ಸೋಪಾದಿಂದ ಮೇಲೇಳುವಾಗ ಸೊಂಟದಲ್ಲಿದ್ದ ಗನ್ ಟ್ರಿಗರ್ ಆಗಿ ಪಂಜಾಬ್‌ನಲ್ಲಿ ಎನ್‌ಆರ್‌ಐ ಸಾವು

Published : Dec 30, 2025, 07:07 PM IST
NRI Dies In Punjab As Gun Goes Off While Getting Up From Sofa

ಸಾರಾಂಶ

ಪಂಜಾಬ್‌ನ ಫಿರೋಜ್‌ಪುರದಲ್ಲಿ, ಸೋಫಾದಿಂದ ಎದ್ದೇಳುವಾಗ ಸೊಂಟದಲ್ಲಿದ್ದ ಗನ್ ಆಕಸ್ಮಿಕವಾಗಿ ಟ್ರಿಗರ್ ಆಗಿ ಅನಿವಾಸಿ ಭಾರತೀಯ ಸಾವನ್ನಪ್ಪಿದ್ದಾರೆ. ಹೊಟ್ಟೆಗೆ ಗುಂಡು ತಗುಲಿದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಾಣ ಬಿಟ್ಟಿದ್ದು, ಈ ದುರಂತ ಘಟನೆ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸೋಫಾದಿಂದ ಎದ್ದೇಳುವಾಗ ಸೊಂಟದಲ್ಲಿದ್ದ ಗನ್‌ ಟ್ರಿಗರ್ ಆಗಿ ಅನಿವಾಸಿ ಭಾರತೀಯರೊಬ್ಬರು ಸಾವನ್ನಪ್ಪಿದ ಘಟನೆ ಪಂಜಾಬ್‌ನ ಫಿರೋಜ್‌ಪುರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಹರ್ಪಿಂದರ್ ಸಿಂಗ್ ಅಲಿಯಾಸ್ ಸೋನು ಎಂದು ಗುರುತಿಸಲಾಗಿದೆ. ಘಟನೆ ನಡೆದಾಗ ಹರ್ಪಿಂದರ್ ಸಿಂಗ್ ಅವರು ತನ್ನ ಸಂಬಂಧಿಯೊಂದಿಗೆ ಸೋಫಾದಲ್ಲಿ ಕುಳಿತಿದ್ದರು. ಅವರು ಸೋಫಾದಿಂದ ಎದ್ದು ನಿಂತಾಗ ಬಂದೂಕು ಟ್ರಿಗರ್ ಆಗಿ ಅವರ ಹೊಟ್ಟೆಗೆ ಗುಂಡು ತಾಗಿದೆ. ಕೂಡಲೇ ಅವರನ್ನು ಕುಟುಂಬದವರು ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ., ಅಲ್ಲಿ ವೈದ್ಯರು ಅವರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಹೀಗಾಗಿ ಬಟಿಂಡಾಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ.

ಘಟನೆ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೈರಲ್ ಆದ ದೃಶ್ಯಾವಳಿಗಳಲ್ಲಿ ಗುಂಡೇಟಿನ ಸದ್ದು ಕೇಳಿ ಮನೆ ಮಂದಿ ಹರ್ಪಿಂದರ್ ಸಹಾಯಕ್ಕೆ ಓಡಿ ಬಂದು ಅವರನ್ನು ಮನೆಯಿಂದ ಹೊರಗೆ ಕರೆದೊಯ್ಯುವುದನ್ನು ಕಾಣಬಹುದು. ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ಸೋಮವಾರ ಈ ದುರಂತ ನಡೆದಿದೆ.

ಸೋಫಾದಿಂದ ಎದ್ದೇಳುತ್ತಿದ್ದಾಗ ಸೊಂಟಕ್ಕೆ ಬಿಗಿದಿದ್ದ ಗುಂಡು ಹಾರಿ ಅವರು ಸಾವನ್ನಪ್ಪಿದ್ದಾರೆ. ಮೃತ ಹರ್ಪಿಂದರ್ ಸಿಂಗ್ ಅಲಿಯಾಸ್ ಸೋನು ಅವರು ಇತ್ತೀಚೆಗಷ್ಟೇ ಧನಿ ಸುಚಾ ಸಿಂಗ್ ಗ್ರಾಮದಲ್ಲಿ ನೆಲೆಸಿದ್ದರು. ಘಟನೆ ನಡೆದಾಗ ಹರ್ಪಿಂದರ್ ತನ್ನ ಸಂಬಂಧಿಯೊಂದಿಗೆ ಸೋಫಾದಲ್ಲಿ ಕುಳಿತಿದ್ದರು. ಆದರೆ ಎದ್ದು ನಿಂತಾಗ ಪಿಸ್ತೂಲ್ ಟ್ರಿಗರ್ ಆಗಿ ಹೊಟ್ಟೆಗೆ ಗುಂಡು ಹಾರಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಮನೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಸಾವಿನಂಚಿನಲ್ಲಿದ್ದ ತಾಯಿಗೆ ಕೊನೆಕ್ಷಣದಲ್ಲಿ ಕಂಡಿದ್ದೇನು ಆಕೆ ಹೇಳಿದ್ದೇನು?: ವಿಚಿತ್ರ ಅನುಭವ ಬಿಚ್ಚಿಟ್ಟ ಮಗಳು

ಘಟನೆಯ ಬಳಿಕ ಹರ್ಪಿಂದರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸದರ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ರವೀಂದರ್ ಶರ್ಮಾ ಅವರು ಘಟನೆಗೆ ಸಂಬಂಧಿಸಿದಂತೆ ಹರ್ಪಿಂದರ್ ಅವರ ತಂದೆ ದರ್ಶನ್ ಸಿಂಗ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡು ಮತ್ತು ಬಿಎನ್ಎಸ್ ಸೆಕ್ಷನ್ 194 ರ ಅಡಿಯಲ್ಲಿ ಕ್ರಮ ಕೈಗೊಂಡ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು. ಇತ್ತೀಚೆಗೆ ವಿದೇಶದಿಂದ ಹಿಂದಿರುಗಿ ವಿವಾಹವಾಗಿದ್ದ ಹರ್ಪಿಂದರ್ ಅವರಿಗೆ ಎರಡು ವರ್ಷದ ಹೆಣ್ಣು ಮಗುವಿದೆ. ಮಂಗಳವಾರ ಅವರ ಅಂತ್ಯಕ್ರಿಯೆ ನಡೆದಿದ್ದು, ಅವರ ಹಠಾತ್ ಸಾವಿನಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಇದನ್ನೂ ಓದಿ: 17 ವರ್ಷಗಳ ಕಾನೂನು ಹೋರಾಟದ ಬಳಿಕ ಕೊನೆಗೂ ದಂಪತಿಗೆ ವಿಚ್ಛೇದನ ನೀಡಿದ ಕೋರ್ಟ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿಗ್ಗಜ ನಟ ಮೋಹನ್‌ಲಾಲ್‌ಗೆ ಮಾತೃವಿಯೋಗ, ಮಗನ ಈ ಮೂರು ಸಿನಿಮಾಗಳು ಇಷ್ಟವೇ ಇಲ್ಲ ಅಂದಿದ್ರು ತಾಯಿ!
ಸನ್ನಿ ಲಿಯೋನ್‌ಗೆ ನ್ಯೂ ಇಯರ್ ಶಾಕ್, ಭಾರಿ ವಿರೋದ ಬಳಿಕ ಹೊಸ ವರ್ಷ ಕಾರ್ಯಕ್ರಮ ರದ್ದು