Middle East Tensions: ಖಾರ್ಗ್‌ ದ್ವೀಪದ ಮೇಲೆ ಅಮೆರಿಕ ದಾಳಿ, ಸೇನಾ ನೆಲೆ ನಾಶ, ತೈಲಾಗಾರ ಸೇಫ್‌, ಬ್ಯಾರಲ್‌ಗೆ 200 ಡಾಲರ್‌ಗೇರಿಕೆ?

Kannadaprabha News   | Kannada Prabha
Published : Mar 15, 2026, 05:03 AM IST
Middle East Tensions US Attacks Kharg Island Destroys Base Oil to Hit 200 Doller

ಸಾರಾಂಶ

ಅಮೆರಿಕವು ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್‌ ದ್ವೀಪದ ಮೇಲೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ, ತಮ್ಮ ತೈಲ ಮೂಲಸೌಕರ್ಯಗಳ ಮೇಲೆ ದಾಳಿ ಮುಂದುವರೆದರೆ ಮಧ್ಯಪ್ರಾಚ್ಯದಾದ್ಯಂತ ತೈಲ ಘಟಕಗಳನ್ನು ನಾಶಮಾಡುವುದಾಗಿ ಇರಾನ್ ಬೆದರಿಕೆ ಹಾಕಿದ್ದು, ಇದು ಜಾಗತಿಕ ತೈಲ ಬೆಲೆ ಏರಿಕೆಯ ಭೀತಿ!.

ಮಧ್ಯಪ್ರಾಚ್ಯ ಯುದ್ಧ 15ನೇ ದಿನಕ್ಕೆ,ತೈಲ ಬಿಕ್ಕಟ್ಟು ತೀವ್ರ ,ಬ್ಯಾರಲ್‌ಗೆ 200 ಡಾಲರ್‌ಗೇರಿಕೆ?,ಹೋರ್ಮುಜ್‌, ಖಾರ್ಗ್‌ ದ್ವೀಪದ ಮೇಲೆ ಅಮೆರಿಕ ದಾಳಿ, ಸೇನಾ ನೆಲೆ ನಾಶ ತೈಲಾಗಾರ ಸೇಫ್‌

ಪೂರೈಸಿದ ಹೊತ್ತಿನಲ್ಲೇ ಹೊಸ ತಿರುವು ಪಡೆದಿದೆ. ಒಂದೆಡೆ ಇರಾನ್‌ನ ಆರ್ಥಿಕತೆಯ ಕೇಂದ್ರ ಬಿಂದುವಾದ ಖಾರ್ಗ್‌ ದ್ವೀಪದ ಮೇಲೆ ದಾಳಿ ಮಾಡಿರುವ ಅಮೆರಿಕ, ಮತ್ತೊಂದೆಡೆ ಹೋರ್ಮಜ್‌ ಜಲಸಂಧಿಗೆ ಹೆಚ್ಚುವರಿ 5000 ಯೋಧರ ಕಳುಹಿಸಿದೆ. ಈ ಮೂಲಕ ಇರಾನ್‌ ಅನ್ನು ಆರ್ಥಿಕವಾಗಿ, ಭೌಗೋಳಿಕವಾಗಿ ಕಟ್ಟಿಹಾಕುವ ಯತ್ನ ಮಾಡಿದೆ. ಮತ್ತೊಂದೆಡೆ ಖಾರ್ಗ್‌ನ ತೈಲ ಘಟಕಗಳ ಮೇಲೇನಾದರೂ ದಾಳಿ ನಡೆಸಿದರೆ ಇಡೀ ಮಧ್ಯಪ್ರಾಚ್ಯದ ತೈಲ ಮೂಲಸೌಕರ್ಯ ಧ್ವಂಸ ಮಾಡುವುದಾಗಿ ಇರಾನ್‌ ಬೆದರಿಕೆ ಒಡ್ಡಿದೆ. ಪರಸ್ಪರರನ್ನು ತೈಲದ ಮೂಲಕ ಕಟ್ಟಿಹಾಕುವ ಈ ವ್ಯೂಹ ಜಗತ್ತಿನ ಮೇಲೆ ಗಂಭೀರ ಪರಿಣಾಮಗಳ ಭೀತಿ ಹುಟ್ಟುಹಾಕಿದೆ. ಇದು ಜಾಗತಿಕ ತೈಲ ಪೂರೈಕೆ ವ್ಯವಸ್ಥೆಯನ್ನೇ ಬುಡಮೇಲು ಮಾಡಿ, ಕಚ್ಚಾತೈಲದ ಬೆಲೆ 200 ಡಾಲರ್‌ಗೆ ಏರುವ ಆತಂಕ ಹುಟ್ಟುಹಾಕಿದೆ.

ದುಬೈ: ಅಮೆರಿಕ-ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಯುದ್ಧ 15ನೇ ದಿನವಾದ ಶನಿವಾರ ಮಹತ್ವದ ತಿರುವು ಪಡೆದುಕೊಂಡಿದೆ. ಈ ನಡುವೆ ಇರಾನ್‌ನ ತೈಲ ರಫ್ತಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದ್ದ ಅರ್ಥಾತ್‌ ಶೇ.90ರಷ್ಟು ಇರಾನ್‌ನ ತೈಲ ರಫ್ತನ್ನು ನಿರ್ವಹಿಸುವ ಖಾರ್ಗ್‌ ದ್ವೀಪದ ಮೇಲೆ ಅಮೆರಿಕ ಭೀಕರ ವಾಯುದಾಳಿ ನಡೆಸಿ, ಎಲ್ಲಾ ಸೈನಿಕ ನೆಲೆಗಳನ್ನು ನಾಶಗೊಳಿಸಿದೆ.

