ಆದಿ ಶಂಕರಾಚಾರ್ಯರಿಗೆ ಜ್ಞಾನೋದಯ ನೀಡಿದ ಸ್ಥಳದಲ್ಲಿ ಬಿರುಕು

Published : Jan 06, 2023, 07:45 AM ISTUpdated : Jan 06, 2023, 08:10 AM IST
ಆದಿ ಶಂಕರಾಚಾರ್ಯರಿಗೆ ಜ್ಞಾನೋದಯ ನೀಡಿದ ಸ್ಥಳದಲ್ಲಿ ಬಿರುಕು

ಸಾರಾಂಶ

8ನೇ ಶತಮಾನದಲ್ಲಿ ಭಗವಾನ್‌ ಶಂಕರಾಚಾರ್ಯರಿಗೆ ಜ್ಞಾನೋದಯವಾದ ಸ್ಥಳ ಎಂಬ ಹಿರಿಮೆ ಹೊಂದಿರುವ ಹಿಮಾಲಯದ ತಪ್ಪಲಿನ ಉತ್ತರಾಖಂಡದ ಜೋಶಿಮಠ ನಗರವೀಗ ಭಾರೀ ಆತಂಕದ ನೆಲೆಯಾಗಿ ಹೊರಹೊಮ್ಮಿದೆ.

ಜೋಶಿಮಠ: 8ನೇ ಶತಮಾನದಲ್ಲಿ ಭಗವಾನ್‌ ಶಂಕರಾಚಾರ್ಯರಿಗೆ ಜ್ಞಾನೋದಯವಾದ ಸ್ಥಳ ಎಂಬ ಹಿರಿಮೆ ಹೊಂದಿರುವ ಹಿಮಾಲಯದ ತಪ್ಪಲಿನ ಉತ್ತರಾಖಂಡದ ಜೋಶಿಮಠ ನಗರವೀಗ ಭಾರೀ ಆತಂಕದ ನೆಲೆಯಾಗಿ ಹೊರಹೊಮ್ಮಿದೆ. ಚಮೋಲಿ ಜಿಲ್ಲೆಯ ಈ ನಗರದಲ್ಲಿ ಪದೇ ಪದೇ ಭೂಕಂಪದಿಂದಾಗಿ 550ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಹೀಗಾಗಿ ನಗರದ ಅಂದಾಜು 20 ಸಾವಿರ ಜನರು ನಿತ್ಯವೂ ಪ್ರಾಣ ಭೀತಿಯಲ್ಲಿ ಇರುವ ಪರಿಸ್ಥಿತಿ ಎದುರಾಗಿದೆ.

ಕಳೆದ 2 ವರ್ಷಗಳಿಂದ ಹಂತಹಂತವಾಗಿ ಮನೆ, ಕಟ್ಟಡಗಳಲ್ಲಿ ಬಿರುಕು ಹೆಚ್ಚುತ್ತಿರುವ ಕಾರಣ ತಮ್ಮನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವಂತೆ ಸ್ಥಳೀಯರು ಹಲವು ದಿನಗಳಿಂದ ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ. ಅಲ್ಲದೆ, ತಮ್ಮ ಮನೆ ಬಿರುಕಿಗೆ ಪಕ್ಕದಲ್ಲೇ ಅಣೆಕಟ್ಟು, ಹೆದ್ದಾರಿ, ಸುರಂಗ ನಿರ್ಮಾಣ ಕಾರಣ ಎಂದು ದೂರಿದ್ದು, ಇವುಗಳ ಕಾಮಗಾರಿ ಸ್ಥಗಿತಕ್ಕೆ ಆಗ್ರಹಿಸಿದ್ದಾರೆ. ಆದರೆ ಸರ್ಕಾರ ಇದುವರೆಗೂ ಕೇವಲ 60 ಕುಟುಂಬಗಳನ್ನು ಮಾತ್ರವೇ ಸಮೀಪದ ಶಾಲೆ ಸೇರಿದಂತೆ ಇತರೆ ಕಟ್ಟಡಗಳಿಗೆ ವರ್ಗಾಯಿಸುವ ಕೆಲಸ ಮಾಡಿದೆ.

ಜಮ್ಮುಕಾಶ್ಮೀರದ ಶಂಕರಾಚಾರ್ಯ ದೇಗುಲದಲ್ಲಿ ಮಹಾಶಿವರಾತ್ರಿ ಆಚರಿಸಿದ ಭಕ್ತರು

ಈ ನಡುವೆ ರಾಜ್ಯ ಸರ್ಕಾರ ಐಐಟಿ ರೂರ್ಕಿಯ (IIT Roorkee) ತಂಡವೊಂದನ್ನು ಸ್ಥಳಕ್ಕೆ ರವಾನಿಸಿದ್ದು, ಅದು ನೀಡುವ ವರದಿ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದೆ. ಜೊತೆಗೆ ಮುಖ್ಯಮಂತ್ರಿ ಪುಷ್ಕರ್‌ಸಿಂಗ್‌ ಧಮಿ (Chief Minister Pushkarsingh Dhami) ಶೀಘ್ರವೇ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ನಿರ್ಧರಿಸಿದ್ದಾರೆ. ಈ ನಡುವೆ ರಾಜ್ಯ ಸರ್ಕಾರ ತಮ್ಮ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ಶೀಘ್ರವೇ, 300 ಕಿ.ಮೀ ದೂರದಲ್ಲಿರುವ ರಾಜಧಾನಿ ಡೆಹ್ರಾಡೂನ್‌ಗೆ (Dehradun) ತೆರಳಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.

ಭೂಕುಸಿತದ ಬಳಿಕ ಆತಂಕ:

ಸಮುದ್ರದ ಮಟ್ಟದಿಂದ 6 ಸಾವಿರ ಅಡಿ ಎತ್ತರದಲ್ಲಿರುವ ಚಮೋಲಿ ಜಿಲ್ಲೆಯ ಜೋಶಿಮಠ (Joshimath) ನಗರವು, ಬದ್ರಿನಾಥ್‌, ಹೇಮಕುಂಡ್‌ ಸಾಹೀಬ್‌ಗೆ ಯಾತ್ರಾರ್ಥಿಗಳು ತೆರಳುವ ಮಾರ್ಗದಲ್ಲಿ ಬರುತ್ತದೆ. ಜೊತೆಗೆ ಚಾರಣದ ಹಲವು ಸ್ಥಳಗಳಿಗೂ ಈ ನಗರ ಬೇಸ್‌ ಕ್ಯಾಂಪ್‌ ರೀತಿಯಲ್ಲಿದೆ. 2020ರಲ್ಲಿ ಇಲ್ಲಿ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿ, ಭಾರೀ ಅನಾಹುತ ಉಂಟಾಗಿತ್ತು. ಅದಾದ ಬಳಿಕ ನಿರಂತರವಾಗಿ ಭೂಕಂಪ ಸಂಭವಿಸುತ್ತಲೇ ಇದ್ದು, ಅದರ ಪರಿಣಾಮ ಮನೆಗಳು, ಕಟ್ಟಡಗಳಲ್ಲಿ ಬಿರುಕು ಮೂಡುತ್ತಿದೆ ಮತ್ತು ಈಗಾಗಲೇ ಉಂಟಾಗಿರುವ ಬಿರುಕು ದೊಡ್ಡದಾಗುತ್ತಿದೆ.

ಭಾರತ ನೆಲ ಕಂಡ ಅಪರೂಪದ ದಾರ್ಶನಿಕ ಆದಿ ಶಂಕರಾಚಾರ್ಯರು

ಕಾರಣ ಏನು?:

ಜೋಶಿಮಠ ನಗರವು ಭೂಕಂಪ ಸಾಧ್ಯತೆಯ ಅಪಾಯ ಅತ್ಯಂತ ಹೆಚ್ಚಿರುವ ‘ವಿ’ ವಲಯದಲ್ಲಿ ಬರುತ್ತದೆ. ಆದರೆ ರಸ್ತೆ, ಕಟ್ಟಡ ನಿರ್ಮಾಣ (building construction) ಸೇರಿ ನಾನಾ ಅಭಿವೃದ್ಧಿ ಯೋಜನೆಗಳ ಹೆಸರಲ್ಲಿ ಇಲ್ಲಿ ಬೆಟ್ಟಗಳನ್ನು ಅಗೆಯುವ, ಬಂಡೆಗಳನ್ನು ಸಿಡಿಸುವ ಕೆಲಸ ಹಲವು ದಶಕಗಳಿಂದ ನಡೆಯುತ್ತಿದೆ. ಜೋಶಿಮಠ ಪಕ್ಕದಲ್ಲೇ ಅಣೆಕಟ್ಟು, ಹೆದ್ದಾರಿ, ಸುರಂಗ ನಿರ್ಮಾಣ (tunnel construction)ಕಾಮಗಾರಿಗಳೂ ಬಿರುಕಿಗೆ ಕಾರಣ ಎನ್ನಲಾಗಿದೆ. ಇಂಥ ಕಾಮಗಾರಿ ನಡೆಸದಂತೆ 1976ರಲ್ಲೇ ನ್ಯಾ.ಮಿಶ್ರಾ ಸಮಿತಿ ಎಚ್ಚರಿಸಿತ್ತು. ಆದರೂ ಕಾಮಗಾರಿಗಳು ನಿಂತಿಲ್ಲ. 2009-12ರ ನಡುವೆ ಚಮೋಲಿ-ಜೋಶಿಮಠದಲ್ಲಿ (Chamoli-Joshimath) 130 ಬಾರಿ ಭೂಕುಸಿತ ಸಂಭವಿಸಿದೆ. ಆದರೂ ಎಚ್ಚೆತ್ತುಕೊಳ್ಳದ ಸರ್ಕಾರಗಳು ಅಭಿವೃದ್ಧಿ ಹೆಸರಲ್ಲಿ ಪರಿಸರದ ಸಮತೋಲನ ಹಾಳುಗೆಡವುತ್ತಿರುವ ಹಿನ್ನೆಲೆಯಲ್ಲಿ ಭೂಕಂಪ, ಭೂಕುಸಿತ ಸಂಭವಿಸುತ್ತಿದೆ ಎಂದು ಆರೋಪಿಸಲಾಗಿದೆ.

ರಾಮ ಮಂದಿರಕ್ಕೆ ತೀವ್ರ ಹೋರಾಟ ನಡೆಸಿದ್ದ ಸ್ವಾಮಿ ಸ್ವರೂಪಾನಂದ ಸರಸ್ವತಿ ನಿಧನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