'Ram'pal For Farmer:1 ವರ್ಷ ಕಾಲ ಪ್ರತಿಭಟನಾ ನಿರತ ರೈತರಿಗೆ ಅನ್ನ ನೀ ಡ್ತಿದ್ದ ವ್ಯಕ್ತಿ ಇವರು

Suvarna News   | Asianet News
Published : Dec 12, 2021, 01:49 PM IST
'Ram'pal For Farmer:1 ವರ್ಷ ಕಾಲ ಪ್ರತಿಭಟನಾ ನಿರತ ರೈತರಿಗೆ ಅನ್ನ ನೀ ಡ್ತಿದ್ದ ವ್ಯಕ್ತಿ ಇವರು

ಸಾರಾಂಶ

ಸಿಂಘು ಬಾರ್ಡರ್‌ನಲ್ಲಿ ಮತ್ತೆ ಹೋಟೆಲ್‌ ಪುನಾರಂಭಿಸಿದ ರಾಮ್‌ಪಾಲ್‌ ಸಿಂಗ್‌ ಪ್ರತಿಭಟನಾ ನಿರತ ರೈತರಿಗೆ ಒಂದು ವರ್ಷ ಕಾಲ  ಪ್ರತಿದಿನ ಆಹಾರ ನೀಡುತ್ತಿದ್ದರು ರೈತರ ಪ್ರತಿಭಟನೆಯಿಂದ ಬಂದ್‌ ಆಗಿದ್ದ ಇವರ ಹೋಟೆಲ್‌ ಇಂದು ಪುನಾರಂಭ

ನವದೆಹಲಿ(12): ದೆಹಲಿಯಲ್ಲಿ ಕೃಷಿ ಕಾಯ್ದೆ ವಿರೋಧಿಸಿ ಸರಿ ಸುಮಾರು ಒಂದು ವರ್ಷಗಳ ಕಾಲ ಪ್ರತಿಭಟನೆ ಮಾಡುತ್ತಿದ್ದ ರೈತರಿಗೆ ಪ್ರತಿದಿನ ಆಹಾರ ನೀಡುತ್ತಿದ್ದ ವ್ಯಕ್ತಿಯೊಬ್ಬರು ಈಗ ತಮ್ಮ ಹೋಟೆಲ್‌ ಅನ್ನು ಮರು ಸ್ಥಾಪಿಸುತ್ತಿದ್ದಾರೆ. ಕಳೆದ ವರ್ಷದಿಂದಲೂ ರೈತರ ಪ್ರತಿಭಟನೆಯಿಂದಾಗಿ ಸಿಂಘು ಬಾರ್ಡರ್‌( Singhu border)ನಲ್ಲಿದ್ದ ರಾಣಾ ರಾಮ್‌ಪಾಲ್‌ ಸಿಂಗ್‌(Rana Rampal Singh) ಅವರ ಹೊಟೇಲ್‌ ಮುಚ್ಚಲ್ಪಟ್ಟಿತ್ತು. ಅಂದಿನಿಂದಲೂ ಇವರು ತಮ್ಮ ವ್ಯವಹಾರದ ನಷ್ಟದ ಬಗ್ಗೆ ಯಾವುದೇ ತಲೆಕೆಡಿಸಿಕೊಳ್ಳದೇ ಪ್ರತಿದಿನ ರೈತರಿಗೆ ಆಹಾರ ವ್ಯವಸ್ಥೆ ಮಾಡುತ್ತಿದ್ದರು. ಪ್ರತಿದಿನ ಇವರಿಗೆ ರೈತರಿಗೆ ಆಹಾರ ನೀಡಲು ಸುಮಾರು 4 ಲಕ್ಷ ರೂಪಾಯಿ ವೆಚ್ಚವಾಗುತ್ತಿತ್ತು. 