ಆದರೆ, ಖಾರ್ಗ್‌ ದ್ವೀಪದಲ್ಲಿನ ತೈಲಾಗಾರಗಳ ಮೇಲೆ ಅಮೆರಿಕ ದಾಳಿ ಮಾಡಿಲ್ಲ. ಇದರ ಬದಲಾಗಿ, ‘ಹೋರ್ಮುಜ್‌ ಜಲಸಂಧಿಯ ಮೂಲಕ ಸಾಗುವ ಹಡಗುಗಳ ಸಂಚಾರಕ್ಕೆ ಅಡ್ಡಿಯೇನಾದರೂ ಮಾಡಿದರೆ, ದ್ವೀಪದ ತೈಲ ಮೂಲಸೌಕರ್ಯಗಳ ಮೇಲೂ ದಾಳಿ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದೆ. ಈ ಮೂಲಕ ತೈಲ ದ್ವೀಪದ ನಿಯಂತ್ರಣಕ್ಕೆ ಅಮೆರಿಕ ಯತ್ನಿಸುತ್ತಿದೆಯೇ ಎಂಬ ಶಂಕೆ ಮೂಡಿದೆ.

ಆದರೆ ಇದಕ್ಕೆ ಇರಾನ್‌ ಎದಿರೇಟು ನೀಡುವ ಎಚ್ಚರಿಕೆ ನೀಡಿದೆ. ತಮ್ಮ ದ್ವೀಪದ ಮೇಲೆ ಅಮೆರಿಕದ ದಾಳಿಯನ್ನು ಖಂಡಿಸಿರುವ ಇರಾನ್‌ನ ಸಂಯುಕ್ತ ಸೈನ್ಯಾಧಿಕಾರಿ ಇಬ್ರಾಹಿಂ ಝೊಲ್ಫಘಾರಿ, ‘ಇರಾನ್‌ನ ತೈಲ ಮತ್ತು ಆರ್ಥಿಕ ಮೂಲಸೌಕರ್ಯಗಳ ಮೇಲೆ ಅಮೆರಿಕ ದಾಳಿ ನಡೆಸಿದರೆ, ಅಮೆರಿಕ ಷೇರುಗಳನ್ನು ಹೊಂದಿರುವ ಅಥವಾ ಅಮೆರಿಕದೊಂದಿಗೆ ಸಹಕರಿಸುವ ತೈಲ ಕಂಪನಿಗಳ ಎಲ್ಲಾ ತೈಲ, ಆರ್ಥಿಕ ಮತ್ತು ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಟ್ರಂಪ್‌ ಗುಡುಗು:

ಈ ಬಗ್ಗೆ ಟ್ರುತ್‌ ಸೋಷಿಯಲ್‌ನಲ್ಲಿ ಮಾಹಿತಿ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ನನ್ನ ನಿರ್ದೇಶನದಂತೆ, ಅಮೆರಿಕದ ಸೆಂಟ್ರಲ್ ಕಮಾಂಡ್, ಮಧ್ಯಪ್ರಾಚ್ಯದ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ಬಾಂಬ್ ದಾಳಿಯನ್ನು ನಡೆಸಿದೆ. ಇರಾನ್‌ನ ಮುಕುಟಮಣಿಯಂತಿರುವ ಖಾರ್ಗ್‌ ದ್ವೀಪದ ಪ್ರತಿಯೊಂದು ಸೈನಿಕ ನೆಲೆಯನ್ನೂ ಸಂಪೂರ್ಣವಾಗಿ ನಾಶಗೊಳಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಇದೇ ವೇಳೆ, ‘ಸಭ್ಯತೆಯ ಕಾರಣದಿಂದ, ದ್ವೀಪದ ತೈಲ ಮೂಲಸೌಕರ್ಯಗಳನ್ನು ನಾಶ ಮಾಡದಂತೆ ನಿರ್ಧರಿಸಿದ್ದೇನೆ. ಆದರೆ ಇರಾನ್ ಅಥವಾ ಬೇರೆ ಯಾರಾದರೂ ಹೋರ್ಮುಜ್‌ ಜಲಸಂಧಿಯ ಮೂಲಕ ಹಡಗುಗಳ ಮುಕ್ತ ಮತ್ತು ಸುರಕ್ಷಿತ ಸಂಚಾರವನ್ನು ಭಂಗಗೊಳಿಸಿದರೆ, ಈ ನಿರ್ಧಾರವನ್ನು ತಕ್ಷಣ ಪುನರ್ವಿಚಾರಣೆ ಮಾಡುತ್ತೇನೆ’ ಎಂದು ಎಚ್ಚರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಿಳೆಯಿಂದ ಟಾಟಾ ಸಿಯೆರಾ ಟೆಸ್ಟ್ ಡ್ರೈವ್, 3 ವಾಹನಕ್ಕೆ ಡಿಕ್ಕಿಯಾಗಿ 20 ಅಡಿ ಗುಂಡಿಗೆ ಬಿದ್ದ ಕಾರು
Crude Oil Refining: ಕಚ್ಚಾ ತೈಲದಿಂದ ಪೆಟ್ರೋಲ್, ಡೀಸೆಲ್, ಗ್ಯಾಸ್ ಹೇಗೆ ತಯಾರಿಸ್ತಾರೆ? ಒಂದೇ ತೈಲದಿಂದ ಏನೆಲ್ಲಾ ಸಿಗುತ್ತೆ ಗೊತ್ತಾ?