ಕೇರಳದಲ್ಲಿ ಎಲ್‌ಡಿಎಫ್‌ - ಎನ್‌ಡಿಎ ಸರ್ಕಾರ; ತಮಿಳುನಾಡಲ್ಲಿ ನಡೆಯುತ್ತಿದೆ ರಾಜಕೀಯ ಮಂಥನ: ಈ ಹಿರಿಯ ಕೈ ನಾಯಕನಿಗೆ ಅವಮಾನ!

By Suvarna News  |  First Published Oct 2, 2023, 3:50 PM IST

ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ಆಗಾಗ್ಗೆ ತೆರೆ ಹಿಂದೆ ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ಬೆಳಕಿಗೆ ಬರೋದೇ ಇಲ್ಲ, ಕೇವಲ ಗುಸುಗುಸು ಪಿಸುಪಿಸು ಎಂಬಂತೆ ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ಇಂತಹ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ..


ಕೇರಳದಲ್ಲಿ ಎಲ್‌ಡಿಎಫ್‌ - ಎನ್‌ಡಿಎ ಸರ್ಕಾರ!

ಕೇರಳದ ಎಡ ಸರ್ಕಾರಕ್ಕೆ ಅಭೂತಪೂರ್ವ ಬಿಕ್ಕಟ್ಟು ಎದುರಾಗಿದೆ. ಕರ್ನಾಟಕದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರು ಎನ್‌ಡಿಎ ಜೊತೆ ಕೈಜೋಡಿಸುತ್ತಿರುವುದರಿಂದ ಎಲ್‌ಡಿಎಫ್ ಇಕ್ಕಟ್ಟಿಗೆ ಸಿಲುಕಿದೆ. ಏಕೆಂದರೆ, ಕೇರಳದಲ್ಲಿ ಜೆಡಿಎಸ್ ಎಡರಂಗದ ಭಾಗವಾಗಿದ್ದು, ಸಂಪುಟದ ಸಚಿವರಲ್ಲಿ ಒಬ್ಬರಾದ ಕೆ ಕೃಷ್ಣನ್ ಕುಟ್ಟಿ  ಜೆಡಿಎಸ್ ಅನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಇಂಧನ ಖಾತೆಯನ್ನು ಹೊಂದಿದ್ದಾರೆ.

Tap to resize

Latest Videos

ಈ ಹಿನ್ನೆಲೆ ಇದನ್ನು ಟೀಕಿಸಿರೋ ಕಾಂಗ್ರೆಸ್, ಕೇರಳದಲ್ಲಿ ಇಂದು ಎಲ್‌ಡಿಎಫ್ - ಎನ್‌ಡಿಎ ಸರ್ಕಾರವಿದೆ ಎಂದು ಹೇಳಿದ್ದಾರೆ. ಈ ಸಮಸ್ಯೆಯನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಸುಳಿವಿಲ್ಲದ ಎಲ್‌ಡಿಎಫ್, ಜೆಡಿಎಸ್ ತನ್ನ ರಾಜಕೀಯ ನಿಲುವನ್ನು ಬಹಿರಂಗವಾಗಿ ಘೋಷಿಸಿ ಎಡಪಕ್ಷಗಳನ್ನು ಮುಜುಗರದಿಂದ ಪಾರು ಮಾಡುವಂತೆ ತಿಳಿಸಿದೆ.

ಇದನ್ನು ಓದಿ: ಈ ರಾಜ್ಯದ ಸಿಎಂ ಕೋಪಕ್ಕೆ ಕಾರಣವೇ ಇಲ್ಲ: I.N.D.I.A ಮೈತ್ರಿಕೂಟಕ್ಕೆ ರೆಡ್‌ ಕಾರ್ಡ್‌ ಆತಂಕ!

ಈ ಮಧ್ಯೆ, ಜೆಡಿಎಸ್ ಕೇರಳ ಬಣವು ಲೋಕತಾಂತ್ರಿಕ್ ಜನತಾ ದಳ (ಎಲ್‌ಜೆಡಿ) ಯೊಂದಿಗೆ ವಿಲೀನಗೊಳ್ಳುವ ಕೆಲವೇ ಆಯ್ಕೆಗಳನ್ನು ಹೊಂದಿದೆ. ಅಥವಾ ಕೇರಳ ಘಟಕವು ಪಕ್ಷದೊಂದಿಗೆ ಸಂಬಂಧವನ್ನು ಕಳೆದುಕೊಳ್ಳಬೇಕಾಗುತ್ತದೆ ಮತ್ತು ಅದನ್ನು ಹೊಸ ಘಟಕವಾಗಿ ಮರುನಾಮಕರಣ ಮಾಡಬೇಕಾಗುತ್ತದೆ.

 ಸಹಕಾರ ಅಕ್ರಮ!

ಸಹಕಾರಿ ಬ್ಯಾಂಕ್ ಮಾರ್ಗವನ್ನು ಅಕ್ರಮವಾಗಿ ಹಣ ವರ್ಗಾವಣೆಗೆ ಬಳಸಿಕೊಳ್ಳಲಾಗಿದೆ ಎಂಬುದಕ್ಕೆ ಕೇರಳ ಸಾಕ್ಷಿಯಾಗಿದೆ. ಕರಿವಣ್ಣೂರು ಸಹಕಾರಿ ಬ್ಯಾಂಕ್ ಹಗರಣವು ಇದರ ನಂಟು ಎಷ್ಟು ಆಳವಾಗಿದೆ ಎಂಬುದನ್ನು ಬಹಿರಂಗಪಡಿಸಿದೆ. ಹಿರಿಯ ಕಾಮ್ರೇಡ್ ಎಸಿ ಮೊಯ್ದೀನ್ ಅವರ ನಿಕಟವರ್ತಿಯೊಬ್ಬರು ಇಡಿ ಬಂಧನದಲ್ಲಿದ್ದು, ಇತರ ಕೆಲವು ಉನ್ನತ ಪಕ್ಷದ ಸದಸ್ಯರು ತನಿಖಾ ಸಂಸ್ಥೆಯ ರಾಡಾರ್‌ನಲ್ಲಿದ್ದಾರೆ ಮತ್ತು ಅವರನ್ನು ಕೆಲವು ಬಾರಿ ಪ್ರಶ್ನಿಸಲಾಗಿದೆ.

ಇದನ್ನೂ ಓದಿ: ಸೋಲಾರ್‌ ಬಿರುಗಾಳಿಗೆ ನಲುಗಿದ ಎರಡೂ ಪಕ್ಷಗಳು: ಈ ರಾಜ್ಯದ ಸಿಎಂ ತಂದೆಗಿಂತ ಹೆಚ್ಚು ಎಂದ ಹಾಸ್ಯ ನಟ!

ದುರದೃಷ್ಟವಶಾತ್, ಹಣ ಕಳೆದುಕೊಂಡ ಠೇವಣಿದಾರರೂ ಪಕ್ಷದ ಸದಸ್ಯರಾಗಿದ್ದಾರೆ. ಪರಿಸ್ಥಿತಿಯನ್ನು ಪರಿಹರಿಸುವ ಉದ್ದೇಶದಿಂದ, ಎಲ್ಲಾ ಸಹಕಾರಿ ಬ್ಯಾಂಕ್‌ಗಳನ್ನು ಒಳಗೊಳ್ಳುವ ಕೇರಳ ಬ್ಯಾಂಕ್ ಶೀಘ್ರದಲ್ಲೇ ತನ್ನ ಠೇವಣಿದಾರರಿಗೆ ಮರುಪಾವತಿ ಮಾಡಲು ಕರುವಣ್ಣೂರು ಬ್ಯಾಂಕ್‌ಗೆ 100 ಕೋಟಿ ಸಾಲವನ್ನು ನೀಡಲಿದೆ ಎಂದು ತಿಳಿದುಬಂದಿದೆ.

ಆದರೆ ಯಾವುದೇ ಠೇವಣಿದಾರರು ತಮ್ಮ ಪಕ್ಷದ ನಾಯಕರನ್ನು ಕ್ಷಮಿಸುವ ಮನಸ್ಥಿತಿಯಲ್ಲಿಲ್ಲ. ತಮ್ಮ ಠೇವಣಿ ವಾಪಸ್‌ ಬಂದರೂ, ಈ ಬಾರಿ ಯಾವುದೇ ನಾಯಕರನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸೂರ್ಯಂಗೆ ಟಾರ್ಚ್‌ ಹಿಡಿಯೋಕೋಗಿ ನೋ ಬಾಲ್‌ ಎಸೆದ ಕಾರ್ಯಕರ್ತರು: ಬಿಗ್‌ಬಾಸ್‌ ಆದೇಶಕ್ಕೆ ಸಚಿವರು ಕಂಗಾಲು!

ರಾಜಸ್ಥಾನ ಸಿಎಂರಿಂದ ಅವಮಾನ!
ಒಬ್ಬ ರಾಜಕೀಯ ನಾಯಕನಿಗೆ, ಮುಖ್ಯಮಂತ್ರಿ ಮುಖ್ಯ ಅತಿಥಿಯಾಗಿರುವ ಸಮಾರಂಭದಲ್ಲಿ ತನ್ನನ್ನು ತಾನು ಅಪ್ರಸ್ತುತ ಎಂದು ಕಂಡುಕೊಳ್ಳುವುದಕ್ಕಿಂತ ಹೆಚ್ಚಿನ ಅವಮಾನ ಮತ್ತೊಂದಿಲ್ಲ. ರಾಜಸ್ಥಾನದ ಜೈಪುರದಲ್ಲಿ ನಡೆದ ಕಾಸ್ಮೋಪಾಲಿಟನ್ ಕ್ಲಬ್ ಉದ್ಘಾಟನಾ ಸಮಾರಂಭದಲ್ಲಿ ಸಿಎಂಗೆ ಅತ್ಯಂತ ಆತ್ಮೀಯ ಎಂದು ಭಾವಿಸಲಾದ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಉನ್ನತ ನಾಯಕರಿಗೆ ಸಿಎಂ ಕಚೇರಿಯಿಂದ ವೈಯಕ್ತಿಕ ಆಹ್ವಾನವೂ ಬಂದಿದೆ. ರಿಬ್ಬನ್ ಕಟ್ ಮಾಡಲು ಸಿಎಂ ಜತೆಗೂಡಿದ ಹಲವು ನಾಯಕರಲ್ಲಿ ಅವರೂ ಸೇರಿದ್ದರು..

ಆದರೆ ಕಾರ್ಯಕ್ರಮದ ಪೋಸ್ಟರ್‌ಗಳ ಮೇಲೆ ಅವರ ಫೋಟೋ ನಾಪತ್ತೆಯಾಗಿದ್ದನ್ನು ನೋಡಿದರು. ವಿಐಪಿಗಳ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗಿತ್ತು. ಇದರಿಂದ ಕೋಪಗೊಂಡ ಆ ನಾಯಕ ಸದ್ದಿಲ್ಲದೆ ಸ್ಥಳದಿಂದ ನಿರ್ಗಮಿಸಿದರು. ಲೋಪವು ಉದ್ದೇಶಪೂರ್ವಕವೇ ಅಥವಾ ಪ್ರಮಾದವೇ ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: ಬಡತನ ನಿವಾರಣೆಗೆ ಸಿಪಿಎಂ ಹೊಸ ಪ್ಲ್ಯಾನ್‌; ವಿಷ ಕಾರಿದ ಈ ರಾಜ್ಯದ ರಾಜಕಾರಣಿ! ರಿಯಲ್ 'ಜೈಲರ್' ಸ್ಟೋರಿ ಹೀಗಿದೆ..

ತಮಿಳುನಾಡಿನಲ್ಲಿ ರಾಜಕೀಯ ಮಂಥನ
ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿ ಕಡಿದು ಹೋಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾರೀ ರಾಜಕೀಯ ಮಂಥನ ನಡೆಯುತ್ತಿದೆ. 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ, ಎಐಎಡಿಎಂಕೆಯ ಎರಡೂ ಬಣಗಳು ಒಟ್ಟಿಗೆ ಮೈತ್ರಿ ಮಾಡಿಕೊಳ್ಳಲು ವಿವಿಧ ಪಕ್ಷಗಳನ್ನು ಓಲೈಸುತ್ತಿವೆ.

ಕೊಯಮತ್ತೂರು, ಈರೋಡ್ ಮತ್ತು ಸೇಲಂನ ಕೊಂಗು ಪ್ರದೇಶದಲ್ಲಿ ಪ್ರಬಲವಾಗಿರುವ ಎಡಪ್ಪಾಡಿ ಬಣವು ಮಾತುಕತೆಯಲ್ಲಿದೆ ಮತ್ತು ವಿಸಿಕೆ ಅಥವಾ ಎನ್‌ಟಿಪಿ ಪಕ್ಷಗಳಿಗೆ 10 ಸ್ಥಾನಗಳನ್ನು ಬಿಟ್ಟುಕೊಡಲು ಸಿದ್ಧವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಹೇಗಿದೆ ನೋಡಿ ಅಲ್ಲು ಅರ್ಜುನ್ ಮಾವನ ‘ಪಾಲಿಟ್ರಿಕ್ಸ್‌’: RSS ಅಲ್ಲ, ಎಡ ಪಕ್ಷದ ಸಿದ್ಧಾಂತ ಫಾಲೋ ಮಾಡ್ತಿದ್ದ ಸಾವರ್ಕರ್‌?

2019 ರ ಲೋಕಸಭಾ ಚುನಾವಣೆಯಲ್ಲಿ, ಡಿಎಂಕೆ 33.52% ಮತಗಳನ್ನು ಗಳಿಸಿದ್ದು, ಎಐಎಡಿಎಂಕೆಯ ಮತ ಪಾಲು 19.30%. ಕಾಂಗ್ರೆಸ್ 12.61% ಪಡೆದರೆ, ಪಟ್ಟಲಿ ಮಕ್ಕಳ್ ಕಚ್ಚಿ (ಪಿಎಂಕೆ) 5.36% ಗಳಿಸಿದ್ದರೆ ವಿಜಯಕಾಂತ್ ಅವರ ಡಿಎಂಡಿಕೆ 2.16% ಮತ್ತು VCK 1.16% ಗಳಿಸಿದೆ.

ಡಿಎಂಕೆ ಜೊತೆ ಪಿಎಂಕೆ ಕೈ ಜೋಡಿಸಲು ಸಜ್ಜಾಗಿದೆ ಎನ್ನಲಾಗಿದ್ದು, ಆರಂಭಿಕ ಮಾತುಕತೆ ನಡೆಯುತ್ತಿದೆ. ಇನ್ನು, ಪಿಎಂಕೆಗೆ ರಾಜ್ಯಸಭಾ ಸ್ಥಾನ ನೀಡಲಾಗುವುದು ಮತ್ತು ಈ ಸೂತ್ರವು ಎರಡೂ ಪಕ್ಷಗಳಿಗೆ ಪರಸ್ಪರ ಸ್ವೀಕಾರಾರ್ಹವಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ 100 ರನ್‌ ಹೊಡೆಯಲು ಕಾಂಗ್ರೆಸ್‌ ಹರಸಾಹಸ: ವಿಪಕ್ಷಗಳಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗು ಗುರು!

click me!