ಭವಿಷ್ಯದ ಕನಸು ಕಂಡು ಊರು ಬಿಟ್ಟು ಇನ್ಫೋಸಿಸ್‌ ಸರ್ವಿಸ್ ಬಾಯ್ ಆಗಿ ದುಡಿದಾತ ಇಂದು ಎರಡು ಕಂಪೆನಿ ಒಡೆಯ!

By Gowthami K  |  First Published Aug 4, 2024, 4:28 PM IST

ಆತ ಪುಟ್ಟ ಹಳ್ಳಿಯನ್ನು ತೊರೆದು ಉತ್ತಮ ಭವಿಷ್ಯದ ಕನಸು ಕಂಡಿದ್ದ, ಜೀವನವನ್ನು ಬದಲಾಯಿಸಿಕೊಳ್ಳುವ ದೃಢ ನಿರ್ಧಾರದಿಂದ  ಪುಣೆಗೆ ಪ್ರಯಾಣ ಬೆಳೆಸಿದ.  ಬಳಿಕ  ಇನ್ಫೋಸಿಸ್‌ನಲ್ಲಿ ರೂಮ್ ಸರ್ವಿಸ್ ಬಾಯ್ ಆಗಿ  ಹಣ ಸಂಪಾದಿಸಿ ಇಂದು ಎರಡು ಕಂಪಡನಿಗೆ ಮಾಲೀಕನಾಗಿದ್ದಾನೆ.


ಆತ ಮಹಾರಾಷ್ಟ್ರದ ಬೀಡಿನಲ್ಲಿ ವಾಸಿಸುತ್ತಿದ್ದ ಚಿಕ್ಕ ಮಗು, ಉತ್ತಮ ಭವಿಷ್ಯದ ಕನಸು ಕಂಡಿದ್ದ, ಜೀವನವನ್ನು ಬದಲಾಯಿಸಿಕೊಳ್ಳುವ ದೃಢ ನಿರ್ಧಾರದಿಂದ ಆತ ತನ್ನ ಸಣ್ಣ ಹಳ್ಳಿಯನ್ನು ತೊರೆದು ಪುಣೆಗೆ ಪ್ರಯಾಣ ಬೆಳೆಸಿದ.  ಬಳಿಕ  ಇನ್ಫೋಸಿಸ್‌ನಲ್ಲಿ ರೂಮ್ ಸರ್ವಿಸ್ ಬಾಯ್ ಆಗಿ  ಹಣ ಸಂಪಾದಿಸಿದ. ಈ ಸಣ್ಣ ಕೆಲಸದ ಆರಂಭವು ಆತನ ಜೀವನದಲ್ಲಿ ವೃತ್ತಿಜೀವನಕ್ಕೆ ತಿರುವು ಕೊಟ್ಟಿತ್ತು. 

ಇಂದು ಎರಡು ಕಂಪೆನಿಗಳ ಸಿಇಒ ಆಗಿರುವ ಆ ವ್ಯಕ್ತಿಯೇ ದಾದಾಸಾಹೇಬ್ ಭಗತ್,  ಅನೇಕ ಅಡೆತಡೆಗಳನ್ನು ಎದುರಿಸಿದ ಬಳಿಕ ತನ್ನ ಸಾಧನೆಯ ಹಾದಿಯಲ್ಲಿ  ಅನೇಕ ಅವಕಾಶಗಳನ್ನು ಪಡೆದರು.  ಅಧ್ಯಯನಕ್ಕೆ ಸಾಕಷ್ಟು ಸಮಯವನ್ನು ಮೀಸಲಿಟ್ಟರು. ತಂತ್ರಜ್ಞಾನ ಮತ್ತು ವಿನ್ಯಾಸದ ಬಗ್ಗೆ ಅವರಿಗಿದ್ದ  ಉತ್ಸಾಹವು ಅವರ ಜೀವನವನ್ನು ಮೂಲಭೂತವಾಗಿ ಬದಲಾಯಿಸುವ ಹೊಸ ಆಲೋಚನೆಗಳಿಗೆ ಪ್ರೇರೇಪಣೆ ನೀಡಿತು.

Tap to resize

Latest Videos

undefined

69th Filmfare Awards South 2024 ಪ್ರಕಟ, ಅತ್ಯುತ್ತಮ ಚಿತ್ರ ಡೇರ್​ಡೆವಿಲ್ ಮುಸ್ತಫಾ, ದರ್ಶನ್​​ಗೆ ಸಿಗಲಿಲ್ಲ ಜಯ

ಇಂದು ದಾದಾಸಾಹೇಬ್ ಭಗತ್  ಒಬ್ಬ ಶ್ರೀಮಂತ ಉದ್ಯಮಿಯಾಗಿದ್ದು, ಕಠಿಣ ಪರಿಶ್ರಮ ಮತ್ತು ಭವಿಷ್ಯದ ಬಗ್ಗೆ ಗುರಿ ಇದ್ದರೆ ಹೇಗೆ ಜೀವನದಲ್ಲಿ ಗೆಲ್ಲಬಹುದೆಂದು ತೋರಿಸಿ ಕೊಟ್ಟಿದ್ದಾರೆ. ಇನ್ಫೋಸಿಸ್‌ ನಿಂದ ವೃತ್ತಿಜೀವನ ಆರಂಭಿಸಿ ಎರಡು ಸಮೃದ್ಧ ವ್ಯವಹಾರಗಳನ್ನು ಸ್ಥಾಪಿಸುವವರೆಗಿನ ದಾದಾಸಾಹೇಬ್ ಭಾಟಾ ಅವರ ಸಾಧನೆಯು ಎಂತವರಿಗೂ ಮಾದರಿಯಾಗಿದೆ.

