ಜಮ್ಮು ಕಾಶ್ಮೀರಕ್ಕೆ ಪ್ರಧಾನಿ ಮೋದಿ ಭೇಟಿ, ಪಾಕಿಸ್ತಾನ ತಗಾದೆ!

Published : Apr 25, 2022, 08:35 PM IST
 ಜಮ್ಮು ಕಾಶ್ಮೀರಕ್ಕೆ ಪ್ರಧಾನಿ ಮೋದಿ ಭೇಟಿ, ಪಾಕಿಸ್ತಾನ ತಗಾದೆ!

ಸಾರಾಂಶ

2019ರ ಆಗಸ್ಟ್ ನಲ್ಲಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದು ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದರು.

ನವದೆಹಲಿ (ಏ. 25):  ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ಕಾಶ್ಮೀರ ಭೇಟಿ (Kashmir Visit) ಮತ್ತು ಚೆನಾಬ್ ನದಿಯಲ್ಲಿ ರಾಟಲ್ ಮತ್ತು ಕ್ವಾರ್ ಜಲವಿದ್ಯುತ್ ಯೋಜನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿರುವುದನ್ನು ಪಾಕಿಸ್ತಾನ ಆಕ್ಷೇಪಿಸಿದೆ, ಇದು ಸಿಂಧೂ ಜಲ ಒಪ್ಪಂದದ (Indus Waters Treaty ) ನೇರ ಉಲ್ಲಂಘನೆಯಾಗಿದೆ ಎಂದು ಹೇಳಿದೆ.

2019 ರ ಆಗಸ್ಟ್‌ನಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಸಾರ್ವಜನಿಕ ಕಾರ್ಯಕ್ರಮಕ್ಕಾಗಿ ಪ್ರಧಾನಿ ಮೋದಿ ಭಾನುವಾರ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದರು. ಭೇಟಿಯ ವೇಳೆ ಮೋದಿ ಅವರು ರಾಟಲ್ ಮತ್ತು ಕ್ವಾರ್ ಜಲವಿದ್ಯುತ್ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು, ಕಿಶ್ತ್ವಾರ್‌ನ ಚೆನಾಬ್ ನದಿಯಲ್ಲಿ ಸುಮಾರು 5,300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಿರುವ 850 MW ಸೌಲಭ್ಯ ಮತ್ತು ಅದೇ ನದಿಗೆ 4,500 ಕೋಟಿಗೂ ಅಧಿಕ ವೆಚ್ಚದಲ್ಲಿ 540 MW ಕ್ವಾರ್ ಜಲವಿದ್ಯುತ್ ಯೋಜನೆಗೆ ನಿರ್ಮಿಸಲಾಗುತ್ತದೆ.
ಪ್ರಧಾನಿ ಮೋದಿಯವರ ಕಾಶ್ಮೀರ ಭೇಟಿಯನ್ನು ಕಣಿವೆಯಲ್ಲಿ "ನಕಲಿ ಸಹಜತೆಯನ್ನು ತೋರಿಸಲು ಮತ್ತೊಂದು ತಂತ್ರ" ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಹೇಳಿದೆ.

"5 ಆಗಸ್ಟ್ 2019 ರಿಂದ, ಕಾಶ್ಮೀರದಲ್ಲಿನ ವಾಸ್ತವಿಕ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಭಾರತವು ಇಂತಹ ಹತಾಶ ಪ್ರಯತ್ನಗಳನ್ನು ಅಂತರರಾಷ್ಟ್ರೀಯ ಸಮುದಾಯವು ನೋಡುತ್ತಲೇ ಬಂದಿದೆ; ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಭಾನುವಾರ ರಾತ್ರಿ ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ. ಇದೇ ವೇಳೆ ಕಾಶ್ಮೀರದ ಚೆನಾಬ್ ನದಿಯಲ್ಲಿ ರಾಟಲ್ ಮತ್ತು ಕ್ವಾರ್ ಜಲವಿದ್ಯುತ್ ಯೋಜನೆಗಳ (ಎಚ್‌ಇಪಿ) ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ಪಾಕಿಸ್ತಾನ ಟೀಕಿಸಿದೆ.

