ಮಾಡಿದ್ದುಣ್ಣೋ ಮಾರಾಯ: ಆ್ಯಂಬುಲೆನ್ಸ್‌ಗೆ ದಾರಿ ಬಿಡದೇ ಕಾರಿನ ಓಟ: ವೇಗವಾಗಿ ಸಾಗಿ ಅಪಘಾತ

By Anusha Kb  |  First Published Jul 1, 2022, 2:33 PM IST

ಆಂಬ್ಯುಲೆನ್ಸ್‌ಗೆ ಅಡ್ಡಿಪಡಿಸುವುದು ಶಿಕ್ಷಾರ್ಹ ಅಪರಾಧ. ಆಂಬ್ಯುಲೆನ್ಸ್ ಸೈರನ್ ಬಾರಿಸುತ್ತಿರುವಾಗ ಪಕ್ಕಕ್ಕೆ ಸರಿದು ಆಂಬ್ಯುಲೆನ್ಸ್‌ಗೆ ದಾರಿ ಬಿಡಬೇಕಾಗಿರುವುದು ನೈತಿಕ ಹೊಣೆಗಾರಿಕೆ. ಮಾತ್ರವಲ್ಲದೆ ಕರ್ತವ್ಯವಾಗಿದೆ.


ತಿರುವನಂತಪುರ: ಆಂಬ್ಯುಲೆನ್ಸ್‌ಗೆ ಅಡ್ಡಿಪಡಿಸುವುದು ಶಿಕ್ಷಾರ್ಹ ಅಪರಾಧ. ಆಂಬ್ಯುಲೆನ್ಸ್ ಸೈರನ್ ಬಾರಿಸುತ್ತಿರುವಾಗ ಪಕ್ಕಕ್ಕೆ ಸರಿದು ಆಂಬ್ಯುಲೆನ್ಸ್‌ಗೆ ದಾರಿ ಬಿಡಬೇಕಾಗಿರುವುದು ನೈತಿಕ ಹೊಣೆಗಾರಿಕೆ. ಮಾತ್ರವಲ್ಲದೆ ಕರ್ತವ್ಯವಾಗಿದೆ. ಆದಾಗ್ಯೂ ಮೂಲಭೂತ ಹಕ್ಕನ್ನು ಒಕ್ಕೊರಳಿನಿಂದ ಕೂಗಿ ಕೂಗಿ ಕೇಳುವ ಬಹುತೇಕರು ಕರ್ತವ್ಯದ ವಿಚಾರ ಬಂದಾಗ ಮೌನಕ್ಕೆ ಜಾರುತ್ತಾರೆ. ಕೇರಳದಲ್ಲಿ ಕಾರು ಚಾಲಕರೊಬ್ಬರು ಪ್ರೋಟೋಕಾಲ್ ಗೌರವಿಸದೇ ಕನಿಷ್ಠ ಕಾಳಜಿ ತೋರದೇ  ಆಂಬ್ಯುಲೆನ್ಸ್‌ಗೆ ಪೈಪೋಟಿ ನೀಡಿದ್ದಾರೆ. ಪರಿಣಾಮ ಕಾರು ಅಪಘಾತಕ್ಕೀಡಾಗಿದ್ದು, ಮಾಡಿದುಣ್ಣೋ ಮಾರಾಯ ಎನ್ನುವಂತಾಗಿದೆ. 

ಕೇರಳದಲ್ಲಿ ಪ್ರಸ್ತುತ ಮುಂಗಾರು ಮಳೆ ಸುರಿಯುವ ಕಾಲವಾಗಿದೆ. ಜೋರಾಗಿ ಮಳೆ ಬರುತ್ತಿದ್ದರೆ ರಸ್ತೆಗಳು ಜಾರುತ್ತಿರುತ್ತವೆ. ವೇಗದ ಚಾಲನೆ ಮತ್ತಷ್ಟು ಕಷ್ಟಕರವಾಗುತ್ತದೆ. ಇಂತಹ ಕಷ್ಟಕರ ಸ್ಥಿತಿಯಲ್ಲಿ ತುರ್ತಾಗಿ ಹೋಗಬೇಕಾಗಿದ್ದ ಆಂಬ್ಯುಲೆನ್ಸ್‌ಗೆ ಕಾರು ಚಾಲಕ ದಾರಿ ನೀಡದೇ ಮತ್ತಷ್ಟು ಸಂಕಷ್ಟ ನೀಡಿದ್ದಾನೆ. ಆದರೆ ಕಾರು ಚಾಲಕನ ಈ ಆಟ ಹೆಚ್ಚು ಹೊತ್ತು ನಡೆದಿಲ್ಲ. ಸ್ವಲ್ಪ ದೂರ ಸಾಗುತ್ತಿದ್ದಂತೆ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ನಿಂತು ಬಿಡುತ್ತದೆ.  ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Tap to resize

Latest Videos

 

