21ರ ಹರೆಯದ ಮಗಳ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ಪತಿಯನ್ನು ಕೊಂದ ಆರೋಪದ ಮೇಲೆ ತನ್ನ ವಿರುದ್ಧದ ಕೊಲೆ ಪ್ರಕರಣವನ್ನು ರದ್ದುಗೊಳಿಸುವಂತೆ ತಾಯಿಯ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.
ಚೆನ್ನೈ (ಆ..25): ಲೈಂಗಿಕ ಅಪರಾಧದಿಂದ ತಮ್ಮನ್ನು ಅಥವಾ ಇತರರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ರೇಪ್ ಮಾಡಲು ಬಂದ ವ್ಯಕ್ತಿಯನ್ನು ಕೊಂದರೂ ಅವರಿಗೆ ಐಪಿಸಿಯ ಸೆಕ್ಷನ್ 97 ರ ಅಡಿಯಲ್ಲಿ ವಿನಾಯಿತಿ ನೀಡಲಾಗುತ್ತದೆ ಮತ್ತು ಶಿಕ್ಷೆಯಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತಿಳಿಸಿದೆ. ಕುಡಿದ ಮತ್ತಿನಲ್ಲಿ 21ರ ಹರೆಯದ ಮಗಳ ಮೇಲೆ ಹಲ್ಲೆಗೆ ಯತ್ನಿಸಿದ ಪತಿಯನ್ನು ಕೊಂದ ಆರೋಪದ ಮೇಲೆ ತನ್ನ ವಿರುದ್ಧ ದಾಖಲಾಗಿದ್ದ ಕೊಲೆ ಪ್ರಕರಣವನ್ನು ರದ್ದುಗೊಳಿಸುವಂತೆ ತಾಯಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಿ ಜಯಚಂದ್ರನ್ ಅವರ ಪೀಠವು ಅಂಗೀಕರಿಸಿತು. ಸೆಕ್ಷನ್ 482 CrPC ಅಡಿಯಲ್ಲಿ ಸಲ್ಲಿಸಿದ ತನ್ನ ಅರ್ಜಿಯಲ್ಲಿ, ತನ್ನ ಮಗಳನ್ನು ಉಳಿಸಲು ತನ್ನ ಗಂಡನನ್ನು ಕೊಲ್ಲುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಪತ್ನಿ ಕೋರ್ಟ್ ಎದುರು ಹೇಳಿದ್ದಳು. ಮಹಿಳೆಯ ಪರ ವಕೀಲರು, ಮಗಳ ಹೇಳಿಕೆ ಮತ್ತು ಮೃತ ವ್ಯಕ್ತಿಯ ಛಾಯಾಚಿತ್ರಗಳು, ಆತನ ತಲೆಯ ಹಿಂಭಾಗದಲ್ಲಿ ಆಗಿರುವ ಗಾಯವನ್ನು ತೋರಿಸಿದೆ, ಇದು ಆತ್ಮರಕ್ಷಣೆಯ ಸ್ಪಷ್ಟ ಪ್ರಕರಣವನ್ನು ಸೂಚಿಸುತ್ತದೆ ಎಂದು ವಾದಿಸಿದರು. ಆದ್ದರಿಂದ, ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಮಹಿಳೆಯನ್ನು ವಿಚಾರಣೆಗೆ ಒಳಪಡಿಸುವುದು ಸರಿಯಲ್ಲ ಎಂದು ವಕೀಲರು ವಾದ ಮಾಡಿದ್ದರು.
ಮಹಿಳೆಗೆ ಶಬ್ದ ಕೇಳಿಸಿದೆ. ಕುಡುಕ ಪತಿ ತನ್ನ ಮಗಳ ಮೇಲೆ ಮಲಗು ಆಕೆಯ ಬಾಯಿಯನ್ನು ಮುಚ್ಚುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಕೋರ್ಟ್ ಎದುರು ತಿಳಿಸಲಾಗಿದೆ. ಆತನಿಂದ ಮಗಳನ್ನು ರಕ್ಷಣೆ ಮಾಡಲು ಪ್ರಯತ್ನಿಸಿದಾಗ, ಆತ ಅದಕ್ಕೆ ಬಗ್ಗಲಿಲ್ಲ ಈ ವೇಳೆ ಮರದ ಚಾವುವನ್ನು ಬಳಸಿ ಆತನ ತಲೆಯ ಹಿಂಭಾಗಕ್ಕೆ ಚುಚ್ಚಲು ಆರಂಭಿಸಿದ್ದಳು. ಆದರೆ, ಆತ ಮಾತ್ರ ಆಕೆಯ ಮೇಲೆ ಅತ್ಯಾಚಾರ ಮಾಡುವುದನ್ನು ಮುಂದುವರಿಸಿದ್ದ. ಕೊನೆಗೆ ಏನೂ ಕೂಡ ಸಿಗದೆ ಸುತ್ತಿಗೆಯನ್ನು ತೆಗೆದು ಪತಿಯ ತಲೆಗೆ ಹೊಡೆದಿದ್ದಳು. ಆತ ಅಲ್ಲಿಯೇ ಸಾವು ಕಂಡಿದ್ದ ಎಂದು ತನಿಖೆಯಲ್ಲಿ ತಿಳಿಸಲಾಗಿದೆ.
