ಚಲಿಸುತ್ತಿದ್ದ ರೈಲು ಹತ್ತಲು ಹೋದಾತ ಬಿದ್ದೇ ಬಿಟ್ಟ, ಮುಂದೆ ನಡೆದದ್ದು ನೀವೇ ನೋಡಿ!

Published : Jan 05, 2021, 04:38 PM IST
ಚಲಿಸುತ್ತಿದ್ದ ರೈಲು ಹತ್ತಲು ಹೋದಾತ ಬಿದ್ದೇ ಬಿಟ್ಟ, ಮುಂದೆ ನಡೆದದ್ದು ನೀವೇ ನೋಡಿ!

ಸಾರಾಂಶ

ಚಲಿಸುತ್ತಿದ್ದ ರೈಲಿನಿಂದ ಬಿದ್ದ ವ್ಯಕ್ತಿ| ವ್ಯಕ್ತಿಯ ಕಾಪಾಡಲು ಮುನ್ನುಗ್ಗಿದ ಪೊಲೀಸ್| ವೈರಲ್ ಆಯ್ತು ವಿಡಿಯೋ

ಮುಂಬೈ(ಜ.05): ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸುತ್ತಿದ್ದಾಗ ಬಿದ್ದ ವ್ಯಕ್ತರಿಯನ್ನು ಕಾಪಾಡಲು ಕಾನ್ಸ್‌ಟೇಬಲ್ ಒಬ್ಬ ಜೀವದ ಹಂಗು ತೊರೆದು ಮುನ್ನುಗ್ಗಿರುವ ಘಟನೆಯ ವಿಡಿಯೋ ಸದ್ಯ ಭಾರೀ ವೈರಲ್ ಆಗಿದೆ. ಸದ್ಯ ಈ ಪೊಲೀಸಪ್ಪನ ಧೈರ್ಯಕ್ಕೆ ಜನರು ಭೇಷ್ ಎನ್ನುತ್ತಿದ್ದಾರೆ.

ರೈಲ್ವೇ ನಿಲ್ದಾಣದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸಂಪೂರ್ಣ ಘಟನೆ ದಾಖಲಾಗಿದೆ. ಮುಂಬೈನ ದಹಿಸರ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಇನ್ನು ವಿಡಿಯೋದಲ್ಲಿ ವ್ಯಕ್ತಿ ಪ್ಲಾಟ್‌ಫಾರಂಗೆ ಬಂದಿರುತ್ತಾನೆ, ಅಷ್ಟರಲ್ಲೇ ರೈಲು ಚಲಿಸಲಾರಂಭಿಸುತ್ತದೆ. ಹೀಗಿರುವಾಗ ಆತ ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸುತ್ತಾನೆ. ಆದರೆ ನಿಯಂತ್ರಣ ಕಳೆದುಕೊಳ್ಳುವ ಆತ ಬೀಳುತ್ತಾನೆ. ಹೀಗಿರುವಾಗ ಅಲ್ಲಿದ್ದ ಪೊಲೀಸ್ ಕಾನ್ಸ್‌ಟೇಬಲ್ ಯೋಗೆಶ್ ಆತನನ್ನು ಹಿಡಿದು ಹಿಂದೆಳೆಯುತ್ತಾನೆ. ಈ ಮೂಲಕ ವ್ಯಕ್ತಿಯನ್ನು ಕಾಪಾಡುತ್ತಾನೆ.

ಮುಂಬೈ ಪೊಲೀಸರು ಈ ಶಾಕಿಂಗ್ ವಿಡಿಯೋವನ್ನು ಟ್ವೀಟ್ ಮಾಡಿದ್ದು, ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