ಚೀನಾದಲ್ಲಿ ಲಾಕ್‌ಡೌನ್‌ನಿಂದ 80 ಸಾವಿರ ಪ್ರವಾಸಿಗರಿಗೆ ದಿಗ್ಬಂಧನ, ಭಾರತದಲ್ಲಿ ಕೋವಿಡ್ 4ನೇ ಅಲೆ ಭೀತಿ!

By Suvarna News  |  First Published Aug 6, 2022, 3:54 PM IST

ಭಾರತದಲ್ಲಿ ಕೋವಿಡ್ 4ನೇ ಅಲೆ ಭೀತಿ ಎದುರಾಗಿದೆ. ಒಂದೇ ದಿನ 49 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇತ್ತ 19 ಸಾವಿರ ಪ್ರಕರಣಗಳು ಪತ್ತೆಯಾಗಿದೆ. ಇನ್ನು ಚೀನಾದಿಂದ ಮತ್ತೊಂದು ಆತಂಕವೂ ಎದುರಾಗಿದೆ. ಚೀನಾದ ಸನ್ಯಾ ನಗರದಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಕೋವಿಡ್ ಕುರಿತ ವಿವರ ಇಲ್ಲಿವೆ.


ನವದೆಹಲಿ(ಆ.06):  ಭಾರತದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದೆ. ಇದರ ನಡುವೆ ಓಮಿಕ್ರಾನ್ ಉಪತಳಿಗಳ ಪ್ರಕರಣ ಕುರಿತು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಲಸಿಕೆ ಬಲವಿದ್ದರೂ ಪ್ರತಿ ದಿನ ಸಾರಸರಿ 19 ಸಾವಿರ ಹೊಸ ಪ್ರಕರಣಗಳು ಭಾರತದಲ್ಲಿ ಪತ್ತೆಯಾಗುತ್ತಿರುವುದು ಕೋವಿಡ್ 4ನೇ ಅಲೆ ಭೀತಿ ಎಚ್ಚರಿಕೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಚೀನಾದ ಸನ್ಯ ನಗರದಲ್ಲಿ ಲಾಕ್‌ಡೌನ್ ಘೋಷಿಸಿಲಾಗಿದೆ. ಇದರಿಂದ ಸನ್ಯಾ ನಗರಕ್ಕೆ ಭೇಟಿ ನೀಡಿರುವ 80,000 ಪ್ರವಾಸಿಗರು ದಿಗ್ಬಂಧನಕ್ಕೆ ಒಳಪಟ್ಟಿದ್ದಾರೆ. ಸನ್ಯ ನಗರದಲ್ಲಿ ಎಲ್ಲಾ ಸಾರಿಗೆ, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾದಿದೆ. ತುರ್ತು ಸೇವೆ ಹಾಗೂ ಅಗತ್ಯ ಸೇವೆ ಹೊರತು ಪಡಿಸಿ ಇನ್ನುಳಿದ ಎಲ್ಲಾ ಸೇವೆ ಬಂದ್ ಆಗಿದೆ. ಚೀನಾದಲ್ಲಿನ ಕೋವಿಡ್ ಲಾಕ್‌ಡೌನ್ ಆತಂಕ ಭಾರತಕ್ಕೂ ಕಾಡುತ್ತಿದೆ. ಕಾರಣ ಭಾರತದಲ್ಲಿ ಪ್ರತಿ ದಿನ ಪ್ರಕರಣ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 19,406 ಕೋವಿಡ್ ಪ್ರಕರಣ ದಾಖಲಾಗಿದೆ. ಒಂದೇ ದಿನ 49 ಮಂದಿ ಕೋವಿಡ್‌ಗೆ ಮೃತಪಟ್ಟಿದ್ದಾರೆ. 

ಕಳೆದ 24 ಗಂಟೆಯಲ್ಲಿ ಕೋವಿಡ್ ಸೋಂಕು ತಗುಲಿ ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ತಲಾ 5 ಸಾವುಗಳು ಸಂಭವಿಸಿದೆ. ಛತ್ತೀಸಘಡದಲ್ಲಿ ಮೂವರು ಮೃತಪಟ್ಟಿದ್ದರೆ, ದೆಹಲಿ, ಗುಜರಾತ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ , ತ್ರಿಪುರ ರಾಜ್ಯಗಳಲ್ಲಿ ತಲಾ 2 ಸಾವು ಸಂಭವಿಸಿದೆ. ಹರಿಯಾಣ, ಕೇರಳ, ಮಧ್ಯಪ್ರದೇಶ, ಮೇಘಾಲಯ,  ನಾಗಾಲ್ಯಾಂಡ್, ಒಡಿಶಾ, ಪಂಜಾಬ್, ಸಿಕ್ಕಿಂ, ಉತ್ತರಾಖಂಡ, ಉತ್ತರ ಪ್ರದೇಶ, ಉತ್ತರಖಂಡ, ಪಂಜಾಬ್, ಸಿಕ್ಕಿಂ, ಒಡಿಶಾದಲ್ಲಿ ತಲಾ ಒಂದು ಸಾವು ಸಂಭವಿಸಿದೆ. ಭಾರತದಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ   1,34,793ಕ್ಕೇ ಏರಿಕೆಯಾಗಿದೆ. ಪ್ರತಿ ದಿನದ ಪಾಸಿಟಿವಿಟಿ ರೇಟ್ ಶೇಕಡಾ 4.96ಕ್ಕೆ ಏರಿಕೆಯಾಗಿದೆ.  ದೇಶದಲ್ಲಿ ಕೋವಿಡ್ ಲಸಿಕಾ  205.92 ಡೋಸ್ ದಾಟಿದೆ. ಕಳೆದ 24 ಗಂಟೆಯಲ್ಲಿ 32,73,551 ಡೋಸ್ ಲಸಿಕೆ ನೀಡಲಾಗಿದೆ. 

