Bird Flu In Kerala: ಕೇರಳದಲ್ಲಿ ಮತ್ತೆ ಹಕ್ಕಿಜ್ವರ, ಕೋಳಿಗಳ ಮಾರಣ ಹೋಮ

Suvarna News   | Asianet News
Published : Dec 12, 2021, 11:16 AM IST
Bird Flu In Kerala: ಕೇರಳದಲ್ಲಿ ಮತ್ತೆ ಹಕ್ಕಿಜ್ವರ,  ಕೋಳಿಗಳ ಮಾರಣ ಹೋಮ

ಸಾರಾಂಶ

ಆಲಪ್ಪುಳದಲ್ಲಿ 26 ಹಕ್ಕಿಜ್ವರ ಕೇಸ್‌ ಪತ್ತೆ 12,000 ಕೋಳಿಗಳ ಮಾರಣಹೋಮ 13 ಗ್ರಾಪಂ ವ್ಯಾಪ್ತಿಯಲ್ಲಿ ಮೊಟ್ಟೆಮಾರಾಟ ನಿಷೇಧ ಭೋಪಾಲ್‌ಗೆ ಪರೀಕ್ಷೆಗಾಗಿ ಮಾದರಿಗಳ ರವಾನೆ

ಆಲಪ್ಪುಳ: ಒಮಿಕ್ರಾನ್‌ ಭೀತಿಯ ನಡುವೆಯೇ ಕೇರಳದ ಅಲಪ್ಪುಳದಲ್ಲಿ ಹಕ್ಕಿ ಜ್ವರ ದೃಢಪಟ್ಟಿರುವುದು ತೀವ್ರ ಕಳವಳ ಸೃಷ್ಟಿಸಿದೆ. ಈ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಹಕ್ಕಿ ಜ್ವರ ಪತ್ತೆಯಾದ ತಕಾಝಿ(Takazi) ಪಂಚಾಯಿತಿಯ 1 ಕಿ.ಮೀ. ವ್ಯಾಪ್ತಿಯಲ್ಲಿನ ಸುಮಾರು 12,000 ಕೋಳಿ ಹಾಗೂ ಬಾತುಕೋಳಿಗಳನ್ನು ಕೊಂದು ಸುರಕ್ಷಿತವಾಗಿ ಸುಟ್ಟುಹಾಕಿದೆ ಎಂದು ಪಶುಸಂಗೋಪನೆ ಸಚಿವೆ(Minister for Animal Husbandry) ಜೆ. ಸಿಂಚು ರಾಣಿ(J.sinchu Rani) ತಿಳಿಸಿದ್ದಾರೆ. ಆಲಪ್ಪುಳದಲ್ಲಿ ಈವರೆಗೆ ಹಕ್ಕಿಜ್ವರದ 26 ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ತಕಾಝಿ ಗ್ರಾಮ ಪಂಚಾಯಿತಿ ಪ್ರದೇಶವನ್ನು ಕಂಟೋನ್ಮೆಂಟ್‌ ವಲಯವನ್ನಾಗಿ ಘೋಷಿಸಲಾಗಿದೆ. ಇದರ ಜತೆಗೆ ವಾಹನ ಸಂಚಾರ ಮತ್ತು ಜನರ ಓಡಾಟವನ್ನು ನಿಷೇಧಿಸಲಾಗಿದೆ.