"ಭಾರತವು ವಿನ್ಯಾಸ ಮಾಡಿರುವ ರಾಟಲ್ ಜಲವಿದ್ಯುತ್ ಸ್ಥಾವರದ ನಿರ್ಮಾಣಕ್ಕೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸುತ್ತದೆ ಕ್ವಾರ್ ಜಲವಿದ್ಯುತ್ ಸ್ಥಾವರಕ್ಕಾಗಿ ಭಾರತವು ಪಾಕಿಸ್ತಾನದೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವ ಒಪ್ಪಂದದ ಬಾಧ್ಯತೆಯನ್ನು ಇದುವರೆಗೆ ಪೂರೈಸಿಲ್ಲ" ಎಂದು ಹೇಳಿದೆ. "ಭಾರತದ ಪ್ರಧಾನಿಯವರು ಎರಡು ಯೋಜನೆಗಳ ಶಂಕುಸ್ಥಾಪನೆಯನ್ನು ಪಾಕಿಸ್ತಾನವು 1960 ರ ಸಿಂಧೂ ಜಲ ಒಪ್ಪಂದದ (IWT) ನೇರ ಉಲ್ಲಂಘನೆ ಎಂದು ಪರಿಗಣಿಸುತ್ತದೆ" ಎಂದು ವಿದೇಶಾಂಗ ಕಚೇರಿ ಹೇಳಿದೆ.

ಭಾನುವಾರ ಜಮ್ಮು ಕಾಶ್ಮೀರದ ಸಂಬಾ ಜಿಲ್ಲೆಯ ಪಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ,  ಕಳೆದ 2-3 ವರ್ಷಗಳಲ್ಲಿ ಕೈಗೊಂಡ ಹಲವಾರು ಅಭಿವೃದ್ಧಿ ಯೋಜನೆಗಳ ಮೂಲಕ ಜಮ್ಮು-ಕಾಶ್ಮೀರವು, ಪ್ರಜಾಪ್ರಭುತ್ವ ಮತ್ತು ದೃಢ ನಿಶ್ಚಯಕ್ಕೆ ಹೊಸ ಉದಾಹರಣೆಯಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಯುಗವೇ ಆರಂಭವಾಗಿದೆ ಎಂದು ಎಂದು ಬಣ್ಣಿಸಿದ್ದರು.

ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಶಕೆ, ಪ್ರಧಾನಿ ಮೋದಿ!

‘ಕಳೆದ 2 ವರ್ಷಗಳಲ್ಲಿ ರಾಜ್ಯಕ್ಕೆ 38,000 ಕೋಟಿ ರು.ನಷ್ಟು ಖಾಸಗಿ ಬಂಡವಾಳ ಹೂಡಿಕೆಯಾಗಿದೆ, ಜೊತೆಗೆ ಪ್ರವಾಸಿಗರ ಸಂಖ್ಯೆಯಲ್ಲೂ ಭಾರೀ ಏರಿಕೆಯಾಗಿದೆ’ ಎಂದೂ ಅವರು ಹರ್ಷಿಸಿದ್ದಾರೆ. ಈ ಮೂಲಕ ಉಗ್ರವಾದದ ಬೀಡಾಗಿದ್ದ ರಾಜ್ಯದಲ್ಲಿ ಈಗ ಪರಿವರ್ತನೆಯ ಶಕೆ ಆರಂಭವಾಗಿದೆ ಎಂಬ ಸುಳಿವನ್ನು ಅವರು ನೀಡಿದ್ದಾರೆ.

ಪಂಚಾಯತ್ ಆಗಲಿ, ಪಾರ್ಲಿಮೆಂಟ್ ಆಗಲಿ ಯಾವ ಕೆಲಸವೂ ಚಿಕ್ಕದಲ್ಲ!

ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದಾದ ನಂತರ ಮೋದಿ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದರು. ‘ರಾಷ್ಟ್ರೀಯ ಪಂಚಾಯತ್‌ ದಿನ’ದ ಅಂಗವಾಗಿ ಭಾನುವಾರ ಜಮ್ಮವಿನಿಂದ 15 ಕಿ.ಮೀ ದೂರದ ಪಲ್ಲಿಯಲ್ಲಿ ಆಯೋಜಿಸಿದ್ದ ಬೃಹತ್‌ ಕಾರ್ಯಕ್ರಮದ ಮೂಲಕ ದೇಶದ ಎಲ್ಲಾ ಗ್ರಾಮಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ, ರಾಜ್ಯದ ವಿವಿಧ ಅಭಿವೃದ್ಧಿ ಕಾರ‍್ಯಕ್ರಮಗಳಿಗೆ ಚಾಲನೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!