
ಇಸ್ಲಾಮಾಬಾದ್: 'ಜಮ್ಮುವಿನ ಕೋಟ್ ಬಲ್ವಾಲ್ ಜೈಲಿನಿಂದ ತಪ್ಪಿಸಿಕೊಳ್ಳಲು ಸುರಂಗ ಕೊರೆದಿದ್ದೆವು. ಆದರೆ ಕೊನೆಯ ಕ್ಷಣದಲ್ಲಿ ಸಿಕ್ಕಿಹಾಕಿಕೊಂಡು ಚಿತ್ರಹಿಂಸೆ ಅನುಭವಿಸಿದೆ' ಎಂದು ಜೈಷ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಹೇಳಿದ್ದಾನೆ.
ಆಡಿಯೋವೊಂದರಲ್ಲಿ ಈ ಕುರಿತು ಮಾತನಾಡಿರುವ ಆತ 'ನಾನು ಹಾಗೂ ನನ್ನ ಸಹಚರರು ಜಮ್ಮು ಜೈಲಲ್ಲಿ ಸುರಂಗ ತೋಡಿದ್ದೆವು. ಆದರೆ ತಪ್ಪಿಸಿಕೊಳ್ಳುವ ವೇಳೆ ಸಿಕ್ಕಿಬಿದ್ದೆವು. ಎಲ್ಲರನ್ನು ಎಳೆದೊಯ್ದ ಅಧಿಕಾರಿಗಳು ಹಿಗ್ಗಾಮುಗ್ಗಾ ಥಳಿಸಿ, ಡಬಲ್ ರೋಟಿಯಂತೆ ಮಾಡಿ ಬಿಟ್ಟರು. ನನಗೆ ಅತೀವ ದುಃಖವಾಯಿತು. ಆದರೆ ನನ್ನ ಕಣ್ಣೀರನ್ನು ಕಾಫಿರರು ನೋಡದಿರಲಿ ಎಂದು ಮುಚ್ಚಿಟ್ಟುಕೊಂಡೆ. ಆದರೆ ಕೋಣೆಗೆ ಬಂದಾಗ ಅಳು ತಡೆಯಲಾಗಲಿಲ್ಲ. ಆಗ ನನ್ನ ಜತೆಗಿದ್ದವರು, ಅಲ್ಲಾಹ್ ಜತೆಗಿರುವಾಗ ಅಳುವೇಕೆ? ಎಂದು ಧೈರ್ಯ ತುಂಬಿದರು ಎಂದು ಹೇಳಿದ್ದಾನೆ. ಅಜರ್‌ನನ್ನು 1994ರಲ್ಲಿ ಬಂಧಿಸಿ ಜಮ್ಮು ಜೈಲಲ್ಲಿ ಇಡಲಾಗಿತ್ತು. ಆದರೆ ಆತನ ಸಹಚರರು ಕಂದಹಾರ್ ವಿಮಾನ ಹೈಜಾಕ್ ಮಾಡಿ, ಪ್ರಯಾಣಿಕರ ಬದಲಿಗೆ ಅಜರ್ ಬಿಡುಗಡೆ ಮಾಡಿಸಿಕೊಂಡಿದ್ದರು.
ಇದನ್ನೂ ಓದಿ: ದುಡಿಯುವ ಮಹಿಳೆಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