ಈ ನಡುವೆ ಅಲಪ್ಪುಳ ಜಿಲ್ಲಾಧಿಕಾರಿ(District Collector)ಗಳು ತುರ್ತು ಸಭೆ ನಡೆಸಿ, ಹಕ್ಕಿ ಜ್ವರ ವ್ಯಾಪಕವಾಗಿ ಹರಡದಂತೆ ಮುನ್ನೆಚ್ಚೆರಿಕಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 13 ಪಂಚಾಯಿತಿ ವ್ಯಾಪ್ತಿಯಲ್ಲಿ ಮೊಟ್ಟೆ, ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಕೋಳಿಗಳನ್ನು ಸಾಮೂಹಿಕವಾಗಿ ಕೊಲ್ಲಲು ಸೂಚನೆ ನೀಡಲಾಗಿದೆ. ಹಕ್ಕಿ ಜ್ವರ ತಡೆಗಟ್ಟಲು ನಾಗರಿಕರು ಸಹಕಾರ ನೀಡಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ. ಈ ನಡುವೆ ರಾಜ್ಯದ ವಿವಿಧ ಭಾಗಗಳಲ್ಲಿ ಹಕ್ಕಿ ಜ್ವರದ ಮಾದರಿಗಳನ್ನು ಸಂಗ್ರಹಿಸಿ ಅವುಗಳ ಪರೀಕ್ಷೆಗಾಗಿ ಭೋಪಾಲ್‌(Bhopal)ಗೆ ಕಳುಹಿಸಲಾಗಿದೆ. ಕಳೆದ ವರ್ಷವೂ ಆಲಪ್ಪುಳ(Allappuzha) ಮತ್ತು ಕೊಟ್ಟಾಯಂ(Kottayam)ನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿತ್ತು.

ಮಾನವನಿಗೆ ಹಕ್ಕಿ ಜ್ವರ, ಚೀನಾದಲ್ಲಿ ದಾಖಲಾಯ್ತು ವಿಶ್ವದ ಮೊದಲ ಪ್ರಕರಣ!

ಭೋಪಾಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‌ಗೆ ಕಳುಹಿಸಲಾದ ಕೆಲವು ಮಾದರಿಗಳಲ್ಲಿ ಹಕ್ಕಿ ಜ್ವರ (H5N1 influenza)  ಇರುವುದನ್ನು ರಾಜ್ಯ ಪಶುಸಂಗೋಪನಾ ಇಲಾಖೆ ಗುರುವಾರ ದೃಢಪಡಿಸಿತ್ತು. ನಂತರ ಕೇರಳದ ಅಲಪ್ಪುಳ (Alappuzha) ಜಿಲ್ಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.  ಕಳೆದ ವಾರ ಜಿಲ್ಲೆಯಲ್ಲಿ ಅನೇಕ ಬಾತುಕೋಳಿಗಳು ಮತ್ತು ಸ್ಥಳೀಯ ಹಕ್ಕಿಗಳು ಸಾವಿಗೀಡಾಗಿದ್ದರಿಂದ ಅಧಿಕಾರಿಗಳು ಭೋಪಾಲ್ (Bhopal) ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಿದ್ದರು.

ರೋಗ ಹರಡದಂತೆ ರೋಗ ಪೀಡಿತ ಪ್ರದೇಶದಲ್ಲಿರುವ ಬಾತುಕೋಳಿಗಳನ್ನು ಕೊಲ್ಲಲು ಪಶುವೈದ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ. ಸರ್ಕಾರದ ನಿಯಮಾವಳಿ ಪ್ರಕಾರ ರೈತರಿಗೆ ಪರಿಹಾರ ನೀಡಲಾಗುವುದು. ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ಪಶುಸಂಗೋಪನಾ ಸಚಿವೆ ಜೆ. ಸಿಂಚು ರಾಣಿ ತಿರುವನಂತಪುರಂನಲ್ಲಿ ತಿಳಿಸಿದ್ದಾರೆ. ಅನೇಕ ಹಿನ್ನೀರು ಮತ್ತು ಜಲಮೂಲಗಳಿಂದ ಕೂಡಿದ ಜಿಲ್ಲೆಯಲ್ಲಿ ರೈತರು ಬಾತುಕೋಳಿಗಳನ್ನು ಸಾಕುತ್ತಾರೆ ಇಲ್ಲಿ ಹಕ್ಕಿ ಜ್ವರ ಕಾಣಿಸಿಕೊಳ್ಳುವುದೂ ಜಾಸ್ತಿ. ಇತರ ದೇಶಗಳಿಂದ ವಲಸೆ ಬರುವ ಪಕ್ಷಿಗಳು ವೈರಸ್‌ನ ಮುಖ್ಯ ಮೂಲಗಳು ಎಂದು ವರದಿಯಾಗಿದೆ. 

