
ಅರಬ್ಬಿ ಸಮುದ್ರದ ತೀರದಲ್ಲಿ ಕಾಲ ಕಳೆಯುತ್ತಿರುವ ಸಿಂಹವೊಂದರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಡಿನಲ್ಲಿ ಕಾಲ ಕಳೆಯುವ ಸಿಂಹಗಳು ಕೂಡ ಸಮುದ್ರ ತೀರದಲ್ಲಿ ಅಲೆದಾಡಲು ಬಯಸುತ್ತವೆ ಎಂಬುದನ್ನು ಸಾಬೀತುಪಡಿಸುತ್ತಿದೆ. ಬೀಚ್ ಹಾಗೂ ಸಮುದ್ರ ತೀರವನ್ನು ಇಷ್ಟಪಡದವರಿಲ್ಲ, ಪ್ರತಿಯೊಬ್ಬರು ಕೂಡ ಜೀವಮಾನದಲ್ಲೊಮ್ಮೆ ಸಮುದ್ರ ತೀರದಲ್ಲಿ ಅಲೆದಾಡಬೇಕು, ನೀರಿನಲ್ಲಿ ಆಟವಾಡಬೇಕು, ಉಕ್ಕಿ ಬರುವ ಅಲೆಗಳಿಗೆ ಮೈಯೊಡ್ಡಿ ನಿರಾಳರಾಗಬೇಕು ಎಂದು ಬಯಸುತ್ತಾರೆ. ಅದೇ ರೀತಿ ಇಲ್ಲಿ ಸಿಂಹವೂ ಬೀಚ್‌ನಲ್ಲಿ ಕಾಲ ಕಳೆಯುತ್ತಿರುವ ಸುಂದರ ಫೋಟೋವೊಂದು ವೈರಲ್ ಆಗಿದೆ.
ಗುಜರಾತ್‌ನ ಜುನಾಗಢ್ ಸಮೀಪ ಸೆರೆ ಹಿಡಿದ ದೃಶ್ಯ ಇದಾಗಿದ್ದು, ಉಕ್ಕಿ ಬರುವ ಸಮುದ್ರದ ಅಲೆಗಳನ್ನು ಕಣ್ತುಂಬಿಕೊಳ್ಳುತ್ತಾ ಸಿಂಹವೊಂದು ನಿಂತಿದೆ. ಸಿಸಿಎಫ್ ಜುನಾಗಢ್ ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ಫೋಟೊ ಅಪ್‌ಲೋಡ್ ಆಗಿದ್ದು, ಸಾವಿರಾರು ಜನ ವೀಕ್ಷಿಸಿದ್ದಾರೆ. ಭದ್ರವ ಪೂನಂ ಗಸ್ತಿನ ವೇಳೆ ದರಿಯಾ ಕಂಠ ಪ್ರದೇಶದಲ್ಲಿ ಸಿಂಹವೊಂದು ಕಾಣಿಸಿಕೊಂಡಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಈ ಫೋಟೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಕೂಡ ಹಂಚಿಕೊಂಡಿದ್ದು, 'ನರ್ನಿಯಾ ನಿಜವಾಗಿ ಕಾಣಿಸಿಕೊಂಡಾಗ, ಗುಜರಾತ್‌ನ ಸಮುದ್ರ ತೀರದಲ್ಲಿ ಸಿಂಹವೊಂದು ಅಲೆಗಳನ್ನು ಎಂಜಾಯ್ ಮಾಡುತ್ತಿರುವ ದೃಶ್ಯ ಎಂದು ಅವರು ಬರೆದುಕೊಂಡಿದ್ದಾರೆ. (ನಾರ್ನಿಯಾ ಎಂಬುದು ಸಿಂಹಗಳ ಸಿನಿಮಾವಾಗಿದೆ. ದಿ ಕ್ರಾನಿಕಲ್ಸ್ ಆಫ್ ನಾರ್ನಿಯಾ ಎಂಬ ಸಿಂಹಗಳ ಸಿನಿಮಾ ಸಿರೀಸ್ ಇದ್ದು, ಎಲ್, ಎಸ್ ಲೂಯಿಸ್ ಅವರ ಕಾದಂಬರಿ ಆಧರಿಸಿ ಸಿನಿಮಾ ಮಾಡಲಾಗಿದೆ)
ಕಬಿನಿಯಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾದ ಕರಿಯ... ಕರಿಚಿರತೆಯ ಸುಂದರ ಫೋಟೋಗಳು
ಮತ್ತೊಂದು ಪೋಸ್ಟ್‌ನಲ್ಲಿ ಪರ್ವೀನ್ ಕಸ್ವಾನ್ ಅವರು ಅವರು ಏಷ್ಯಾಟಿಕ್ ಲಯನ್ಸ್ ಕುರಿತ ಸಂಶೋಧನಾ ಪ್ರಬಂಧವನ್ನು ಹಂಚಿಕೊಂಡಿದ್ದಾರೆ. 'ಆಸಕ್ತರು ಏಷ್ಯಾಟಿಕ್ ಸಿಂಹಗಳ ಬಗ್ಗೆ ಇರುವ ಈ ಪತ್ರಿಕೆಯನ್ನು ಓದಬಹುದು. ಮೋಹನ್ ರಾಮ್ ಮತ್ತು ಇತರರು ಬರೆದ 'ಸಮುದ್ರ-ತೀರದಲ್ಲಿ ವಾಸಿಸುವುದು: ಏಷ್ಯಾಟಿಕ್ ಸಿಂಹಗಳ ಶ್ರೇಣಿ ಮತ್ತು ಆವಾಸಸ್ಥಾನ ವಿತರಣೆ' ನೇಚರ್ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ಕೇಂದ್ರೀಕೃತವಾಗಿರುವ ಏಷ್ಯಾಟಿಕ್ ಸಿಂಹಗಳು ಈಗ ಗುಜರಾತ್‌ನ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ ಎಂಬುದು ಅಧ್ಯಯನ ವರದಿಯಲ್ಲಿದೆ.
ತಮ್ಮ ವ್ಯಾಪ್ತಿಯಾದ್ಯಂತ, ಸಿಂಹಗಳು ವ್ಯಾಪಕವಾದ ಆವಾಸಸ್ಥಾನದ ಪ್ರದೇಶಗಳನ್ನು ಆಕ್ರಮಿಸುತ್ತವೆ ಎಂದು ತಿಳಿದು ಬಂದಿದೆ. ಗುಂಪಿನಿಂದ ದೂರ ಉಳಿದ ಪ್ರತ್ಯೇಕವಾಗಿ ವಾಸಿಸುವ ಸಿಂಹಗಳಿಗೆ ಕರಾವಳಿ ಆವಾಸಸ್ಥಾನಗಳಾಗಿವೆ. ಸೂತ್ರಪಾದದ ಕರಾವಳಿ ಆವಾಸಸ್ಥಾನಗಳಲ್ಲಿ ಸಿಂಹಗಳ ಇರುವಿಕೆ 1990 ರ ದಶಕದ ಮಧ್ಯಭಾಗದಲ್ಲಿ ದಾಖಲಾಗಿತ್ತು. ಅಂದಿನಿಂದ, ನಾಲ್ಕು ಜಿಲ್ಲೆಗಳಾದ್ಯಂತ ವಿಸ್ತರಿಸಿರುವ ಕರಾವಳಿ ಪ್ರದೇಶಗಳಲ್ಲಿ ಸಿಂಹಗಳ ಉಪಸ್ಥಿತಿ ನಿರಂತರ ಇದೆ ಎಂದು ಅಧ್ಯಯನ ವರದಿ ಹೇಳಿದೆ.
ಬಿಟ್ಟು ಹೋಗುತ್ತಿದ್ದ ಒಡೆಯನ ಬೈಕ್ ಏರದಂತೆ ತಡೆದ ಆನೆ: ಭಾವುಕ ವೀಡಿಯೋ ವೈರಲ್
ಪರ್ವೀನ್ ಕಸ್ವಾನ್ ಅವರ ಈ ಪೋಸ್ಟ್‌ನ್ನು 4 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಸಿಂಹ ರಜಾ ದಿನ ಕಳೆಯಲು ಬೀಚ್‌ಗೆ ಬಂದಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ಇದನ್ನು ನರ್ನಿಯಾ ಸಿನಿಮಾದ ಸ್ಕ್ರೀನ್‌ಶಾಟ್ ಎಂದು ಭಾವಿಸಿದ್ದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