಶ್ಮೀರದ ಪಾಲಿಗೆ ಕಪ್ಪು ದಿನ. 370ನೇ ವಿಧಿಯನ್ನು ರದ್ದು ಮಾಡಿದ್ದು ಸರ್ಕಾರದ ಕಪ್ಪು ನಿರ್ಧಾರ ಎಂದು ಟೀಕೆ ಮಾಡಿದರು. ಮೂರು ವರ್ಷದ ಹಿಂದೆ ಮೋದಿ ಸರ್ಕಾರ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದು ಮಾಡುವ ತೀರ್ಮಾನ ಮಾಡಿತ್ತು. ಅದರೊಂದಿಗೆ ಜಮ್ಮು ಕಾಶ್ಮೀರವನ್ನು ಇಬ್ಬಾಗ ಮಾಡುವ ನಿರ್ಧಾರವನ್ನು  ಮಾಡಲಾಗಿತ್ತು. ಜಮ್ಮು ಮತ್ತು ಕಾಶ್ಮೀರವನ್ನು ಎರಡು ಭಾಗ ಮಾಡಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಎನ್ನುವ ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು. ಪ್ರಸ್ತುತ ಜಮ್ಮು ಕಾಶ್ಮೀರಕ್ಕೆ ಚುನಾವಣೆ ನಡೆಸಿ ಅಲ್ಲಿನ ರಾಜ್ಯಾಧಿಕಾರವನ್ನು ವಾಪಾಸ್‌ ನೀಡುವ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರವಿದೆ.

ತಮ್ಮ ಕೈಯಲ್ಲಿ ಬ್ಯಾನರ್‌ ಹಿಡಿದುಕೊಂಡು ಪ್ರತಿಭಟನೆಯಲ್ಲಿ ಮೆಹಬೂಬಾ ಮುಫ್ತಿ ಭಾಗವಹಿಸಿದ್ದರು. ಅವರು ಹಿಡಿದಿದ್ದ ಬ್ಯಾನರ್‌ನಲ್ಲಿ, 'ಕಾಲೆ ದಿನ್‌ ಕಾ ಕಾಲಾ ನಿಶ್ಚಯ್‌ ನಹೀ ಚಲೇಗಾ, ಸಾಲೋವ್‌ ದ ಕಾಶ್ಮೀರ್‌ ಇಶ್ಯೂ' ಎಂದು ಬರೆಯಲಾಗಿತ್ತು. ಅದರರ್ಥ, ಕಪ್ಪು ದಿನದ ಕಪ್ಪು ನಿರ್ಣಯ ನಡೆಯೋದಿಲ್ಲ. ಮೊದಲು ಕಾಶ್ಮೀರ ಸಮಸ್ಯೆ ಬಗೆಹರಿಸಿ ಎನ್ನುವುದಾಗಿತ್ತು.

ಆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಬಿಜೆಪಿ ದೇಶದ ತ್ರಿವರ್ಣ ಧ್ವಜವನ್ನು ಕೇಸರಿ ಧ್ವಜವನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ.  ಮುಂಬರುವ ದಿನಗಳಲ್ಲಿ ಬಿಜೆಪಿಯು ಭಾರತ ದೇಶವನ್ನು ನಿರ್ಮಿಸಿರುವ ಸಂವಿಧಾನದ ತಳಹದಿಯನ್ನು ಮತ್ತು ಅದರ ಜಾತ್ಯತೀತತೆಯನ್ನು ನಾಶಪಡಿಸಲಿದೆ ಎಂದು ಅವರು ಹೇಳಿದರು. ಬಿಜೆಪಿ ಇದನ್ನು ಧಾರ್ಮಿಕ ದೇಶವನ್ನಾಗಿ ಮಾಡಲು ಬಯಸುತ್ತಿದೆ. ಜನರು ಇಂದು ಹೆಮ್ಮೆಯಿಂದ ಹಾರಿಸುತ್ತಿರುವ ತ್ರಿವರ್ಣ ಧ್ವಜವನ್ನು ಕೇಸರಿ ಧ್ವಜವನ್ನಾಗಿ ಪರಿವರ್ತಿಸಲು ಬಿಜೆಪಿ ಬಯಸುತ್ತಿದೆ ಎಂದು ಕಿಡಿಕಾರಿದರು.

ಪಾಕ್ ಜೊತೆ ಮಾತುಕತೆ ಬಗ್ಗೆ ಮೆಹಬೂಬಾ ಮುಫ್ತಿ ಹೇಳಿಕೆ ಖಂಡಿಸಿದ ಸಂಜಯ್ ರಾವತ್!

ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ಮತ್ತು ಧ್ವಜವನ್ನು ಕಿತ್ತುಕೊಂಡಂತೆ ಅವರು (ಬಿಜೆಪಿ) ಈ ದೇಶದ ಧ್ವಜವನ್ನು ಬದಲಾಯಿಸುತ್ತಾರೆ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಆದರೆ, ನಾವು ನಮ್ಮ ಧ್ವಜ ಮತ್ತು ಸಂವಿಧಾನವನ್ನು ಹಿಂಪಡೆಯುತ್ತೇವೆ ಎಂದು ಪ್ರಮಾಣ ಮಾಡಿದ್ದೇವೆ. ಲಕ್ಷಗಟ್ಟಲೆ ಜನರು ಪ್ರಾಣ ತ್ಯಾಗ ಮಾಡಿದ ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸುವಂತೆ ನಾವು ಅವರನ್ನು ಒತ್ತಾಯಿಸುತ್ತೇವೆ.

UP Elections: ಲಾಭಕ್ಕಾಗಿ ಬಿಜೆಪಿಯಿಂದ ಹಿಜಾಬ್‌ ವಿವಾದ: ಮುಫ್ತಿ ಆರೋಪ

ಮನೆ ಮನೆಯಲ್ಲೂ ತಿರಂಗಾ ಅಭಿಯಾನಕ್ಕೆ ಜಮ್ಮು-ಕಾಶ್ಮೀರ ನಾಯಕರ ಟೀಕೆ: ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ಮನೋಜ್ ಸಿನ್ಹಾ ಅವರು ಶುಕ್ರವಾರ, ಕೇಂದ್ರಾಡಳಿತ ಪ್ರದೇಶವು ಸಾಮಾಜಿಕ ಭದ್ರತಾ ಯೋಜನೆಗಳು, ಇ-ಆಡಳಿತ ಅಥವಾ ಸ್ಟಾರ್ಟ್‌ಅಪ್‌ಗಳ ವಿಷಯದಲ್ಲಿ ಬಹಳ ದೂರ ಸಾಗಿದೆ, ಏಕೆಂದರೆ ನಾವು ಜನರಲ್ಲಿ ಹೊಸ ನಂಬಿಕೆಯನ್ನು ಹೊಂದಿದ್ದೇವೆ. "ಸಾಮಾಜಿಕ ಭದ್ರತಾ ಯೋಜನೆಗಳು, ಇ-ಆಡಳಿತ ಅಥವಾ ಸ್ಟಾರ್ಟ್-ಅಪ್‌ಗಳ ಸ್ಯಾಚುರೇಶನ್ ಆಗಿರಲಿ, ಜೆ & ಕೆ ಬಹಳ ದೂರ ಸಾಗಿದೆ. ದೇಶಾದ್ಯಂತ ಜನರಲ್ಲಿ ಹೊಸ ನಂಬಿಕೆಯ ಭಾವನೆ ಇದೆ. ಕಳೆದ ಏಳು ತಿಂಗಳಲ್ಲಿ ಕೇವಲ ಒಂದು ಕೋಟಿಗೂ ಹೆಚ್ಚು ಪ್ರವಾಸಿಗರು ಜೆ & ಕೆಗೆ ಭೇಟಿ ನೀಡಿದ್ದಾರೆ ಎಂದು ಸಿನ್ಹಾ ಹೇಳಿದರು. ಇದೇ ವೇಳೆ ಕೇಂದ್ರ ನಡೆಸುತ್ತಿರುವ 'ಹರ್ ಘರ್ ತಿರಂಗಾ' ಅಭಿಯಾನದ ಹಿನ್ನೆಲೆಯಲ್ಲಿ ಮುಫ್ತಿಯವರ ಕಾಮೆಂಟ್‌ಗಳನ್ನು ನೋದಬಹುದು. ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನಾಯಕ ಫಾರೂಕ್ ಅಬ್ದುಲ್ಲಾ ಅವರಂತಹ ಜೆ & ಕೆ ನಾಯಕರು (ಬಿಜೆಪಿ) ತಮ್ಮ ಮನೆಗಳಲ್ಲಿ ತಿರಂಗವನ್ನು ಹಾಕಬೇಕು ಎನ್ನುವ ಅಭಿಯಾನವನ್ನು ಟೀಕೆ ಮಾಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!