ದೆಹಲಿಯಲ್ಲಿ ರೈತರು ಪ್ರತಿಭಟನೆ ಹಿಂಪಡೆದ ಬಳಿಕ ಗೋಲ್ಡನ್‌ ಹಟ್‌ನ ಮಾಲೀಕರು ಆಗಿರುವ ರಾಣಾ ರಾಮ್‌ಪಾಲ್‌ ತಮ್ಮ ಈ ಸೇವೆಯ ಬಗ್ಗೆ ಮಾತನಾಡಿ, ನಾನು ತುಂಬಾ ಖುಷಿಯಾಗಿದ್ದೇನೆ. ನನ್ನ ಖುಷಿಗೆ ಮುಖ್ಯ ಕಾರಣ ರೈತರು ಗೆದ್ದಿರುವುದು. ರೈತರು ನನ್ನ ಕುಟುಂಬದವರು. ಪ್ರತಿಯೊಬ್ಬ ರೈತನೂ ತಮ್ಮ ಮನೆ ಸೇರುವವರೆಗೆ ನಾವು ಅವರಿಗೆ ಊಟದ ವ್ಯವಸ್ಥೆ ಮಾಡುತ್ತೇವೆ ಎಂದರು. 

Farmers Call Off Protest: ರೈತರ ಎಲ್ಲಾ ಬೇಡಿಕೆ ಈಡೇರಿಸಲು ಒಪ್ಪಿದ ಸರ್ಕಾರ, ಸುದೀರ್ಘ ಪ್ರತಿಭಟನೆ ಕೊನೆಗೂ ಅಂತ್ಯ!

ರಾಮ್‌ಪಾಲ್‌ ರೈತರ ಊಟಕ್ಕಾಗಿ ಪ್ರತಿದಿನ 4 ಲಕ್ಷ ಹಣವನ್ನು ವೆಚ್ಚ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ರೈತರ ಪ್ರತಿಭಟನೆ ಅಂತ್ಯವಾಗುತ್ತಿದ್ದಂತೆ ಸಂಯುಕ್ತ ಕಿಸಾನ್ ಮೋರ್ಚಾವೂ(Samyukta Kisan Morcha) ಸುದ್ದಿಗೋಷ್ಠಿ ನಡೆಸಿ ರಾಮ್‌ಪಾಲ್‌ ಅವರಿಗೆ ಧನ್ಯವಾದವನ್ನು ಸಮರ್ಪಿಸಿತು. ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಮಾಡುತ್ತಿದ್ದ  ಪ್ರತಿಭಟನೆಯನ್ನು ವಾಪಸ್‌ ತೆಗೆದುಕೊಳ್ಳುವ ನಿರ್ಧಾರವಾಗುತ್ತಿದ್ದಂತೆ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಹುತೇಕ ರೈತರು ತಮ್ಮ ಮನೆಗಳತ್ತ ಹೊರಟಿದ್ದರು. 

ನವಂಬರ್‌  19ರಂದು ಪ್ರಧಾನಿ(Prime Minister) ನರೇಂದ್ರ ಮೋದಿ(Narendra Modi)ಯವರು, ಕೇಂದ್ರ ಸರ್ಕಾರ ಕಳೆದ ವರ್ಷ ಜಾರಿಗೊಳಿಸಿದ ಮೂರು ಕೃಷಿ ಕಾಯಿದೆಗಳನ್ನು ಈ ಚಳಿಗಾಲದ ಅಧಿವೇಶನದಲ್ಲಿ ವಾಪಸ್‌ ಪಡೆಯುವುದಾಗಿ ಹೇಳಿತ್ತು. ನಂತರ ಚಳಿಗಾಲದ ಅಧಿವೇಶನ ಆರಂಭವಾದ ಮೊದಲ ದಿನವೇ ಅಂದರೆ ನವಂಬರ್‌ 29ರಂದು ಸರ್ಕಾರವೂ ಲೋಕಸಭೆ ಹಾಗೂ ರಾಜ್ಯ ಸಭೆ ಎರಡರಲ್ಲೂ ಈ ಕೃಷಿ ಕಾನೂನುಗಳನ್ನು ವಾಪಸ್‌ ಪಡೆದಿತ್ತು. ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಕೂಡ ಈ ಮಸೂದೆಗಳನ್ನು ವಾಪಸ್‌ ಪಡೆಯುವುದಕ್ಕೆ ಒಪ್ಪಿಗೆ ಸೂಚಿಸಿದ್ದರು. 

ಕರ್ನಾಲ್‌ ಡೀಸಿಗೆ ಕಡ್ಡಾಯ ರಜೆ: ರೈತ ಪ್ರತಿಭಟನೆ ಅಂತ್ಯ!

