
ಶ್ರೀನಗರ(ಜ.05): ಮೆಹಬೂಬಾ ಮುಫ್ತಿ ಜಮ್ಮ ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ವೇಳೆ 6 ತಿಂಗಳಲ್ಲಿ ಬರೋಬ್ಬರಿ 82 ಲಕ್ಷ ರೂಪಾಯಿ ಸರ್ಕಾರದ ಹಣ ಖರ್ಚು ಮಾಡಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ಈ ವಿಚಾರ ಬೆಳಕಿಗೆ ಬಂದಿದೆ. ಮೆಹಬೂಬಾ ಮುಫ್ತಿ ಮುಖ್ಯಮಂತ್ರಿಯಾಗಿದ್ದಾಗ ಅಂದರೆ 2018ರ ಜನವರಿಯಿಂದ ಜೂನ್ ತಿಂಗಳ ವರಗೆ ಮುಫ್ತಿ ತಮ್ಮ ನಿವಾಸ ನವೀಕರಣಕ್ಕೆ 82 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.
ಗಡಿಯಲ್ಲಿ ನೆತ್ತರು ಹರಿಸಿದ ಪಾಕ್ ಜತೆ ಚರ್ಚೆಗೆ ಮುಫ್ತಿ ಸಲಹೆ.
ಇದು ಸರ್ಕಾರದ ದುಡ್ಡ. ಶ್ರೀಗನರದ ಗುಪ್ಕರ್ ರಸ್ತೆಯಲ್ಲಿರುವ ತಮ್ಮ ಆಫೀಶಿಯಲ್ ನಿವಾಸ ನವೀಕರಣಕ್ಕೆ ಸರ್ಕಾರದಿಂದ 82 ಲಕ್ಷ ರೂಪಾಯಿ ಹಣ ಖರ್ಚು ಮಾಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ಇನಾಮ್ ಉನ್ ನಬಿ ಸೌದಗರ್ ಮಾಹಿತಿ ಹಕ್ಕು ಕಾಯ್ದೆ ಮೂಲಕ ಈ ವಿಚಾರ ಬೆಳಕಿಗೆ ತಂದಿದ್ದಾರೆ.
ಕಾಶ್ಮೀರದ 7 ಪಕ್ಷಗಳ ಕೂಟಕ್ಕೆ ಫಾರೂಖ್ ಅಬ್ದುಲ್ಲಾ ಮುಖ್ಯಸ್ಥ!.
ಟಿವಿ, ಮನೆ ಪೀಠೋಪಕರಣ, ಬೆಡ್, ಸೇರಿದಂತೆ ಹಲವು ವಸ್ತುಗಳನ್ನು ಮೆಹಬೂಬಾ ಮುಫ್ತಿ ಖರೀದಿಸಿದ್ದಾರೆ. 2 ಲಕ್ಷ ರೂಪಾಯಿ LED ಟಿವಿ, ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಗಾರ್ಡನ್ ಅಂಬ್ರೆಲ್ಲಾ, 11.62 ಲಕ್ಷ ರೂಪಾಯಿ ಬೆಡ್‌ಶೀಟ್, 25 ಲಕ್ಷ ರೂಪಾಯಿ ಮೌಲ್ಯದ ಪಿಠೋಪಕರಣ, 28 ಲಕ್ಷ ರೂಪಾಯಿ ಮೌಲ್ಯದ ಕಾರ್ಪೆಟ್, 40 ಲಕ್ಷ ರೂಪಾಯಿ ಮೌಲ್ಯದ ಪಾತ್ರೆ ಸೇರಿದಂತೆ ಅಡುಗೆ ಸಾಮಾನುಗಳನ್ನು ಮುಫ್ತಿ ಖರೀದಿಸಿದ್ದಾರೆ.
ಒಟ್ಟು ಸರ್ಕಾರಿಂದ 82 ಲಕ್ಷ ರೂಪಾಯಿ ಮನೆ ನವೀಕರಣಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