ದೆಹಲಿಯಲ್ಲಿ ವ್ಯಕ್ತಿಯನ್ನು ಕೊಂದು ಫ್ರಿಡ್ಜ್‌ನಲ್ಲಿಟ್ಟ ಪಾತಕಿ..!

ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ರೆಫ್ರಿಜರೇಟರ್‌ನಲ್ಲಿಟ್ಟು ಹೋಗಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಯ ಸುಳಿವು ದೊರೆತಿದೆ ಎಂದು ಹೇಳಿದ್ದಾರೆ.


ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿ ವ್ಯಕ್ತಿಯೊಬ್ಬರ ಶವವು ಫ್ರಿಡ್ಜ್‌ನಲ್ಲಿ ಪತ್ತೆಯಾಗಿದೆ. ಶುಕ್ರವಾರ ರಾತ್ರಿ ಈ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರಿಗೆ ವ್ಯಕ್ತಿಯೊಬ್ಬರು ಕರೆ ಮಾಡಿ ಹೇಳಿ ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈಶಾನ್ಯ ದೆಹಲಿಯ ಸೀಲಂಪುರ್ ಪ್ರದೇಶದಲ್ಲಿ 50 ವರ್ಷದ ವ್ಯಕ್ತಿಯ ಶವವು ಅವರ ಮನೆಯ ರೆಫ್ರಿಜರೇಟರ್‌ನಲ್ಲಿ ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನು ದೆಹಲಿಯ ಗೌತಮಪುರಿಯಲ್ಲಿ ವಾಸವಾಗಿದ್ದ ಝಾಕಿರ್ (50) ಎಂದು ಗುರುತಿಸಲಾಗಿದೆ. 

Latest Videos

Chikkamagaluru: ರಾಡಿನಿಂದ ಹೊಡೆದು ತಾಯಿ ಹತ್ಯೆ: ಆರೋಪಿ ಬಂಧನ

ಘಟನೆ ಬೆಳಕಿಗೆ ಬಂದಿದ್ದೇಗೆ ಗೊತ್ತಾ..?
ಝಾಕಿರ್‌ ತನ್ನ ಕರೆಯನ್ನು ಉತ್ತರಿಸುತ್ತಿರಲಿಲ್ಲ. ಈ ಹಿನ್ನೆಲೆ ಅವರ ಮನೆಗೆ ಹೋಗಿ ನೋಡಿದಾಗ ಅವರ ಮೃತದೇಹವು ಫ್ರಿಡ್ಜ್‌ನಲ್ಲಿ ಕಂಡುಬಂದಿದೆ ಎಂದು ಮಹಿಳೆಯೊಬ್ಬರು ಶುಕ್ರವಾರ ರಾತ್ರಿ 7.15 ರ ಸುಮಾರಿಗೆ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರು. ಅಲ್ಲದೆ, ತಾನು ಮೃತ ವ್ಯಕ್ತಿಯ ಸಂಬಂಧಿ ಎಂದೂ ಆ ಮಹಿಳೆ ಮಾಹಿತಿ ನೀಡಿದ್ದಾರೆ.

 ಘಟನೆ ಬೆಳಕಿಗೆ ಬಂದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಅವರ ಶವವನ್ನು ರೆಫ್ರಿಜರೇಟರ್‌ನಲ್ಲಿ ತುಂಬಲಾಗಿತ್ತು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಳಿಕ, ಅಪರಾಧದ ಸ್ಥಳದ ಪರಿಶೀಲನೆಗಾಗಿ ಅಪರಾಧ ತನಿಖೆ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡಗಳನ್ನು ಕರೆಯಲಾಗಿತ್ತು ಎಂಬ ಬಗ್ಗೆಯೂ ವರದಿಯಾಗಿದೆ.

ಮೃತ ವ್ಯಕ್ತಿ ಝಾಕಿರ್‌ ಮನೆಯಲ್ಲಿ ಒಬ್ಬರೇ ವಾಸವಿದ್ದು, ಪತ್ನಿ ಮತ್ತು ಮಕ್ಕಳು ಪ್ರತ್ಯೇಕವಾಗಿ ದೂರದ ಪ್ರದೇಶದಲ್ಲಿ ವಾಸವಿದ್ದರು ಎಂಬ ವಿಚಾರ ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಅಲ್ಲದೆ, ಕೊಲೆ ಆರೋಪಿಯ ಸುಳಿವು ಸಿಕ್ಕಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಮಕ್ಕಳೆದುರೇ ಮಹಿಳೆಯ ಕೊಂದ ದುಷ್ಕರ್ಮಿ, CCTV ದೃಶ್ಯ ವೈರಲ್!

ಆಸ್ತಿ ವಿಚಾರಕ್ಕೆ ನಡೆದ ಕೊಲೆ..?
ಆಸ್ತಿ ಸಂಬಂಧಿತ ವಿವಾದಕ್ಕೆ ಈ ಕೊಲೆಯಾಗಿರಬಹುದೆಂದು ಹೇಳಲಾಗಿದ್ದು, ಝಾಕಿರ್‌ ಸಂಬಂಧಿಕರೊಬ್ಬರೇ ಅವರನ್ನು ಕೊಲೆ ಮಾಡಿದ್ದಾರೆ ಎಂದೂ ಕೆಲ ಮಾಧ್ಯಮಗಳು ವರದಿ ಮಾಡಿವೆ. ಮೃತ ವ್ಯಕ್ತಿಯ ತಲೆಗೆ ಪೆಟ್ಟು ಬಿದ್ದಿದ್ದು, ನಂತರ ಅವರನ್ನು ಕೊಲೆ ಮಾಡಿ ಅವರ ಸವವನ್ನು ಫ್ರಿಡ್ಜ್‌ನಲ್ಲಿ ಅಡಗಿಸಿಟ್ಟಿದ್ದಾರೆ ಎಂದೂ ಹೇಳಲಾಗಿದೆ. 

ಆದರೆ, ಈ ಬಗ್ಗೆ ಹೆಚ್ಚಿನ ಸುಳಿವು ಬಿಟ್ಟುಕೊಡದ ಪೊಲೀಸರು, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಕೊಲೆ ಆರೋಪಿಯ ಸುಳಿವು ಸಿಕ್ಕಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

click me!