ಈ ನಡುವೆ ಇವುಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ವಿರೋಧ ಪಕ್ಷಗಳು ಸದನದಲ್ಲಿ ಗಲಾಟೆಯೆಬ್ಬಿಸಿದ್ದವು. ಕೃಷಿ ಮಸೂದೆಯನ್ನು ಸಂಸತ್‌ನಲ್ಲಿ ಚರ್ಚೆ ನಡೆಸದೆಯೇ ವಾಪಸ್ ಪಡೆದಿದ್ದಕ್ಕೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿ ಕಲಾಪವನ್ನೇ ಬಹಿಷ್ಕರಿಸಿದ್ದವು. ಅತ್ಯಂತ ಸುದೀರ್ಘ ಅವಧಿಗೆ ನಡೆದ ರೈತರ ಹೋರಾಟವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ಮೂರೂ ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಘೋಷಣೆ ಮಾಡಿ, ಅದನ್ನು ಸಂಸತ್ತಿನ ಉಭಯ ಸದನಗಳಲ್ಲೂ ಒಂದೇ ದಿನದಲ್ಲೀ ಅಂಗೀಕರಿಸಿತ್ತು. ಆದರೆ, ರೈತರು ಮಾತ್ರ ತಮ್ಮ ಬಾಕಿ ಬೇಡಿಕೆ ಈಡೇರುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಘೋಷಿಸಿದ್ದರು.

ಈ ಹಿನ್ನೆಲೆಯಲ್ಲಿ ರೈತರ ಬಾಕಿ ಬೇಡಿಕೆ ಈಡೇರಿಸುವ ಕುರಿತು ಚರ್ಚೆ ನಡೆಸಲು ಕೇಂದ್ರ ಸರ್ಕಾರ 5 ರೈತ ಪ್ರತಿನಿಧಿಗಳ ನಿಯೋಗಕ್ಕೆ ಆಹ್ವಾನ ನೀಡಿತ್ತು. ಅದರಂತೆ 5 ಸದಸ್ಯರನ್ನು ಒಳಗೊಂಡ ರೈತ ಸಮಿತಿಯು ಇತ್ತೀಚೆಗೆ ಕೇಂದ್ರದ ಜೊತೆ ಸಮಾಲೋಚನೆ ನಡೆಸಿತ್ತು. ಅದರ ಬೆನ್ನಲ್ಲೇ  ಸರ್ಕಾರವು ರೈತರ ಸಮಿತಿಗೆ ಬಾಕಿ ಬೇಡಿಕೆ ಈಡೇರಿಸುವ ಕುರಿತ ತನ್ನ ಕರಡು ಪ್ರಸ್ತಾವಗಳನ್ನು ರವಾನಿಸಿತ್ತು. ಅದರಲ್ಲಿ ಕನಿಷ್ಠ ಬೆಂಬಲ ಬೆಲೆ ವಿಷಯ ನಿರ್ಧರಿಸಲು ಸಮಿತಿ ರಚನೆ, ರೈತರ ವಿರುದ್ಧ ದಾಖಲಾದ ಎಲ್ಲಾ ಕೇಸು ಹಿಂಪಡೆಯುವುದು, ಕೃಷಿ ಹೋರಾಟದ ವೇಳೆ ಮಡಿದ ರೈತರಿಗೆ ಪರಿಹಾರ, ಪಂಜಾಬ್‌ ಮತ್ತು ಉತ್ತರ ಪ್ರದೇಶದಲ್ಲಿ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚಿದ್ದಕ್ಕಾಗಿ ದಾಖಲಿಸಿದ ಕೇಸ್‌ ವಾಪಸ್‌, ರೈತರ ಉಚಿತ ಪಂಪ್‌ ಸೆಟ್‌ಗಳಿಗೂ ಬಿಲ್‌ ನೀಡುವ ವಿದ್ಯುತ್‌ ಮಸೂದೆ ಮಂಡನೆಗೂ ಮುನ್ನ ಎಲ್ಲಾ ಬಾಧ್ಯಸ್ಥರೊಂದಿಗೆ ಚರ್ಚೆ ನಡೆಸುವ ಭರವಸೆ ನೀಡಿದೆ. ಈ ಭರವಸೆಗಳನ್ನು ಒಪ್ಪಿರುವ ರೈತ ಸಂಘಟನೆಗಳು ತಮ್ಮ ಪ್ರತಿಭಟನೆ ಕೈಬಿಡುವ ನಿರ್ಧಾರ ಕೈಗೊಂಡವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು