
ಕೊಚ್ಚಿ (ಡಿ.30): ಟಿಕೆಟ್ ಖರೀದಿ ಮಾಡಿದ ಬಳಿಕ ಟಿಕೆಟ್ ಮೊತ್ತವನ್ನು ವರ್ಗಾಯಿಸುವ ವೇಳೆ ಗೂಗಲ್ ಪೇ ಕೈಕೊಟ್ಟಿದೆ. ಇದರಿಂದಾಗಿ ಮಹಿಳಾ ಪ್ರಯಾಣಿಕರನ್ನು ಕೆಎಸ್‌ಆರ್‌ಟಿಸಿ ಬಸ್‌ನಿಂದ ನಿರ್ದಾಕ್ಷಿಣ್ಯವಾಗಿ ಹೊರಹಾಕಲಾಗಿದೆ ಎಂದು ಆರೋಪಿಸಲಾಗಿದೆ. ಕೊಟ್ಟಾಯಂವಿಲಾ ಮೂಲದ ದಿವ್ಯಾ (28) ಅವರನ್ನು ಬಸ್ ಕಂಡಕ್ಟರ್ ಬಸ್‌ನಿಂದ ಹೊರಗೆಸೆದಿದ್ದಾರೆ. ಕೇವಲ 18 ರೂಪಾಯಿ ಟಿಕೆಟ್‌ಅನ್ನು ಯುವತಿ ಖರೀದಿ ಮಾಡಿದ್ದಳು. ಆದರೆ, ಈ ಹಣವನ್ನು ಗೂಗಲ್ ಪೇ ಮೂಲಕ ಪಾವತಿ ಮಾಡಲು ಆಗಿರಲಿಲ್ಲ. ಇದರಿಂದಾಗಿ ಕಂಡಕ್ಟರ್ ಯುವತಿಯನ್ನು ಅಲ್ಲಿಯೇ ಬಸ್‌ನಿಂದ ಹೊರಹಾಕಿದ್ದಾನೆ. ಬಳಿಕ ಯುವತಿ ರಾತ್ರಿಯ ವೇಳೆ ಎರಡೂವರೆ ಕಿಲೋಮೀಟರ್ ನಡೆದು ಮನೆ ತಲುಪಿದ್ದಾರೆ. ಆ ಬಳಿಕ ಈಕೆ ಈ ವಿಚಾರವಾಗಿ ಸಾರಿಗೆ ಇಲಾಖೆಯಲ್ಲಿ ದೂರು ದಾಖಲಿಸಿದ್ದಾಳೆ.
ಡಿಸೆಂಬರ್ 26 ರಂದು ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ದೂರುದಾರರಾದ ದಿವ್ಯಾ ವೆಲ್ಲರದ ಮೂಲದವರಾಗಿದ್ದು, ಕುನ್ನತುಕಲ್‌ನಲ್ಲಿರುವ ಖಾಸಗಿ ಆಸ್ಪತ್ರೆಯ ಉದ್ಯೋಗಿಯಾಗಿದ್ದಾರೆ.
ದಿವ್ಯಾ ಸಾಮಾನ್ಯವಾಗಿ ತನ್ನ ಕೆಲಸ ಮುಗಿಸಿ ರಾತ್ರಿ 9.45 ರ ಸುಮಾರಿಗೆ ನೆಯ್ಯಟ್ಟಿಂಕರದಿಂದ ಕೊನೆಯ ಬಸ್‌ನಲ್ಲಿ ಮನೆಗೆ ಪ್ರಯಾಣಿಸುತ್ತಾರೆ. ಅವರಿಗೆ ಆರೋಗ್ಯ ಸಮಸ್ಯೆಗಳಿರುವುದರಿಂದ, ಘಟನೆಯ ದಿನ ರಾತ್ರಿ 8.30 ರ ಸುಮಾರಿಗೆ ಮನೆಗೆ ಹೊರಟು ಕೂನಂಬನೈನಿಂದ ಬಸ್ ಹತ್ತಿದ್ದರು. ಈ ವೇಳೆ ನಾನು ಪರ್ಸ್ ಮರೆತುಹೋಗಿದ್ದೆ. ಆದರೆ, ಗೂಗಲ್ ಪೇ ಬಳಸಿ ಟಿಕೆಟ್ ಖರೀದಿ ಮಾಡಬಹುದು ಎನ್ನುವ ಕಾರಣಕ್ಕೆ ಬಸ್ ಹತ್ತಿದ್ದೆ ಎಂದಿದ್ದಾರೆ.
