
ಬೆಂಗಳೂರು (ಜು.14): ಮಾಜಿ ಬ್ಯಾಂಕರ್, ಸೋಶಿಯಲ್ ವರ್ಕರ್ ಹಾಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್‌ಗೆ ಆನ್‌ಲೈನ್‌ನಲ್ಲಿ ಒಂದು ಹಂತಕ್ಕೆ ಉತ್ತಮ ಫ್ಯಾನ್ ಬೇಸ್ ಇದೆ. ತಮ್ಮ ಫಾಲೋವರ್‌ಗಳಿಗೆ ತಮ್ಮ ಭಿನ್ನ ಪೋಸ್ಟ್‌ಗಳಿಂದ ಅಪ್‌ಡೇಟ್ ನೀಡುತ್ತಲೇ ಇರುವ ಅಮೃತಾ ಫಡ್ನವಿಸ್, ಆರೋಗ್ಯದಿಂದ ಹಿಡಿದು ಲೈಫ್‌ಸ್ಟೈಲ್‌ನ ಹಲವು ವಿಚಾರಗಳ ಬಗ್ಗೆ ಪೋಸ್ಟ್‌ಗಳನ್ನು ಹಾಕುತ್ತಾರೆ. ಇಂದು ಅಮೃತಾ ಫಡ್ನವಿಸ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಾಕಿದ ಪೋಸ್ಟ್ ಅಭಿಮಾನಿಗಳಲ್ಲಿ ಅಚ್ಚರಿಗೆ ಕಾರಣವಾಯಿತು. ಯಾಕೆಂದರೆ, ಅವರು ಹಾವುಗಳು ಹಾಗೂ ಹಲ್ಲಿಗಳನ್ನು ಹಿಡಿದು ಅವರ ಪೋಸ್ ನೀಡಿದ್ದರು. ಇದಕ್ಕೆ ಕ್ಯಾಪ್ಷನ್ ನೀಡಿರುವ ಆಕೆ, "ಅತ್ಯಂತ ಅಪಾಯಕಾರಿ, ವಿಷಕಾರಿ ಮತ್ತು ಕ್ರೂರ ಪ್ರಾಣಿಗಳು ಇದ್ದರೆ ಅದು, ಮನುಷ್ಯರು ಮಾತ್ರ!"
ಮೊದಲ ಚಿತ್ರದಲ್ಲಿ ಅಮೃತಾ ಫಡ್ನವಿಸ್ ಎರಡೂ ಕೈಗಳಲ್ಲಿ ಹಾವನ್ನು ಹಿಡಿದು ಪೋಸ್ ನೀಡಿದ್ದರೆ, ಇನ್ನೊಂದು ಚಿತ್ರದಲ್ಲಿ ಹಲ್ಲಿಯೊಂದು ಅವರ ಕೈಗಳ ಮೇಲೆ ಕೂತಿದೆ. ಈ ಎರಡೂ ಚಿತ್ರಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಕ್ರಮೇಣ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ ಮತ್ತು ಅವರ ಫಾಲೋವರ್‌ಗಳಿಂದ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ಇದರ ನಡುವೆ ಈ ಚಿತ್ರವನ್ನು ರಾಜಕೀಯದೊಂದಿಗೆ ಜೋಡಿಸಿ ಒಬ್ಬರು ಮಾಡಿರುವ ಟ್ವೀಟ್ ಗಮನಸೆಳೆದಿದೆ. ಮಹಾರಾಷ್ಟ್ರದ ರಾಜಕೀಯ ದೃಶ್ಯದಲ್ಲಿ ಬಹುಶಃ ಈ ರೀತಿಯ ಸನ್ನಿವೇಶ ಕಂಡುಬಂದಿದೆ ಎಂದು ಅವರು ಕಾಮೆಂಟ್ ಮಾಡಿದ್ದಾರೆ.
ಅಮೃತಾ ಫಡ್ನವಿಸ್ ಅವರನ್ನು ಸುಲಿಗೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರ ವಿಶೇಷ ತನಿಖಾ ತಂಡವು ಮೂವರ ವಿರುದ್ಧ 700 ಪುಟಗಳ ಚಾರ್ಜ್‌ಶೀಟ್ ಅನ್ನು ಈ ವರ್ಷದ ಮಾರ್ಚ್‌ನಲ್ಲಿ ಸಲ್ಲಿಸಿದಾಗ ಅಮೃತಾ ಫಡ್ನವಿಸ್ ಅವರ ಹೆಸರು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಪೊಲೀಸರ ಪ್ರಕಾರ, ಎಫ್‌ಐಆರ್ ದಾಖಲಾಗಿರುವ ಆರೋಪಿಗಳಲ್ಲಿ ಅನಿಲ್ ಜೈಸಿಂಘಾನಿ, ಅವರ ಮಗಳು ಅನಿಕ್ಷಾ ಮತ್ತು ಅವರ ಸಂಬಂಧಿ ನಿರ್ಮಲ್ ಸೇರಿದ್ದಾರೆ. ಅಮೃತಾ ಫಡ್ನವಿಸ್ ಸುಲಿಗೆ ಪ್ರಕರಣದ ಎಲ್ಲಾ ಮೂವರು ಆರೋಪಿಗಳನ್ನು ಉಲ್ಲೇಖಿಸಿ ಮುಂಬೈ ಪೊಲೀಸರು 733 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ.
ಮಹಿಳೆಯಿಂದ ನನಗೆ 1 ಕೋಟಿ ರೂ. ಲಂಚ ಕೊಡಲು ಯತ್ನ: ದೇವೇಂದ್ರ ಫಡ್ನವೀಸ್ ಪತ್ನಿ ದೂರು
ಅಮೃತಾ ಫಡ್ನವೀಸ್ ಅವರಿಗೆ ಲಂಚ ನೀಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಮಲಬಾರ್ ಹಿಲ್ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಎಲ್ಲಾ ಮೂವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 385 ಮತ್ತು 120 (B), ಜೊತೆಗೆ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 8 ಮತ್ತು 12 ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಪ್ರಧಾನಿ ಮೋದಿ ರಾಷ್ಟ್ರಪಿತ; ದೇಶದಲ್ಲಿ ಇಬ್ಬರು ರಾಷ್ಟ್ರಪಿತರು ಎಂದ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