Bipin Rawat Death ಸೇನಾ ಮುಖ್ಯಸ್ಥನ ಸಾವು ಸಂಭ್ರಮಿಸಿದ ಕೇರಳ ಸರ್ಕಾರ ವಕೀಲೆ, ನಿವೃತ್ತ ಸೇನಾನಿಗಳ ಪ್ರತಿಭಟನೆ!

ಲಪ್ಪುಳ ಮತ್ತು ನೆರೆಯ ಜಿಲ್ಲೆಯಾದ ಕೋಟ್ಟಯಂನಲ್ಲಿ ಬಾತುಕೋಳಿ ಸಾಕಣೆಯು ಒಂದು ಪ್ರಮುಖ ವ್ಯವಹಾರವಾಗಿದೆ.ಇಲ್ಲಿ ಬಾತುಕೋಳಿಗಳ ಮೊಟ್ಟೆ ಮತ್ತು ಮಾಂಸಕ್ಕೆ ಹೆಚ್ಚಿನ ಬೇಡಿಕೆಯಿದೆ. ಸಾಮಾನ್ಯವಾಗಿ ಕೋಳಿಗಿಂತ ಹೆಚ್ಚಿನ ಬೆಲೆಯಿದೆ. ಏವಿಯನ್ ಫ್ಲೂ ಎಂದೂ ಕರೆಯಲ್ಪಡುವ ಹಕ್ಕಿ ಜ್ವರ ಪಕ್ಷಿಗಳಲ್ಲಿ ಗಾಳಿಯಿಂದ ಹರಡುವ ವೈರಸ್‌ನಿಂದ ಉಂಟಾಗುವ ವಿವಿಧ ರೀತಿಯ ಸೋಂಕು ಜ್ವರವಾಗಿದೆ. ಇದು ಅಪರೂಪವಾಗಿ ಮನುಷ್ಯರಿಗೆ ಹರಡಬಹುದು ಮತ್ತು ಇದು ಮನುಷ್ಯರಿಗೆ ಬಂದಲ್ಲಿ ಅದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದು ಎಂದು ತಜ್ಞರು ಹೇಳುತ್ತಾರೆ. ವೈರಸ್‌ಗಳಲ್ಲಿ ಹಲವು ವಿಧಗಳಿವೆ ಮತ್ತು ಅವುಗಳಲ್ಲಿ H7N9 ಅಪಾಯಕಾರಿ ಎಂದು ಪರಿಗಣಿಸಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ,  ಏವಿಯನ್ ಇನ್ಫ್ಲುಯೆನ್ಸ್‌ ವೈರಸ್‌ನಲ್ಲಿ ಅನೇಕ ವಿಧಗಳಿವೆ ಮತ್ತು ಅವುಗಳಲ್ಲಿ ಕೆಲವು ಮಾತ್ರ ಮಾನವರಿಗೆ ಅಪಾಯಕಾರಿ. ಕಳೆದ ವರ್ಷವೂ ಜಿಲ್ಲೆಯಲ್ಲಿ ವೈರಲ್ ಏಕಾಏಕಿ ವರದಿಯಾಗಿದ್ದು ಅದನ್ನು ಸ್ಥಳೀಯವಾಗಿಯೇ ನಿಭಾಯಿಸಲಾಗಿತ್ತು . 2016 ರಲ್ಲಿ ಹಕ್ಕಿ ಜ್ವರ ನಿಯಂತ್ರಿಸಲು ಅಲಪ್ಪುಳ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಕನಿಷ್ಠ 5 ಲಕ್ಷ ಕೋಳಿ ಮತ್ತು ಬಾತುಕೋಳಿಗಳನ್ನು ಕೊಲ್ಲಲಾಯಿತು. ಇದು ಸಾಂಕ್ರಾಮಿಕ ರೋಗವಾಗಿದ್ದು, ರೋಗ ನಿಯಂತ್ರಣಕ್ಕೆ ಇತರ ಪಕ್ಷಿಗಳನ್ನೂ ಕೊಲ್ಲಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು