ಇನ್ಸ್‌ಪೆಕ್ಟರ್ ಪತಿ ಹಾಗೂ ಮಹಿಳಾ ಪೊಲೀಸ್ ಚಕ್ಕಂದವನ್ನು ಪತ್ನಿ ರೆಡ್‌ಹ್ಯಾಂಡ್ ಆಗಿ ಹಿಡಿದ್ದಾರೆ. ಇಬ್ಬರು ಕೋಣೆಯೊಳಗೆ ಅಸಭ್ಯ ಭಂಗಿಯಲ್ಲಿರುವಾಗಲೇ ಪತ್ನಿ ಹಾಗೂ ಕುಟುಂಬ ಸದಸ್ಯರು ಎಂಟ್ರಿಕೊಟ್ಟಿದ್ದಾರೆ. ಇಬ್ಬರನ್ನು ಹಿಡಿದು ಸಾರ್ವಜನಿಕವಾಗಿ ಥಳಿಸಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
ಲಖನೌ(ಆ.04) ಅನ್ಯಾಯ, ಅಕ್ರಮಗಳನ್ನು ತಡೆದು ಜನರಿಗೆ ನ್ಯಾಯ ಕೊಡಿಸಬೇಕಾದ ಪೊಲೀಸ್ ಕಳ್ಳಾಟವಾಡಿದ ಕತೆ ಇದು. ಮುಜಾಫರನಗರದಲ್ಲಿನ ಪೊಲೀಸ್ ಇನ್ಸ್‌ಪೆಕ್ಟರ್ ಇದೀಗ ಪತ್ನಿ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಅದೂ ಕೂಡ ಆಗ್ರಾದ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ಜೊತೆ ಒಂದೇ ಕೋಣೆಯಲ್ಲಿ ಅಶ್ಲೀಲ ಭಂಗಿಯಲ್ಲಿರುವಾಗಲೇ ಸಿಕ್ಕಿಬಿದ್ದಿದ್ದಾನೆ. ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಇಬ್ಬರನ್ನು ಹಿಡಿದು ಹಿಗ್ಗಾ ಮುಗ್ಗಾ ಚಚ್ಚಿದ್ದಾರೆ. ಕಳ್ಳರು, ನಿಯಮ ಮೀರುವವರಿಗೆ ಚಟಾಪಟಾ ಶಾಸ್ತಿ ಮಾಡುತ್ತಿದ್ದ ಇನ್ಸ್‌ಪೆಕ್ಟರ್ ಇದೀಗ ಸಾರ್ವಜನಿಕರೆದುರೇ ತಲೆ ತಗ್ಗಿಸಿದ್ದಾರೆ. ಈ ಘಟನೆಯ ದೃಶ್ಯ ಭಾರಿ ವೈರಲ್ ಆಗಿದೆ.
ಪತಿ ಇನ್ಸ್‌ಪೆಕ್ಟರ್. ಆದರೆ ಪತಿಯ ನಡೆ ಮಾತ್ರ ಪತ್ನಿಗೆ ಅನುಮಾನ ಹುಟ್ಟಿಸಿದೆ. ಮಹಿಳಾ ಪೊಲೀಸ್ ಜೊತೆ ಪತಿಗೆ ಸಂಬಂಧ ಇದೆ ಅನ್ನೋ ಸುದ್ದಿ ಪತ್ನಿಯ ಕಿವಿಗೆ ಬಿದ್ದಿದೆ. ಆದರೆ ಯಾವುದೇ ದಾಖಲೆ ಇರಲಿಲ್ಲ. ಆದರೆ ಇನ್ಸ್‌ಪೆಕ್ಟರ್ ಪತಿಯ ಚಕ್ಕಂದ ಪ್ರತಿ ದಿನ ಸಾಗಿತ್ತು. ಹೀಗಿರುವಾಗ ಪೊಲೀಸ್ ಇನ್ಸ್‌ಪೆಕ್ಟರ್ ಪತಿಗೆ ನೀಡಿರುವ ಸರ್ಕಾರಿ ಅಧಿಕೃತ ಮನೆಗೆ ಆಗ್ರಾದ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ಕರೆದುಕೊಂಡು ಹೋಗಿದ್ದ. ಇನ್ಸ್‌ಪೆಕ್ಟರ್ ಕುಟುಂಬ ಸ್ವಂತ ಮನೆಯಲ್ಲಿ ವಾಸವಿತ್ತು.
ಇವನೆಂತಾ ಗಂಡ? ಪತ್ನಿಗೆ ಪೊರ್ನ್ ವಿಡಿಯೋ ತೋರಿಸಿ ಆಫ್ರಿಕಾ ಪುರುಷನ ಜೊತೆ ಸೆಕ್ಸ್‌ಗೆ ಒತ್ತಾಯ!