ಆಕೆ ₹18 ಮೌಲ್ಯದ ಟಿಕೆಟ್ ತೆಗೆದುಕೊಂಡರೂ, ಸರ್ವರ್ ಸಮಸ್ಯೆಯಿಂದಾಗಿ ಗೂಗಲ್ ಪೇ ಮೂಲಕ ವಹಿವಾಟು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಇದರಿಂದ, ಆಕ್ರೋಶಗೊಂಡ ಕಂಡಕ್ಟರ್ ಆಕೆಯನ್ನು ತೊಲಾಡಿಯಲ್ಲಿ ನಡುರಾತ್ರಿಯಲ್ಲಿಯೇ ಇಳಿಸಿದ್ದಾರೆ.
"ಇದು ಸರ್ವರ್ ಸಮಸ್ಯೆ ಮತ್ತು ನಾನು ಶೀಘ್ರದಲ್ಲೇ ಹಣವನ್ನು ಕಳುಹಿಸಲು ಸಾಧ್ಯವಾಗುತ್ತದೆ ಎಂದು ನಾನು ವಿವರಿಸಿದೆ. ಸೇವೆ ಕೊನೆಗೊಳ್ಳುವ ವೆಲ್ಲರದದಲ್ಲಿ ನಾನು ಇಳಿಯಬೇಕಾಗಿರುವುದರಿಂದ, ನಾನು ಅಲ್ಲಿಂದ ಹಣವನ್ನು ಹೊಂದಿಸಿ ಅವರಿಗೆ ಪಾವತಿಸಬಹುದು ಎಂದು ಕಂಡಕ್ಟರ್‌ಗೆ ಹೇಳಿದೆ. ಆದರೆ, ಕಂಡಕ್ಟರ್ ಒಪ್ಪಲಿಲ್ಲ. ಅಂತಹ ವಂಚಕರ ಪರಿಚಯವಿದೆ ಎಂದು ಹೇಳಿ, ಅವನು ನನ್ನನ್ನು ಕೆಳಗಿಳಿಯುವಂತೆ ಸೂಚಿಸಿದ ಮತ್ತು ನಿರ್ಜನ ಪ್ರದೇಶದಲ್ಲಿ ಬಸ್‌ನಿಂದ ನನ್ನನ್ನು ಕೆಳಗಿಳಿಸಿದ್ದ' ಎಂದಿದ್ದಾರೆ.
ಬೀದಿ ದೀಪಗಳೂ ಇಲ್ಲದ ತೋಲಾಡಿಯಲ್ಲಿ ಇಳಿಯುವುದು ಅಸುರಕ್ಷಿತವೆಂದು ಎಂದು ನನಗೆ ಅನಿಸಿತ್ತು ಎಂದು ದಿವ್ಯಾ ಹೇಳಿದರು. ತನ್ನ ಪತಿಗೆ ಮಾಹಿತಿ ನೀಡಿದ ನಂತರ, ಸುಮಾರು ಎರಡೂವರೆ ಕಿಲೋಮೀಟರ್ ನಡೆದುಕೊಂಡು ಹೋಗಿದ್ದಾರೆ. ನಂತರ, ಅವರ ಪತಿ ಸ್ಥಳಕ್ಕೆ ತಲುಪಿದರು ಎಂದು ಅವರು ಹೇಳಿದರು.
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ನಿತ್ಯ ಪ್ರಯಾಣಿಸುವ ದಿವ್ಯಾ, ಟಿಕೆಟ್ ಖರೀದಿಸಲು ಗೂಗಲ್ ಪೇ ಬಳಸುವುದಾಗಿ ಹೇಳಿದ್ದಾರೆ. ಘಟನೆಯ ಬಗ್ಗೆ ಸಂಬಂಧಪಟ್ಟ ಸಚಿವರು ಮತ್ತು ವೆಲ್ಲರದ ಸ್ಟೇಷನ್ ಮಾಸ್ಟರ್‌ಗೆ ದೂರುಗಳನ್ನು ಸಲ್ಲಿಸಿದ್ದಾರೆ.ದಿವ್ಯಾ ಅವರ ದೂರನ್ನು ಸ್ವೀಕರಿಸಲಾಗಿದ್ದು, ಇಲಾಖಾ ತನಿಖೆ ನಡೆಸಲಾಗುವುದು ಎಂದು ಡಿಪೋ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