ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿದ್ದು ಓರ್ವ ಉದ್ಯಮಿ...!

By Kannadaprabha News  |  First Published Jan 6, 2023, 8:33 AM IST

ನ್ಯೂಯಾರ್ಕ್- ದೆಹಲಿ ವಿಮಾನದಲ್ಲಿ ಮಹಿಳಾ ಸಹಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿ ಮುಂಬೈ ಮೂಲದ ಶಂಕರ್‌ ಮಿಶ್ರಾ ಎಂಬ ಉದ್ಯಮಿ ಎಂದು ಬೆಳಕಿಗೆ ಬಂದಿದೆ.


ನವದೆಹಲಿ/ಮುಂಬೈ: ನ್ಯೂಯಾರ್ಕ್- ದೆಹಲಿ ವಿಮಾನದಲ್ಲಿ ಮಹಿಳಾ ಸಹಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿ ಮುಂಬೈ ಮೂಲದ ಶಂಕರ್‌ ಮಿಶ್ರಾ ಎಂಬ ಉದ್ಯಮಿ ಎಂದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಗುರುವಾರ ಮುಂಬೈನ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಈ ವೇಳೆ ಎಲ್ಲೂ ಮಿಶ್ರಾ ಪತ್ತೆಯಾಗಿಲ್ಲ. ಹೀಗಾಗಿ ಆತ ಬೇರೆ ರಾಜ್ಯಕ್ಕೆ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ನಡುವೆ ಶಂಕರ್‌ ಮಿಶ್ರಾ ವಿರುದ್ಧ ದೆಹಲಿ ಪೊಲೀಸರು ಲೈಂಗಿಕ ಕಿರುಕುಳ ಮತ್ತು ಅಶ್ಲೀಲತೆಯ ಕೇಸು ದಾಖಲಿಸಿಕೊಂಡಿರುವ ಹಿನ್ನೆಲೆಯಲ್ಲಿ ಆರೋಪಿ ವ್ಯಕ್ತಿ ಮುಂದಿನ ದಿನಗಳಲ್ಲಿ ಭಾರೀ ಸಮಸ್ಯೆ ಎದುರಿಸಬೇಕಾಗಿ ಬರುವ ಎಲ್ಲಾ ಸಾಧ್ಯತೆಗಳಿವೆ.

ಇದೇ ವೇಳೆ ಡಿಜಿಸಿಎ (DGCA)ಕೂಡಾ ಇಡೀ ಘಟನೆ ಕುರಿತು ಏರ್‌ ಇಂಡಿಯಾದಿಂದ (Air India) ವರದಿ ಕೋರಿದೆ. ಒಂದು ವೇಳೆ ಘಟನೆಯಲ್ಲಿ ವಿಮಾನದ ಸಿಬ್ಬಂದಿ ಲೋಪ ಎಸಗಿದ್ದರೆ ಅವರ ವಿರುದ್ಧ ಕ್ರಮದ ಭರವಸೆ ನೀಡಿದೆ. ಮತ್ತೊಂದೆಡೆ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುವಂತೆ ಏರ್ ಇಂಡಿಯಾದ ಮುಖ್ಯಸ್ಥ ಎನ್‌.ಚಂದ್ರಶೇಖರನ್‌ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗದ ಪತ್ರ ಬರೆದಿದೆ.  ಅಲ್ಲದೆ ಈ ಬಗ್ಗೆ 7 ದಿನಗಳಲ್ಲಿ ವರದಿ ನೀಡುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದೆ.

Tap to resize

Latest Videos

Air India Flight: ಕುಡಿದ ಮತ್ತಲ್ಲಿ ವೃದ್ಧೆ ಮೇಲೆ ಮೂತ್ರ ವಿಸರ್ಜಿಸಿದ ಭೂಪ..!