ಈ ವಿಡಿಯೋವನ್ನು ಆಂಬ್ಯುಲೆನ್ಸ್ ಲೈಫ್ ಹೆಸರಿನ ಯೂಟ್ಯೂಬ್‌ ಚಾನೆಲ್ ಹಂಚಿಕೊಂಡಿದೆ. ವಿಡಿಯೋದಲ್ಲಿ ಆಂಬ್ಯುಲೆನ್ಸ್  ಮುಂದೆ ಬಿಳಿ ಟೊಯೊಟಾ ಎಟಿಯೋಸ್ ಸಾಗುವುದನ್ನು ಕಾಣಬಹುದು. ಆಂಬ್ಯುಲೆನ್ಸ್  ಚಾಲಕ ದಾರಿ ಬಿಡುವಂತೆ ಅನೇಕ ಬಾರಿ ಸೈರನ್ ಬಾರಿಸುತ್ತಿದ್ದಾನೆ. ಜೊತೆಗೆ ಜೋರಾಗಿ ಮಳೆ ಬೀಳುತ್ತಿದೆ ಆದಾಗ್ಯೂ ದಾರಿ ಬಿಡದೇ ಕಾರು ವೇಗವಾಗಿ ಚಲಿಸುತ್ತಿದೆ.

Ambulance Home : ಇದು ಮನೆಯಲ್ಲ, ಆಂಬ್ಯುಲೆನ್ಸ್..! ಅದ್ಭುತ ಕಲೆ ಮೂಲಕ ಲಕ್ಷಾಂತರ ರೂ. ಗಳಿಸ್ತಿದ್ದಾರೆ ಈಕೆ

ವೀಡಿಯೊದಲ್ಲಿ, ಆಂಬ್ಯುಲೆನ್ಸ್ ಚಾಲಕ ಸೈರನ್ ಬಾರಿಸುತ್ತಾ ಕಾರು ಚಾಲಕ ಪಕ್ಕಕ್ಕೆ ಹೋಗುತ್ತಾನೆ ಎಂದು ಭಾವಿಸುತ್ತಾನೆ ಆದರೆ ಕಾರು ಮಾತ್ರ ದಾರಿಯಿಂದ ಕದಲುವುದಿಲ್ಲ. ಆದರೆ ಕೆಲ ನಿಮಿಷಗಳಲ್ಲೇ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಜಾರಲು ಶುರು ಮಾಡುತ್ತದೆ. ಅಡ್ಡಾದಿಡ್ಡಿ ಸಾಗಲು ಶುರು ಮಾಡುತ್ತದೆ. ಅಲ್ಲದೇ ಕೊನೆಯದಾಗಿ ಡಿವೈಡರ್‌ಗೆ ಡಿಕ್ಕಿ ಹೊಡೆಯುತ್ತದೆ. 

ಈ ಘಟನೆಯಲ್ಲಿ ಕಾರು ಚಾಲಕ ಗಾಯಗೊಂಡಿದ್ದಾನೋ ಎಂಬುದು ತಿಳಿದು ಬಂದಿಲ್ಲ. ಕಾರು ಮಳೆಯಿಂದ ತೇವಗೊಂಡ ಹೆದ್ದಾರಿಯಲ್ಲಿ ವೇಗವಾಗಿ ಸಾಗಿ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಸುತ್ತ ತಿರುಗಲು ಪ್ರಾರಂಭಿಸುತ್ತದೆ. ಈ ವಿದ್ಯಮಾನವನ್ನು ಹೈಡ್ರೋಪ್ಲೇನಿಂಗ್ ಎಂದು ಕರೆಯಲಾಗುತ್ತದೆ.

ಹಣ ಕೊಟ್ಟಿಲ್ಲವೆಂದು ಹೆಣವನ್ನ ಫುಟ್‌ಬಾತ್‌ ಮೇಲೆ ಇಳಿಸಿದ: ಆಂಬ್ಯುಲೆನ್ಸ್ ಚಾಲಕನ ಅಮಾನವೀಯ ಕೃತ್ಯ
ಹಿಂದೂ ಧರ್ಮ ಗ್ರಂಥಗಳಲ್ಲಿ ಕರ್ಮಕ್ಕೆ (ಮಾಡುವ ಕಾರ್ಯ) ತಕ್ಕಂತೆ ಫಲ ಎಂಬ ಉಲ್ಲೇಖವಿದೆ. ಇದನ್ನು ಅನೇಕರು ಅಚಲವಾಗಿ ನಂಬುತ್ತಾರೆ. ನಾವು ಮಾಡುವ ಒಳ್ಳೆಯ ಕೆಲಸವಾಗಲಿ ಅಥವಾ ಕೆಟ್ಟ ಕೆಲಸವಾಗಲಿ ಅದಕ್ಕೆ ತಕ್ಕಂತೆ ಫಲ ಸಿಗುವುದು ಎಂಬುದು ಈ ಮಾತಿನ ಅರ್ಥ. ಹಾಗೆಯೇ ಈ ನಂಬಿಕೆಗೆ ತಕ್ಕಂತೆ ಕೆಲ ಕೃತ್ಯಗಳಿಗೆ ಆಗಿಂದಾಗಲೇ ಫಲ ಸಿಕ್ಕಿವೆ. ಅದಕ್ಕೊಂದು ಉದಾಹರಣೆ ಈ ಘಟನೆ. 
 

click me!