ದಾದಾಸಾಹೇಬ್ ಭಗತ್ ಅವರು ಮಹಾರಾಷ್ಟ್ರದ ಬೀಡ್‌ನ ಒಂದು ಸಣ್ಣ ಹಳ್ಳಿಯಲ್ಲಿ ಬೆಳೆದರು. ಬಾಲ್ಯದ ಜೀವನ ಕಷ್ಟಗಳಿಂದ ಕೂಡಿತ್ತು. ಭಗತ್ ಪ್ರೌಢಶಾಲೆಯ  ನಂತರ 2009 ರಲ್ಲಿ 12 ನೇ ತರಗತಿಯ ಪರೀಕ್ಷಯನ್ನು ನೇರವಾಗಿ ಕಟ್ಟಿ ಪಾಸಾದದರು. ಇದಕ್ಕಾಗಿ ಯಾವುದೇ ಟ್ಯೂಷನ್ ತೆಗೆದುಕೊಳ್ಳಲಿಲ್ಲ. ಬಳಿಕ  ಪುಣೆಗೆ ತೆರಳಿದರು. ಅಲ್ಲಿ ಐಟಿಐ ಡಿಪ್ಲೊಮಾ  ಮಾಡಿದ ನಂತರ ರೂಮ್ ಸರ್ವಿಸ್ ಬಾಯ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು.

ನಾನು ಬದುಕಬೇಕು ದಯವಿಟ್ಟು ನನ್ನನ್ನು ಉಳಿಸಿಕೋ, ಕೊನೆ ಕ್ಷಣ ಆ ನಟನ ಬಳಿ ಆಂಗಲಾಚಿ ಬೇಡಿಕೊಂಡಿದ್ದ ನಟಿ ಮಂಜುಳಾ!

 ಈ ಕಷ್ಟಕರ ಪರಿಸ್ಥಿತಿಗಳ ಹೊರತಾಗಿಯೂ, ಭಗತ್ ಅವರ ದೃಢಸಂಕಲ್ಪ ಬೇರೆಯೇ ಇತ್ತು.    ರೂಂ ಸರ್ವೀಸ್ ಬಾಯ್ ಆಗಿ ತಿಂಗಳಿಗೆ ಸುಮಾರು 9 ಸಾವಿರ ರೂ. ದುಡಿಯುತ್ತಿದ್ದರು. ದಿನಕ್ಕೆ ಅವರಿಗೆ  ವೇತನ ಸೇರಿ ಸುಮಾರು 80 ರೂ ಗಳಿಸುತ್ತಿದ್ದರು. ಭಗತ್ ಅವರು ಕೈಗಾರಿಕಾ ಉದ್ಯೋಗದ ಬದಲಿಗೆ ಇನ್ಫೋಸಿಸ್ ಅತಿಥಿ ಗೃಹದಲ್ಲಿ ಕೆಲಸ ಮಾಡಲು ಆಯ್ಕೆ ಮಾಡಿ ಅಲ್ಲಿ ಅವರು ಅತಿಥಿ ಕೊಠಡಿ ಸೇವೆ, ಚಹಾ ಮತ್ತು ನೀರನ್ನು ರವಾನಿಸುವವರಾಗಿದ್ದರು.

ಇನ್ಫೋಸಿಸ್‌ನಲ್ಲಿ ಉದ್ಯೋಗಿಯಾಗಿದ್ದಾಗಲೇ ಭಗತ್  ಸಾಫ್ಟ್‌ವೇರ್ ಉದ್ಯಮದ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡರು. ಈ ಬಗ್ಗೆ ಅರಿತುಕೊಂಡರು.  ಕಾರ್ಪೊರೇಟ್ ಪ್ರಪಂಚಕ್ಕೆ ಆಕರ್ಷಿತರಾದ ಭಗತ್ , ಯಶಸ್ಸಿಗೆ ಕಾಲೇಜು ಪದವಿ ಅಗತ್ಯ ಎಂದು ತಿಳಿದು ಹಗಲಿನಲ್ಲಿ ಕೆಲಸ  ಮತ್ತು ಸಂಜೆಯ ಅನಿಮೇಷನ್ ತರಗತಿಗಳಿಗೆ ಹೋಗುತ್ತಿದ್ದರು. ಅನಿಮೇಷನ್ ಮತ್ತು ವಿನ್ಯಾಸದಲ್ಲಿ  ಉತ್ಸಾಹ ಹೆಚ್ಚಾಯ್ತು. ಭಗತ್ ಕೋರ್ಸ್ ಮುಗಿಸಿದ ನಂತರ ಮುಂಬೈನಲ್ಲಿ ಕೆಲಸ ಮಾಡಿದರು. ಅಲ್ಲಿಂದ ಹೈದರಾಬಾದ್‌ಗೆ ಸ್ಥಳಾಂತರಗೊಂಡರು.