Tap to resize

Latest Videos

ಸಿಎಂ ಬಸವರಾಜ ಬೊಮ್ಮಾಯಿಗೆ ಕೋವಿಡ್ ದೃಢ, ದೆಹಲಿ ಪ್ರವಾಸ ರದ್ದು!

ಭಾರತದಲ್ಲಿ ಓಮಿಕ್ರಾನ್ ಉಪತಳಿ ಆತಂಕ, INSACOG
ಭಾರತದ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ(INSACOG) ಸಭೆಯಲ್ಲಿ ಭಾರತದಲ್ಲಿನ ಕೋವಿಡ್ ಉಪತಳಿಗಳ ಹೆಚ್ಚಳ ಆತಂಕ ವ್ಯಕ್ತಪಡಿಸಿದೆ. ಕೋವಿಡ್ ಪ್ರಕರಣ ಹೆಚ್ಚಳದಲ್ಲಿ ಹೆಚ್ಚಿನ ಪ್ರಕರಣ ಓಮಿಕ್ರಾನ್ ಉಪತಳಿಯಾಗಿವೆ ಎಂದಿದೆ. ಓಮಿಕ್ರಾನ್ ಉಪತಳಿಯಿಂದ ಭಾರತದಲ್ಲಿ ಮತ್ತೊಂದು ಅಲೆ ಭೀತಿ ಎದುರಾಗಿದೆ ಎಂದು ತಜ್ಞರು ಹೇಳಿದ್ದಾರೆ. ಸದ್ಯ ದೇಶದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಆಸ್ಪತ್ರೆ ದಾಖಲಾಗುವ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಯಾರೂ ಆತಂಕ ಪಡಬೇಕಿಲ್ಲ. ಮುಂಜಾಗ್ರತೆ ವಹಿಸಬೇಕಾಗಿ ಮನವಿ ಮಾಡಿದ್ದಾರೆ.

ಮಂಕಿಪಾಕ್ಸ್ ಭೀತಿಯಲ್ಲಿ ಕೋವಿಡ್ ಮರೀಬೇಡಿ, ಮರುಸೋಂಕಿನಿಂದ ಹೆಚ್ತಿದೆ ಅಪಾಯ !

ಸನ್ಯದಲ್ಲಿ ಕೋವಿಡ್ ಲಾಕ್‌ಡೌನ್
ಚೀನಾದ ಹವಾಯಿ ಸಿಟಿ ಎಂದೇ ಖ್ಯಾತಿಗೊಂಡಿರುವ ಸನ್ಯಾದಲ್ಲಿ ದಿಢೀರ್ ಕೋವಿಡ್ ಪ್ರಕರಣ ಸಂಖ್ಯೆ ಏರಿಕೆಯಾಗಿದೆ. 50 ರಿಂದ 80 ಪ್ರಕರಣಗಳು ಪತ್ತೆಯಾಗುತ್ತಿತ್ತು. ಆಗಸ್ಟ್ 1 ರಂದು ಒಂದೇ ದಿನ 455 ಕೋವಿಡ್ ಪ್ರಕರಣ ದಾಖಲಾಗಿತ್ತು. ಬಳಿಕ ಸರಾಸರಿ 400 ಕೋವಿಡ್ ಪ್ರಕರಣ ಪ್ರತಿ ದಿನ ದಾಖಲಾಗಿದೆ. ಕೋವಿಡ್ ಪ್ರಕರಣ ಗಣನೀಯ ಏರಿಕೆ ಕಾರಣ ಸನ್ಯದಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. 80,000ಕ್ಕೂ ಹೆಚ್ಚು ಪ್ರವಾಸಿಗರು ಲಾಕ್‌ಡೌನಿಂದ ದಿಗ್ಬಂಧನಕ್ಕೆ ಒಳಗಾಗಿದ್ದಾರೆ.
 

click me!