ಮೃತ ವ್ಯಕ್ತಿ ಕುಡಿದ ಅಮಲಿನಲ್ಲಿ ತನ್ನ ಸ್ವಂತ ಮಗಳ ಜೊತೆ ಅನುಚಿತವಾಗಿ ವರ್ತಿಸಲು ಯತ್ನಿಸಿರುವುದು ದಾಖಲೆಯಿಂದ ಸ್ಪಷ್ಟವಾಗಿದೆ ಎಂದು ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. ಐಪಿಸಿಯ ಸೆಕ್ಷನ್ 97 ಸೆಕ್ಷನ್ 354, 375, 354-ಎ ಮತ್ತು 354-ಬಿ ಅಡಿಯಲ್ಲಿ ಒಳಗೊಂಡಿರುವ ಲೈಂಗಿಕ ಅಪರಾಧಗಳು ಸೇರಿದಂತೆ ದೇಹದ ಮೇಲೆ ಪರಿಣಾಮ ಬೀರುವ ಅಪರಾಧಗಳ ವಿರುದ್ಧ ಆತ್ಮರಕ್ಷಣೆಯ ಹಕ್ಕನ್ನು ನೀಡುತ್ತದೆ ಎಂದು ಕೋರ್ಟ್ ಹೈಲೈಟ್ ಮಾಡಿದೆ. ಇದರರ್ಥ ಅಂತಹ ಅಪರಾಧಗಳಿಂದ ತಮ್ಮನ್ನು ಅಥವಾ ಇತರರನ್ನು ರಕ್ಷಿಸಿಕೊಳ್ಳುವ ವ್ಯಕ್ತಿಯು ಅಪರಾಧವನ್ನು ಒಪ್ಪಿಕೊಂಡರೂ ಸಹ ಸೆಕ್ಷನ್ 97 ರ ಅಡಿಯಲ್ಲಿ ಶಿಕ್ಷೆಯಿಂದ ವಿನಾಯಿತಿ ಪಡೆಯುತ್ತಾನೆ.
Kolar:'ಹೆಣ್ಣಾಗಿ ಹುಟ್ಟೊಕ್ಕಿಂತ... ಮಣ್ಣಾಗಿ ಹುಟ್ಟಿದರೇ..' ಅಂತಾ ಜನಪದರು ಹೇಳಿದ ಮಾತು ನಿಜ ಅಲ್ವೇ?
ಮೃತನ ದೇಹವು ಅರೆ ನಗ್ನವಾಗಿ ಕಂಡುಬಂದಿದೆ ಮತ್ತು ಅವನ ತಲೆಯ ಮೇಲೆ ಗಾಯವಾಗಿದೆ ಎಂದು ಆರೋಪಿತ ಹೆಂಡತಿ ನೀಡಿದ ವಿವರಣೆಯೊಂದಿಗೆ ದಾಖಲಾತಿಯಲ್ಲಿದೆ ಎಂದು ನ್ಯಾಯಾಲಯವು ಮಧ್ಯಪ್ರವೇಶಿಸಬೇಕಾದ ಸೂಕ್ತ ಪ್ರಕರಣವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಕೊನೆಗೆ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕಾರ ಮಾಡಿ, ಆಕೆಯ ಮೇಲಿದ್ದ ಕೊಲೆ ಆರೋಪ ಪ್ರಕರಣವನ್ನು ರದ್ದು ಮಾಡಿದೆ.
ಬೆಂಗಳೂರು: ಬೈಕ್ ಕದ್ದು ಮೋರಿಯಲ್ಲಿ ನಿಲ್ಲಿಸುತ್ತಿದ್ದ ಖರ್ತನಾಕ್ ಖದೀಮ ಅರೆಸ್ಟ್..!
ಕೋರ್ಟ್ ಆದೇಶದ ಪ್ರತಿ