ಹೈದರಾಬಾದ್‌ನ ವಿನ್ಯಾಸ ಮತ್ತು ಗ್ರಾಫಿಕ್ಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವಾಗಲೇ ಭಗತ್ ಪೈಥಾನ್ ಮತ್ತು C++ ಅನ್ನು ಅಧ್ಯಯನ ಮಾಡಿದರು. ವಿಷುವಲ್ ಎಫೆಕ್ಟ್ ರಚಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ರಿಸರ್ಚ್ ಮಾಡಿ, ಮರುಬಳಕೆ ಮಾಡಬಹುದಾದ ಟೆಂಪ್ಲೆಟ್ಗಳ ಗ್ರಂಥಾಲಯವನ್ನು ಕಂಪೈಲ್ ಮಾಡಲು ಇದು ಸಹಾಯಕವಾಗುತ್ತದೆ ಎಂಬುದನ್ನು ಕಂಡುಕೊಂಡರು. ಈ ವಿನ್ಯಾಸದ ಟೆಂಪ್ಲೇಟ್‌ಗಳನ್ನು ಮಾರಾಟ ಮಾಡಲು ಆನ್‌ಲೈನ್ ಸ್ಟೋರ್  ಪ್ರಾರಂಭಿಸಿದರು. 

ಬಳಿಕ ಕ್ಯಾನ್ವಾಗೆ ಹೋಲುವ ಆನ್‌ಲೈನ್ ಗ್ರಾಫಿಕ್ ವಿನ್ಯಾಸ ಸಾಧನಗಳನ್ನು ಒದಗಿಸುವ ವೆಬ್‌ಸೈಟ್ ಡೂಗ್ರಾಫಿಕ್ಸ್  ಸ್ಥಾಪನೆ ಮಾಡಿದರು.  ಕೇವಲ ಆರು ತಿಂಗಳಲ್ಲಿ, ಬೆಂಗಳೂರು, ದೆಹಲಿ, ಮಹಾರಾಷ್ಟ್ರ ಮತ್ತು ಇತರ ದೇಶಗಳು ಸೇರಿದಂತೆ ಪ್ರಪಂಚದಾದ್ಯಂತದ 10,000 ಸಕ್ರಿಯ ಬಳಕೆದಾರರು ಡೂಗ್ರಾಫಿಕ್ಸ್ ಅನ್ನು ಬಳಸುತ್ತಿದ್ದರು. DooGraphics ವಿಶ್ವಾದ್ಯಂತ ಒಂದು ಲಕ್ಷ ಬಳಕೆದಾರರನ್ನು ಹೊಂದಿದೆ ಮತ್ತು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಕಂಪನಿಯ ಸಂಸ್ಥಾಪಕ ದಾದಾಸಾಹೇಬ್ ಭಗತ್ ಅವರ ಜೀವನದಲ್ಲಿ ಬದಲಾವಣೆ ಮಾಡಿದೆ ಅದರ ಪ್ರಸ್ತುತ ನಿವ್ವಳ ಮೌಲ್ಯ 2 ಕೋಟಿ ರೂ. 

2015ರ ವೇಳೆಗೆ ಅವರ Ninthmotion ಕಂಪನಿ ತಲೆ ಎತ್ತಿ ನಿಂತಿತ್ತು. ಈಗ ಕಂಪನಿ ಬಿಬಿಸಿ ಸ್ಟುಡಿಯೋ, 9xm ನಂತಹ ಮ್ಯುಸಿಕ್ ಚ್ಯಾನೆಲ್ ಸೇರಿದಂತೆ ಸುಮಾರು 6000 ಗ್ರಾಹಕರಿಗೆ ತನ್ನ ಸೇವೆ ಸಲ್ಲಿಸುತ್ತಿದೆ.  ದಾದಾಸಾಹೇಬ್ ಭಗತ್ ಅವರು ಇನ್ಫೋಸಿಸ್ ಆಫೀಸ್ ಬಾಯ್‌ನಿಂದ ಎರಡು ಯಶಸ್ವಿ ವ್ಯವಹಾರಗಳಾದ ನಿಂತ್ಮೋಷನ್ ಮತ್ತು ಡೂಗ್ರಾಫಿಕ್ಸ್  ಸಿಇಒ ಆಗಿ ಪರಿವರ್ತನೆಯಾದ ರೀತಿ ಎಲ್ಲರಿಗೂ ಮಾದರಿಯಾಗಿದೆ.  ಭಗತ್‌ನ ಕಥೆಯು ಎಲ್ಲೆಲ್ಲೂ ಮಹತ್ವಾಕಾಂಕ್ಷಿ ಬಿಸಿನೆಸ್‌ ಮ್ಯಾನ್‌ಗಳನ್ನು  ಆಕರ್ಷಿಸುತ್ತದೆ.

click me!