ಏರ್‌ ಇಂಡಿಯಾಗೆ ಕೇಂದ್ರ ಚಾಟಿ: 2 ವಾರದಲ್ಲಿ ಉತ್ತರಿಸುವಂತೆ ನೋಟಿಸ್

ನ್ಯೂಯಾರ್ಕ್- ದೆಹಲಿ ನಡುವಿನ ವಿಮಾನದಲ್ಲಿ(New York and Delhi) ನ.26ರಂದು ಮಹಿಳೆ ಮೇಲೆ ಪ್ರಯಾಣಿಕನೊಬ್ಬ ಮೂತ್ರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳದ ಏರ್‌ ಇಂಡಿಯಾಗೆ ಕೇಂದ್ರ ಸರ್ಕಾರದ ವಿಮಾನಯಾನ ನಿಯಂತ್ರಕರು (ಡಿಜಿಸಿಎ) ತಪರಾಕಿ ಹಾಕಿದ್ದಾರೆ.  ಏರ್‌ಲೈನ್‌ನ ನಡವಳಿಕೆಯು ವೃತ್ತಿಪರವಲ್ಲದ ಮತ್ತು ವ್ಯವಸ್ಥಿತ ವೈಫಲ್ಯಕ್ಕೆ ಕಾರಣವಾಗಿದೆ ಎಂದು ಕಿಡಿಕಾರಿದೆ. ಈ ಹಿನ್ನೆಲೆಯಲ್ಲಿ ಟಾಟಾ ಗ್ರೂಪ್‌ ಒಡೆತನದ ಏರ್‌ಲೈನ್‌ನ ಕೆಲವು ಅಧಿಕಾರಿಗಳು, ವಿಮಾನದ ಪೈಲಟ್‌ ಮತ್ತು ಸಿಬ್ಬಂದಿಗೆ ನೋಟಿಸ್‌ ಜಾರಿ ಮಾಡಿದ್ದು, ಎರಡು ವಾರಗಳಲ್ಲಿ ಉತ್ತರಿಸುವಂತೆ ಕೇಳಿದೆ.

ಮಾತುಕತೆ ಮೂಲಕ ಇತ್ಯರ್ಥ ಆಗಿತ್ತು: ಏರಿಂಡಿಯಾ

ಈ ನಡುವೆ ಸ್ಪಷ್ಟನೆ ನೀಡಿರುವ ಏರ್‌ ಇಂಡಿಯಾ, ಪ್ರಕರಣವನ್ನು ಮುಂಬೈ ಮೂಲದ ಉದ್ಯಮಿ (Mumbai-based businessman) ಮತ್ತು ಸಂತ್ರಸ್ತ ಮಹಿಳೆ, ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಂಡ ಹಿನ್ನೆಲೆಯಲ್ಲಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿರಲಿಲ್ಲ ಎಂದು ಡಿಜಿಸಿಎಗೆ ಸ್ಪಷ್ಟನೆ ನೀಡಿದೆ.  ಜ.4ರಂದು ಡಿಜಿಸಿಎ ನೀಡಿದ್ದ ನೋಟಿಸ್‌ಗೆ ಉತ್ತರಿಸಿರುವ ಏರಿಂಡಿಯಾ ಮೊದಲು ಸಂತ್ರಸ್ತ ಮಹಿಳೆ ಆರೋಪಿ ವಿರುದ್ಧ ಕಾನೂನು ಕ್ರಮಕ್ಕೆ ಕೋರಿದ್ದರು. ಆದರೆ ಬಳಿಕ ಇಬ್ಬರೂ ಮಾತುಕತೆ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಂಡರು. ಹೀಗಾಗಿ ಮಹಿಳೆ ಕೂಡಾ ತನ್ನ ದೂರಿನಿಂದ ಹಿಂದಕ್ಕೆ ಸರಿದರು. ಹೀಗಾಗಿ ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಲು ಏರ್‌ ಇಂಡಿಯಾ ಮುಂದಾಗಲಿಲ್ಲ. ಇದೇ ಕಾರಣಕ್ಕಾಗಿ ಆರೋಪಿ ವ್ಯಕ್ತಿಯನ್ನು ನಿಲ್ದಾಣದಿಂದ ಕಳುಹಿಸಿಕೊಡಲಾಗಿತ್ತು’.

ಒಂದೇ ಸಲ 500 ವಿಮಾನ ಖರೀದಿಗೆ Air India ರೆಡಿ..! ಇದು ಜಗತ್ತಿನ ಅತಿದೊಡ್ಡ ವಿಮಾನ ಖರೀದಿ ಡೀಲ್

ಆದರೆ ಘಟನೆ ಕುರಿತು ಕುರಿತು ವಿಮಾನದ ಸಿಬ್ಬಂದಿ ಪೈಲಟ್‌ಗೆ ಮಾಹಿತಿ ನೀಡಿದ್ದರು.  ಅದರ ಆಧಾರದಲ್ಲಿ ಆಂತರಿಕ ತನಿಖೆಗೆ ಆದೇಶಿಸಲಾಗಿದೆ. ವರದಿ ಬರುವವರೆಗೂ ಆರೋಪಿಯನ್ನು 30 ದಿನಗಳ ಕಾಲ ಏರಿಂಡಿಯಾದ ಯಾವುದೇ ವಿಮಾನದಲ್ಲಿ ಪ್ರಯಾಣಿಸದಂತೆ ನಿಷೇಧಿಸಲಾಗಿದೆ. ಈಗಾಗಲೇ ಮಹಿಳಾ ಪ್ರಯಾಣಿಕರ ಟಿಕೆಟ್‌ ಶುಲ್ಕವನ್ನು ಮರಳಿಸಲಾಗಿದೆ. ತನಿಖೆ ಹಂತದಲ್ಲಿ ಮಹಿಳೆ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ’ ಎಂದು ಏರಿಂಡಿಯಾ ಮಾಹಿತಿ ನೀಡಿದೆ.

click me!