ಮುಂಬೈ: ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಓಲಾ ಸ್ಕೂಟರ್ ಅನ್ನು ಕತ್ತೆಗೆ ಕಟ್ಟಿ ಪಟ್ಟಣದ ಸುತ್ತಲೂ ಮೆರವಣಿಗೆ ಮಾಡಿದ ವಿಚಿತ್ರ ಘಟನೆ
ಮಹಾರಾಷ್ಟ್ರದ (Maharashtra) ಬೀಡ್ (Beed district) ಜಿಲ್ಲೆಯಲ್ಲಿ ನಡೆದಿದೆ. ಸ್ಕೂಟರ್ ಡೆಲಿವರಿ ಆದ ಕೆಲವೇ ದಿನಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದ್ದರಿಂದ ಕೋಪಗೊಂಡು ಆತ ಈ ಕೃತ್ಯವೆಸಗಿದ್ದಾನೆ ಎಂದು ತಿಳಿದು ಬಂದಿದೆ. ಎಲೆಕ್ಟ್ರಿಕ್ ಸ್ಕೂಟರ್ (electric scooter) ಖರೀದಿಸಿದ ಕೆಲವೇ ದಿನಗಳಲ್ಲಿ ಕೆಟ್ಟು ನಿಂತಿದ್ದು, ಈ ಬಗ್ಗೆ ಓಲಾದಿಂದ ಯಾವುದೇ ಸಮಾಧಾನಕರ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ವ್ಯಕ್ತಿ ಓಲಾ ವಿರುದ್ಧ ಈ ಮೂಲಕ ವಿಭಿನ್ನ ಪ್ರತಿಭಟನೆ ಮಾಡಿದ್ದಾರೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಸಚಿನ್ ಗಿಟ್ಟೆ (Sachin Gitte) ಎಂಬುವರು ಓಲಾ ದ್ವಿಚಕ್ರ ವಾಹನಕ್ಕೆ ಕತ್ತೆಯನ್ನು ಕಟ್ಟಿ, ಓಲಾ ಕಂಪನಿಯನ್ನು ನಂಬಬೇಡಿ ಎಂದು ಭಿತ್ತಿಪತ್ರಗಳು ಮತ್ತು ಬ್ಯಾನರ್‌ಗಳೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ಮಾಡಿದರು. ಸ್ಥಳೀಯ ಸುದ್ದಿ ವಾಹಿನಿ ಲೆಟ್ಸ್‌ಅಪ್ ಮರಾಠಿ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಹಂಚಿಕೊಂಡ ವಿಡಿಯೋದಲ್ಲಿ ಕತ್ತೆ ದ್ವಿಚಕ್ರ ವಾಹನವನ್ನು ಎಳೆಯುವುದನ್ನು ತೋರಿಸುತ್ತದೆ.
undefined
ಎಬಿಪಿ ನ್ಯೂಸ್‌ನಲ್ಲಿನ ವರದಿಯ ಪ್ರಕಾರ, ಸಚಿನ್ ಗಿಟ್ಟೆ ಖರೀದಿಸಿದ ಆರು ದಿನಗಳ ನಂತರ ದ್ವಿಚಕ್ರ ವಾಹನವು ಕೆಲಸ ಮಾಡುವುದನ್ನು ನಿಲ್ಲಿಸಿತು. ಈ ಹಿನ್ನೆಲೆಯಲ್ಲಿ ಅವರು ಓಲಾ ಕಂಪನಿಯನ್ನು ಸಂಪರ್ಕಿಸಿದ್ದಾರೆ. ನಂತರ ಓಲಾ ಮೆಕ್ಯಾನಿಕ್ ಅವರ ಸ್ಕೂಟರ್ ಅನ್ನು ಪರಿಶೀಲಿಸಿದರು. ಆದರೆ, ಅದನ್ನು ಸರಿಪಡಿಸಲು ಯಾರೂ ಮುಂದಾಗಿಲ್ಲ ಎಂದು ವರದಿ ತಿಳಿಸಿದೆ. ಗಿಟ್ಟೆ ಅವರು ಓಲಾದ ಗ್ರಾಹಕ ಸೇವೆ(customer service) ವಿಭಾಗಕ್ಕೆ ಅನೇಕ ಕರೆಗಳನ್ನು ಮಾಡಿದರು ಪರಿಹಾರದ ಬದಲು ಅಸ್ಪಷ್ಟ ಪ್ರತಿಕ್ರಿಯೆಗಳಿಗೆ ಕಾರಣವಾಯಿತು ಎಂದು ತಿಳಿದು ಬಂದಿದೆ.
E scooter Fire ಇ-ಸ್ಕೂಟರ್‌ಗೆ ಬೆಂಕಿ, 1,441 ಸ್ಕೂಟರ್ ಹಿಂಪಡೆದ ಓಲಾ!
ಇದರ ಫಲವಾಗಿ ಭಾನುವಾರ ದ್ವಿಚಕ್ರ ವಾಹನವನ್ನು ಕತ್ತೆಗೆ ಕಟ್ಟಿದ ಅವರು ಈ ವಂಚಕ ಕಂಪನಿ ಓಲಾ ಬಗ್ಗೆ ಎಚ್ಚರದಿಂದಿರಿ, ಓಲಾ ಕಂಪನಿಯ ದ್ವಿಚಕ್ರ ವಾಹನಗಳನ್ನು ಖರೀದಿಸಬೇಡಿ ಎಂಬ ಬ್ಯಾನರ್‌ಗಳೊಂದಿಗೆ ಮೆರವಣಿಗೆ ನಡೆಸಿದರು. ಈ ಪ್ರತಿಭಟನೆಯು ಪರ್ಲಿಯಲ್ಲಿ (Parli) ಸಂಚಲನವನ್ನು ಸೃಷ್ಟಿಸಿತ್ತು. ಅಲ್ಲದೇ ನಂತರ ಸಾಮಾಜಿಕ ಜಾಲತಾಣಗಳಲ್ಲಿ (Social Media) ಮೆರವಣಿಗೆ ದೃಶ್ಯ ವೈರಲ್ ಆಯ್ತು. ಇಷ್ಟೇ ಅಲ್ಲದೇ ವ್ಯಾಪಾರಿಯೂ ಆಗಿರುವ ಸಚಿನ್ ಗಿಟ್ಟೆ ಗ್ರಾಹಕರ ವೇದಿಕೆಯನ್ನು ಸಂಪರ್ಕಿಸಿದ್ದಾರೆ ಮತ್ತು ಬೈಕ್ ಅನ್ನು ರಿಪೇರಿ ಮಾಡಿಲ್ಲ ಅಥವಾ ಬದಲಾಯಿಸಿಲ್ಲ ಎಂದು ದೂರಿದ್ದಾರೆ. ಕಂಪನಿಯಿಂದ ಗ್ರಾಹಕರಿಗೆ ಯಾವುದೇ ಆರ್ಥಿಕ ರಕ್ಷಣೆ ಇಲ್ಲ ಎಂದು ಆರೋಪಿಸಿದ ಅವರು ಓಲಾ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ ಬೆಂಕಿ ಅವಘಡ: ನಿರ್ಲಕ್ಷ್ಯ ತೋರಿದ ಕಂಪನಿ ವಿರುದ್ಧ ಕಠಿಣ ಕ್ರಮ: ನಿತಿನ್ ಗಡ್ಕರಿ
ಗಿಟ್ಟೆ ಅವರು ಸೆಪ್ಟೆಂಬರ್ 2021 ರಲ್ಲಿ ಸ್ಕೂಟರ್ ಅನ್ನು ಬುಕ್ ಮಾಡಿದ್ದರು ಮತ್ತು ಅದನ್ನು ಮಾರ್ಚ್ 24, 2022 ರಂದು ಅವರಿಗೆ ತಲುಪಿಸಲಾಯಿತು. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತೆ ಮತ್ತೆ ಬೆಂಕಿಗಾಹುತಿಯಾದ ಘಟನೆಗಳು ನಡೆದ ಬಳಿಕ ಓಲಾ ಎಲೆಕ್ಟ್ರಿಕ್ ತನ್ನ 1,441 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಏಪ್ರಿಲ್ 24 ರಂದು ಹಿಂಪಡೆಯುವುದಾಗಿ ಘೋಷಿಸಿದೆ. ಈ ಸ್ಕೂಟರ್‌ಗಳನ್ನು ಕಂಪನಿಯ ಸೇವಾ ಎಂಜಿನಿಯರ್‌ಗಳು ಮೌಲ್ಯಮಾಪನ ಮಾಡುತ್ತಾರೆ ಮತ್ತು ಎಲ್ಲಾ ಬ್ಯಾಟರಿ ವ್ಯವಸ್ಥೆಗಳು, ಥರ್ಮಲ್ ಸಿಸ್ಟಮ್‌ಗಳು ಮತ್ತು ಸುರಕ್ಷತೆಯನ್ನು ಮರು ಪರಿಶೀಲಿಸಿ ಲೋಪದೋಷ ಪತ್ತೆ ಮಾಡಲಿದ್ದಾರೆ.