ಈ ಮಾಹಿತಿ ಪತ್ನಿ ಕಿವಿಗೆ ಬಿದ್ದಿದೆ. ತಕ್ಷಣವೇ ಪತ್ನಿ ಸ್ಥಳಕ್ಕೆ ಧಾವಿಸಿದ್ದಾಳೆ. ಇದೇ ವೇಳೆ ಪತ್ನಿ ಸಹದೋರರು ಹಾಗೂ ಕುಟುಂಬಸ್ಥರು ಆಗಮಿಸಿದ್ದಾರೆ. ನೇರವಾಗಿ ಇನ್ಸ್‌ಪೆಕ್ಟರ್ ಮನೆಗೆ ತೆರಳಿದ ಪತ್ನಿ ತನ್ನಲ್ಲಿರುವ ಮತ್ತೊಂದು ಕೀ ಬಳಸಿ ಬಾಗಿಲು ತೆರೆದಿದ್ದಾರೆ. ಈ ವೇಳೆ ಇನ್ಸ್‌ಪೆಕ್ಟರ್ ಪತಿ ಹಾಗೂ ಆಗ್ರಾ ಮಹಿಳಾ ಇನ್ಸ್‌ಪೆಕ್ಟರ್ ಅಸಭ್ಯ ಭಂಗಿಯಲ್ಲಿದ್ದರು. ಇಬ್ಬರನ್ನು ಹಿಡಿದೆಳಿದು ಹೊರ ತಂದ ಪತ್ನಿ ಸಾರ್ವಜನಿಕರ ಮುಂದೆ ಥಳಿಸಿದ್ದಾರೆ.
उत्तर प्रदेश : आगरा में महिला इंस्पेक्टर के कमरे पर पुरुष इंस्पेक्टर साहब "रंगे हाथों" धर लिए गए। दोनों की खूब पिटाई हुई। महिला इंस्पेक्टर आगरा और पुरुष इंस्पेक्टर मुजफ्फरनगर में पोस्टेड हैं। पुरुष इंस्पेक्टर साहब के नोएडा में भी खूब चर्चे रहे हैं।pic.twitter.com/miDKmQqya9
— Sachin Gupta (@SachinGuptaUP)
ಇನ್ಸ್‌ಪೆಕ್ಟರ್ ಪತಿ ಹಾಗೂ ಮಹಿಳಾ ಇನ್ಸ್‌ಪೆಕ್ಟರ್‌ಗೆ ಪತ್ನಿಯ ಕಟುಂಬಸ್ಥರು ಹಿಗ್ಗಾ ಮುಗ್ಗಾ ಚಚ್ಚಿದ್ದಾರೆ. ಸ್ಥಳದಿಂದ ಪರಾರಿಯಾಗಲು ಇನ್ಸ್‌ಪೆಕ್ಟರ್ ಪತಿ ಪ್ರಯತ್ನಿಸಿದ್ದಾನೆ. ಆದರೆ ಸಾಧ್ಯವಾಗಿಲ್ಲ. ಇದನ್ನು ಕೆಲವರು ವಿಡಿಯೋ ಮಾಡಿದ್ದಾರೆ. ಇಷ್ಟಕ್ಕೇ ಮುಗಿದಿಲ್ಲ. ಇಬ್ಬರು ರೆಡ್‌ಹ್ಯಾಂಡ್ ಆಗಿ ಹಿಡಿದ ಪತ್ನಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ್ದಾಳೆ.
ಐವರ ಜೊತೆ ಮದುವೆ, 49 ಹುಡ್ಗೀರ ಜೊತೆ ಮುಹೂರ್ತ ಫಿಕ್ಸ್: ಬೆಚ್ಚಿ ಬೀಳಿಸಿದ ವಂಚಕನ ಲೈಫ್‌ಸ್ಟೈಲ್!
ಮುಜಾಫರ ನಗರ ಹಾಗೂ ಆಗ್ರಾ ಎರಡು ಠಾಣೆಯ ಇನ್ಸ್‌ಪೆಕ್ಟರ್ ವಿರುದ್ದ ಪ್ರಕರಣ ದಾಖಲಾಗಿದೆ. ಇಬ್ಬರು ಸದ್ಯ ಅಮಾನತ್ತಾಗಿದ್ದಾರೆ. ಇತ್ತ ಪತ್ನಿ ಮತ್ತೊಂದು ನಿರ್ಧಾರ ಮಾಡಿದ್ದಾಳೆ. ಪತಿಯಿಂದ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾಳೆ.