
ನವದೆಹಲಿ: ಇತ್ತೀಚಿನ ವರ್ಷಗಳಲ್ಲೇ ಅತಿ ದೊಡ್ಡದು ಎನ್ನಲಾದ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆ (Indian Navy) ಅರಬ್ಬಿ ಸಮುದ್ರದಲ್ಲಿ ಅನೇಕ ಯುದ್ಧವಿಮಾನಗಳು, ಯುದ್ಧನೌಕೆಗಳು, ಸಬ್‌ಮರೀನ್ ಮುಂತಾದವುಗಳನ್ನು ನಡೆಸಿ ಬೃಹತ್ ಸಮರಾಭ್ಯಾಸ ನಡೆಸಿದೆ. ತನ್ಮೂಲಕ, ಹಿಂದೂ ಮಹಾಸಾಗರದಲ್ಲಿ (Indian Ocean)ತನ್ನ ಉಪಸ್ಥಿತಿ ಹೆಚ್ಚಿಸಿಕೊಳ್ಳಲು ಹವಣಿಸುತ್ತಿರುವ ಚೀನಾಕ್ಕೆ ಬಲವಾದ ಸಡ್ಡು ಹೊಡೆದಿದೆ.
ನೌಕಾಪಡೆ ನಡೆಸಿದ ಈ ಸಮರಾಭ್ಯಾಸದಲ್ಲಿ 35 ಯುದ್ಧವಿಮಾನಗಳು, ಎರಡು ಯುದ್ಧವಿಮಾನ ವಾಹಕ ನೌಕೆಗಳು, ಅನೇಕ ಯುದ್ಧನೌಕೆಗಳು ಹಾಗೂ ಸಬ್‌ಮರೀನ್‌ಗಳನ್ನು (warships and submarines) ಬಳಸಿಕೊಳ್ಳಲಾಗಿದೆ. ಐಎನ್‌ಎಸ್ ವಿಕ್ರಮಾದಿತ್ಯ ಹಾಗೂ ಇತ್ತೀಚೆಗೆ ನೌಕಾಪಡೆಗೆ ಸೇರ್ಪಡೆಯಾದ ಐಎನ್‌ಎಸ್ ವಿಕ್ರಾಂತ್ (INS Vikrant) ಯುದ್ಧವಿಮಾನ ವಾಹಕ ನೌಕೆಗಳು ಸಮರಾಭ್ಯಾಸದ ಕೇಂದ್ರಬಿಂದುವಾಗಿದ್ದವು. ಈ ನೌಕೆಗಳಿಂದ ಅನೇಕ ಮಿಗ್-29ಕೆ ವಿಮಾನಗಳು (MiG-29K aircraft) ಹಾಗೂ ಎಂಎಚ್60ಆರ್, ಕಮೋವ್, ಸುಧಾರಿತ ಹಗುರ ಹೆಲಿಕಾಪ್ಟರ್‌ಗಳೂ ಸೇರಿದಂತೆ ನಾನಾ ಹೆಲಿಕಾಪ್ಟರ್‌ಗಳು ಹಾರಾಟ ನಡೆಸಿವೆ. ಇತ್ತೀಚೆಗೆ ಈ ಸಮರಾಭ್ಯಾಸ ನಡೆದಿದೆ ಎಂದಷ್ಟೇ ನೌಕಾಪಡೆ ಶನಿವಾರ ಅಧಿಕೃತವಾಗಿ ತಿಳಿಸಿದೆ. ಯಾವಾಗ ಮತ್ತು ಸ್ಥಳ ಯಾವುದು ಎಂಬುದನ್ನು ತಿಳಿಸಿಲ್ಲ.
Belagavi: ಮೈನವಿರೇಳಿಸಿದ ಇಂಡೋ - ಜಪಾನೀಸ್ ಜಂಟಿ ಸಮರಾಭ್ಯಾಸ
ಮೈಲುಗಲ್ಲು- ನೌಕಾಪಡೆ ಹರ್ಷ:
ಅಗತ್ಯ ಸಂದರ್ಭದಲ್ಲಿ ಯುದ್ಧನೌಕೆಗಳು, ಯುದ್ಧವಿಮಾನಗಳು, ಯುದ್ಧವಿಮಾನ ವಾಹಕ ನೌಕೆಗಳು ಹಾಗೂ ಸಬ್‌ಮರೀನ್‌ಗಳ ನಡುವೆ ಹೊಂದಾಣಿಕೆಯಿಂದ ಹೇಗೆ ಕಾರ್ಯಾಚರಣೆ ನಡೆಸಬೇಕು ಎಂಬುದನ್ನು ಅಭ್ಯಾಸ ಮಾಡಲಾಯಿತು. ಇದು ಸಮುದ್ರದಲ್ಲಿ ಭಾರತದ ಮಿಲಿಟರಿ ಶಕ್ತಿಯನ್ನು ಶ್ರುತಪಡಿಸಿದ್ದು, ಹಿಂದೂ ಮಹಾಸಾಗರ ಮತ್ತು ಅದರಾಚೆಗೂ ಕಾರ್ಯಾಚರಣೆ ನಡೆಸಬಲ್ಲ ನಮ್ಮ ಸಾಮರ್ಥ್ಯದ ಅನಾವರಣದಲ್ಲಿ ಮಹತ್ವದ ಮೈಲುಗಲ್ಲಾಗಿದೆ’ ಎಂದು ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಧ್ವಾಲ್ (Commander Vivek Madhwal) ತಿಳಿಸಿದ್ದಾರೆ.
ಭಾರತ ಯಾವುದೇ ದೇಶದ ಮಿಲಿಟರಿ ಮೈತ್ರಿಯ ಭಾಗವಾಗಿಲ್ಲ: ಅಮೆರಿಕ ಜತೆಗಿನ ಸಂಬಂಧದ ಬಗ್ಗೆ ಚೀನಾಗೆ ಸ್ಪಷ್ಟನೆ
‘ಕಾರ್ಯಾಚರಣೆಯ ವೇಳೆ ಸಮುದ್ರದಲ್ಲಿ ಚಲಿಸುತ್ತಿದ್ದ ಐಎನ್‌ಎಸ್ ವಿಕ್ರಾಂತ್ ಹಾಗೂ ಐಎನ್‌ಎಸ್ ವಿಕ್ರಾಂತ್‌ನಿಂದ ಭಾರತೀಯ ನೌಕಾಪಡೆಯ ಬಹುತೇಕ ಎಲ್ಲಾ ವಿಮಾನ ಮತ್ತು ಹೆಲಿಕಾಪ್ಟರ್‌ಗಳೂ ಹಾರಾಟ ನಡೆಸಿವೆ. ನಮ್ಮ ಯುದ್ಧವಿಮಾನ ವಾಹಕ ನೌಕೆಗಳನ್ನು ಎಲ್ಲಿ ಬೇಕಾದರೂ ನಿಯೋಜಿಸಬಹುದು ಎಂಬುದು ನಮಗೀಗ ಖಾತ್ರಿಯಾಗಿದೆ. ಸಮುದ್ರದಲ್ಲಿ ನಮ್ಮ ದೇಶದ ರಕ್ಷಣೆಗಷ್ಟೇ ಅಲ್ಲ, ಮಿತ್ರರಿಗೂ ನೆರವು ನೀಡಲು ನಾವು ಸಮರ್ಥರಾಗಿದ್ದೇವೆ’ ಎಂದು ಹೇಳಿದ್ದಾರೆ.
UKನಲ್ಲಿ ನಡೆದ ಕ್ಯಾಂಬ್ರಿಯನ್ ಪ್ಯಾಟ್ರೋಲ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಸೇನಾ ತಂಡ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