NavIC Navigation System: ‘ನಾವಿಕ್‌’ ದಿಕ್ಸೂಚಿ ಸಿಸ್ಟಂನಲ್ಲಿ ಭಾರೀ ಸಮಸ್ಯೆ, ರಾಷ್ಟ್ರೀಯ ಭದ್ರತೆಗೆ ಅಪಾಯದ ಭೀತಿ!

Kannadaprabha News   | Kannada Prabha
Published : Mar 15, 2026, 07:48 AM IST
Major Glitch in NavIC Navigation System Services Hit

ಸಾರಾಂಶ

ಭಾರತದ ಸ್ವದೇಶಿ ದಿಕ್ಸೂಚಿ ವ್ಯವಸ್ಥೆಯಾದ 'ನಾವಿಕ್'ನಲ್ಲಿ ಭಾರೀ ದೋಷ ಕಂಡುಬಂದಿದೆ. ಕಾರ್ಯನಿರ್ವಹಣೆಯಲ್ಲಿದ್ದ ನಾಲ್ಕು ಉಪಗ್ರಹಗಳಲ್ಲಿ ಒಂದಾದ ಐಆರ್‌ಎನ್‌ಎಸ್‌ಎಸ್‌-1ಎಫ್‌ ಸಂಪೂರ್ಣ ನಿಷ್ಕ್ರಿಯವಾಗಿದ್ದು, ಇದು ರೈಲ್ವೆ ಸೇನಾ ಸೇವೆಗಳ ಮೇಲೆ ಪರಿಣಾಮ ಬೀರಿ ರಾಷ್ಟ್ರೀಯ ಭದ್ರತೆಯ ಬಗ್ಗೆ ಕಳವಳ ಮೂಡಿಸಿದೆ.

ನವದೆಹಲಿ (ಮಾ.15): ರೈಲ್ವೆ, ಭಾರತೀಯ ಸೇನೆ ಮೊದಲಾದ ಸರ್ಕಾರಿ ಸಂಸ್ಥೆಗಳಿಗೆ ದಿಕ್ಸೂಚಿ (ಜಿಪಿಎಸ್‌ ರೀತಿ) ಸೇವೆಗಳನ್ನು ನೀಡಲು ಅಭಿವೃದ್ಧಿಪಡಿಸಿರುವ ‘ನಾವಿಕ್‌’ (ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್ಸ್ಟಲೇಷನ್) ಉಪಗ್ರಹ ವ್ಯವಸ್ಥೆಯಲ್ಲಿ ಭಾರೀ ದೋಷವುಂಟಾಗಿದೆ. ಇದರಲ್ಲಿ ಕಾರ್ಯನಿರ್ವಹಣೆಯಲ್ಲಿದ್ದ 4 ಉಪಗ್ರಹಗಳಲ್ಲಿ ಒಂದು ಉಪಗ್ರಹ ಸಂಪೂರ್ಣ ಹಾಳಾಗಿದ್ದು, ಸೇವೆ ನೀಡುವಲ್ಲಿ ವಿಫಲವಾಗಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ನಾವಿಕ್‌ ಎಂಬುದು ಭಾರತದ ಸ್ವದೇಶಿ ದಿಕ್ಸೂಚಿ ಉಪಗ್ರಹ ವ್ಯವಸ್ಥೆ. ಇದು ಸರ್ಕಾರಿ ಸಂಸ್ಥೆಗಳಿಗೆ ಜಿಪಿಎಸ್‌ ರೀತಿಯಲ್ಲಿ ದಿಕ್ಸೂಚಿಯಾಗಿ ಕೆಲಸ ಮಾಡುತ್ತದೆ. ಇದರ ಕನಿಷ್ಠ 4 ಉಪಗ್ರಹಗಳು ಸಂಪೂರ್ಣ ಕಾರ್ಯನಿರ್ವಹಣೆಯಲ್ಲಿರಬೇಕು. ಆದರೆ 10 ವರ್ಷಗಳ ಹಿಂದೆ, 2016ರ ಮಾ.10ರಂದು ಉಡಾವಣೆ ಮಾಡಲಾಗಿದ್ದ ಐಆರ್‌ಎನ್‌ಎಸ್‌ಎಸ್‌-1ಎಫ್‌ ಉಪಗ್ರಹವು ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಇದು ರಾಷ್ಟ್ರೀಯ ಭದ್ರತೆಯ ಬಗ್ಗೆ ಕಳವಳ ಉಂಟುಮಾಡಿದೆ.

ರೈಲ್ವೆ ಮತ್ತು ಸೇನಾ ಕಾರ್ಯಾಚರಣೆಗಳ ಮೇಲೆ ಇದರ ಪರಿಣಾಮವೇನು?

ರೈಲುಗಳಿಗೆ ಸಮಯ, ಮಾರ್ಗ, ಸುರಕ್ಷತಾ ವ್ಯವಸ್ಥೆ ಇತ್ಯಾದಿಗಳ ಮಾಹಿತಿ ನೀಡುವಲ್ಲಿ ನಾವಿಕ್‌ ವ್ಯವಸ್ಥೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಇದೀಗ ಈ ವ್ಯವಸ್ಥೆ ಹಾನಿಗೊಂಡಿರುವುದರಿಂದ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಇನ್ನು ಇದು ಭಾರತೀಯ ಸೇನೆಗೆ ಕ್ಷಿಪಣಿ, ಡ್ರೋನ್‌, ಸೈನಿಕ ಕಾರ್ಯಾಚರಣೆ ಮೊದಲಾದವುಗಳಿಗೆ ಜಿಪಿಎಸ್‌ ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತದೆ. ನಾವಿಕ್‌ ಕೈಕೊಟ್ಟರೆ ರಾಷ್ಟ್ರೀಯ ಭದ್ರತೆಗೂ ಅಪಾಯ ಉಂಟಾಗುವ ಆತಂಕವಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

AI ಅಬ್ಬರಕ್ಕೆ ಟೆಕ್ಕಿಗಳು ಉಡೀಸ್! ಮೆಟಾದಿಂದ 16,000 ಉದ್ಯೋಗಿಗಳಿಗೆ ಗೇಟ್‌ಪಾಸ್‌ಗೆ?
India Latest News Live: NavIC Navigation System - ‘ನಾವಿಕ್‌’ ದಿಕ್ಸೂಚಿ ಸಿಸ್ಟಂನಲ್ಲಿ ಭಾರೀ ಸಮಸ್ಯೆ, ರಾಷ್ಟ್ರೀಯ ಭದ್ರತೆಗೆ ಅಪಾಯದ ಭೀತಿ!