ದೇಶದಲ್ಲಿ ಒಂದೆಡೆ ವಿಪರೀತ ಮಳೆ ಆಗಿದ್ದರೆ, ಮತ್ತೊಂದು ಕಡೆ ಬರಗಾಲ ಪರಿಸ್ಥಿತಿ ನಿರ್ಮಾಣ ಆಗಿದೆ. ಹವಾಮಾನ ವೈಪರೀತ್ಯ ಉಂಟಾಗಿರುವುದೇ ಇದಕ್ಕೆ ಕಾರಣವಾಗಿದೆ.
ಮೈಸೂರು (ಜು.14): ದೇಶದಲ್ಲಿ ಒಂದೆಡೆ ವಿಪರೀತ ಮಳೆ ಆಗಿದ್ದರೆ, ಮತ್ತೊಂದು ಕಡೆ ಬರಗಾಲ ಪರಿಸ್ಥಿತಿ ನಿರ್ಮಾಣ ಆಗಿದೆ. ನಮ್ಮ ದೇಶದಲ್ಲಿ ಹವಾಮಾನ ವೈಪರೀತ್ಯ ಉಂಟಾಗಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಶಾಕಿಂಗ್ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಕೊನೆಯ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಸಚಿವೆ ಶೋಭಾ ಕರಂದ್ಲಾಜೆ ಅವರು, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ದೇಶದಲ್ಲಿ ಒಂದೆಡೆ ವಿಪರೀತ ಮಳೆಯಾಗಿ ಪ್ರವಾಹ ಸೃಷ್ಟಿಯಾಗಿದ್ದರೆ, ಮತ್ತೊಂದೆಡೆ ಬರಗಾಲದ ಪರಿಸ್ಥಿತಿ ಕಂಡುಬರುತ್ತಿದೆ. ಇದಕ್ಕೆ ಹವಾಮಾನ ವೈಪರೀತ್ಯವೇ ಕಾರಣವಾಗಿದೆ. ಕರ್ನಾಟಕ ರಾಜ್ಯದಲ್ಲಿ ಶೇ. 70 ಪರ್ಸೆಂಟ್ ಮಳೆ ಕೊರತೆಯಾಗಿದೆ. ಇದನ್ನು ಯಾವ ರೀತಿ ನಿಭಾಯಿಸಬೇಕೆಂದು ಚಿಂತನೆ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಇಸ್ರೋ ರಾಕೆಟ್ ಪೂಜೆ ಖಂಡಿಸಿದ ಪ್ರಗತಿಪರರಿಗೆ ಚಂದ್ರಯಾನವೇ ಗೊತ್ತಿಲ್ಲ! ಮಂಗಳಯಾನವೆಂದು ಖಂಡನೆ
ಎಲ್ಲರೂ ಒಗ್ಗೂಡಿ ಜನರ ರಕ್ಷಣೆ ಮಾಡಬೇಕು: ಹವಾಮಾನ ವೈಪರೀತ್ಯದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಯಾವ ರೀತಿ ನಿಭಾಯಿಸಬೇಕೆಂದು ಪ್ಲಾನ್ ಮಾಡುತ್ತೇವೆ. ಆರೋಪ ಪ್ರತ್ಯಾರೋಪಗಳನ್ನು ಬಿಟ್ಟು ಜನರ ಬದುಕನ್ನು ಉಳಿಸಲು ಪ್ರತಿಯೊಬ್ಬರೂ ಮುಂದಾಗಬೇಕಿದೆ. ಪಕ್ಷಾತೀತವಾಗಿ ಎಲ್ಲರೂ ಜನರ ರಕ್ಷಣೆಗೆ ಮುಂದಾಗಬೇಕಿದೆ. ಈ ದೇಶದ ರಕ್ಷಣೆಗಾಗಿ ಅಭಿವೃದ್ಧಿಗಾಗಿ, ಇಡೀ ಪ್ರಪಂಚದಲ್ಲಿ ಭಾರತದ ಧ್ವಜವನ್ನು ಎತ್ತಿ ಹಿಡಿಯಲು ನರೇಂದ್ರಮೋದಿಯವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕು ಎಂಬ ಕೋರಿಕೆಯೊಂದಿಗೆ ಚಾಮುಂಡಿ ಬೆಟ್ಟ ಹತ್ತುತ್ತಿದ್ದೇನೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾಗಬೇಕು: ಪ್ರತಿ ಬಾರಿಯಂತೆ ಈ ಬಾರಿಯ ಆಷಾಢ ಮಾಸದಲ್ಲೂ ಚಾಮುಂಡಿ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಮೆಟ್ಟಿಲುಗಳನ್ನು ಹತ್ತಿಕೊಂಡು ಬಂದು ತಾಯಿ ಚಾಮುಂಡೇಶ್ವರಿ ಮಹಿಷ ಮರ್ಧಿನಿಗೆಪೂಜೆ ಸಲ್ಲಿಸುತ್ತಿದ್ದೇನೆ. ದುಷ್ಟರ ಸಂಹಾರ ಮಾಡಿ, ಶಿಷ್ಟರನ್ನು ರಕ್ಷಣೆ ಮಾಡಿ ಕಾಪಾಡಬೇಕೆಂಬುದು ನಮ್ಮ ಕೋರಿಕೆಯಾಗಿದೆ. ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ 9 ವರ್ಷ ಅಧಿಕಾರ ಪೂರೈಸಿದ್ದಾರೆ. ಮುಂದಿನ ವರ್ಷದ ಆಷಾಢ ಮಾಸ ಬರುವ ವೇಳೆಗೆ 3ನೇ ಬಾರಿ ನರೇಂದ್ರ ಮೋದಿಯವರು ಮತ್ತೊಮ್ಮೆ ಈ ದೇಶದ ಪ್ರಧಾನಿ ಆಗಬೇಕು ಎಂಬುದು ನನ್ನ ಕೋರಿಕೆಯಾಗಿದೆ.
ದಾಳಿ ಮಾಡಿದ ಚಿರತೆಯನ್ನು ಹೆಡೆಮುರಿಕಟ್ಟಿ ಹಂದಿಮರಿ ರೀತಿ ಹೊತ್ತೊಯ್ದ ಹಾಸನದ ಶೂರ!
ಅಹಿತಕರ ಘಟನೆಗಳ ನಿವಾರಣೆಗೆ ಪೂಜೆ: ರಾಜ್ಯದಲ್ಲಿ ಇತ್ತೀಚೆಗೆ ಹಲವಾರು ದುರ್ಘಟನೆಗಳು ನಡೆದಿವೆ. ಇವೆಲ್ಲವೂ ನಿವಾರಣೆ ಆಗಬೇಕು. ಚಾಮುಂಡೇಶ್ವರಿ ತಾಯಿ ಭಕ್ತರಿಗೆ ರಕ್ಷಣೆ ಕೊಡಬೇಕು ಎಂಬುದು ನನ್ನ ಅಪೇಕ್ಷೆಯಾಗಿದೆ. ಜೈನಮುನಿಗಳ ಹತ್ಯೆ, ಟಿ.ನರಸೀಪುದಲ್ಲಿ ನಮ್ಮದೇ ಯುವಕನ ಹತ್ಯೆಯ ಜೊತೆಗೆ ಬೆಂಗಳೂರಲ್ಲೂ ಹತ್ಯೆಗಳಾಗಿದ್ದು ಮನಸ್ಸಿಗೆ ತುಂಬಾ ದುಖಃವಾಗಿದೆ. ಮನುಷ್ಯರ ಜೀವಗಳನ್ನು ಬಲಿ ತೆಗೆದುಕೊಳ್ಳುವ ದುಷ್ಟ ಶಕ್ತಿಗಳು ತಲೆ ಎತ್ತುತ್ತಿವೆ. ತಾಯಿ ಚಾಮುಂಡೇಶ್ವರಿ ಇಂತಹ ದುಷ್ಟ ಶಕ್ತಿಗಳನ್ನು ಸಂಹಾರ ಮಾಡಬೇಕು ಎಂದು ಇಂದು ತಾಯಿ ಚಾಮುಂಡೇಶ್ವರಿಗೆ ಪೂಜೆ ಮಾಡುತ್ತಿದ್ದೇನೆ ಎಂದರು.