ವಿಶ್ವದ ಅತೀ ಉದ್ದದ ನದಿ ಹಡಗು ಯಾನಕ್ಕೆ ಜ.13ಕ್ಕೆ ಪ್ರಧಾನಿ ಚಾಲನೆ

By Kannadaprabha News  |  First Published Jan 6, 2023, 8:09 AM IST

ವಾರಾಣಸಿಯಿಂದ ಆರಂಭವಾಗಿ ಬಾಂಗ್ಲಾದೇಶದ ಮುಖಾಂತರ ಅಸ್ಸಾಂನ ದಿಭ್ರೂಗಢಕ್ಕೆ ಬಂದು ಸೇರಲಿರುವ ವಿಶ್ವದ ಅತಿ ದೊಡ್ಡ ನದಿ ಪ್ರಯಾಣದ ಕ್ರೂಸ್‌ ಹಡಗು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಜ.13ರಂದು ಚಾಲನೆ ನೀಡಲಿದ್ದಾರೆ.


ನವದೆಹಲಿ: ವಾರಾಣಸಿಯಿಂದ ಆರಂಭವಾಗಿ ಬಾಂಗ್ಲಾದೇಶದ ಮುಖಾಂತರ ಅಸ್ಸಾಂನ ದಿಭ್ರೂಗಢಕ್ಕೆ ಬಂದು ಸೇರಲಿರುವ ವಿಶ್ವದ ಅತಿ ದೊಡ್ಡ ನದಿ ಪ್ರಯಾಣದ ಕ್ರೂಸ್‌ ಹಡಗು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಜ.13ರಂದು ಚಾಲನೆ ನೀಡಲಿದ್ದಾರೆ. 'ಗಂಗಾ ವಿಲಾಸ್‌ ಕ್ರೂಸ್‌' ಎಂಬ ಹೆಸರಿನ ಈ ಹಡಗು ವಾರಾಣಾಸಿಯಂದ ಬಾಂಗ್ಲಾ ಮಾರ್ಗವಾಗಿ ಅಸ್ಸಾಂನ ದಿಬ್ರುಗಢಕ್ಕೆ 3200 ಕಿ.ಮೀ. ದೂರ ಕ್ರಮಿಸಲಿದೆ.

ಗಂಗಾ ವಿಲಾಸ್‌ ಕ್ರೂಸ್‌ಗೆ (Ganga Vilas Cruise) ವಾರಾಣಸಿಯ (Varanasi)ರವೀಂದ್ರ ಘಾಟ್‌ನಲ್ಲಿ (Rabindra Ghat) ಚಾಲನೆ ನೀಡಲಾಗುತ್ತದೆ. ಇದು ಒಟ್ಟು 50 ದಿನಗಳ ಕಾಲ 27ಕ್ಕೂ ಹೆಚ್ಚು ನದಿ ವ್ಯವಸ್ಥೆಗಳಲ್ಲಿ ಪ್ರಯಾಣಿಸಲಿದ್ದು, 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ನಿಲ್ಲಲಿದೆ. ಗಾಜಿಪುರ, ಬಕ್ಸರ್‌ ಮತ್ತು ಪಟನಾ ಮೂಲಕ ಕೋಲ್ಕತಾವನ್ನು ತಲುಪಲಿದೆ. ಈ ಹಡಗು ಗಂಗಾ (Ganga) ಮತ್ತು ಬ್ರಹ್ಮಪುತ್ರಾ (Brahmaputra) ನದಿಗಳಲ್ಲಿ ಚಲಿಸಲಿದೆ. ಈ ಕ್ರೂಸ್‌ ಪ್ರಯಾಣವನ್ನು ಆನಂದಿಸಲು ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ, ಜಿಮ್‌, ಸ್ಪಾ, ವೀಕ್ಷಣಾಲಯ ಮುಂತಾದವುಗಳನ್ನು ನಿರ್ಮಿಸಲಾಗಿದೆ. ಈ ಹಡಗು ವಿಶ್ವ ಪಾರಂಪರಿಕ ತಾಣಗಳು (World Heritage Sites), ವನ್ಯಧಾಮಗಳು, ಕಾಜಿರಂಗ ಮತ್ತು ಸುಂದರಬನ್‌ ರಾಷ್ಟ್ರೀಯ ಉದ್ಯಾನವನಗಳಲ್ಲೂ ಈ ಹಡಗು ನಿಲ್ಲಲಿದೆ.

Tap to resize

Latest Videos

ಕ್ರೂಸ್ ಶಿಪ್‌ನಲ್ಲಿ 12ವರ್ಷಕ್ಕೆ ಅಪಾರ್ಟ್‌ಮೆಂಟ್ ಲೀಸ್‌ಗೆ ಪಡೆದ ಮೆಟಾ ಉದ್ಯೋಗಿ

20ನೇ ದಿನ ಫರಕ್ಕಾ ಮತ್ತು ಮುರ್ಷಿದಾಬಾದ್‌ (Murshidabad) ಮೂಲಕ ಬಾಂಗ್ಲಾದೇಶವನ್ನು (Bangladesh)ಪ್ರವೇಶಿಸುವ ಈ ಹಡಗು 15 ದಿನಗಳ ಕಾಲ ಬಾಂಗ್ಲಾದಲ್ಲಿ ಪ್ರಯಾಣಿಸಲಿದೆ. ಬಳಿಕ ಶಿವಸಾಗರ ಬಳಿ ಮತ್ತೆ ಭಾರತದ ಗಡಿಯನ್ನು ಪ್ರವೇಶಿಸಲಿದೆ. ಜ.13ರಂದು ನಡೆಯುವ ಚಾಲನಾ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

ಆಸ್ಟ್ರೇಲಿಯಾ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಬರೋಬ್ಬರಿ 800 ಮಂದಿಗೆ ಕೋವಿಡ್ ಪಾಸಿಟಿವ್!

click me!