ಟ್ರೈನಿ ವೈದ್ಯೆ ಮಲಗಿದ್ದ ಸೆಮಿನಾರ್ ಹಾಲ್‌ನ ಬಾಗಿಲಿನ ಬೋಲ್ಟ್ ಸರಿ ಇರಲಿಲ್ಲ ಎಂಬ ವಿಚಾರವೂ ತನಿಖೆ ವೇಳೆ ಸಿಬಿಐ ಗಮನಕ್ಕೆ ಬಂದಿದ್ದು, ಬಾಗಿಲಿನ ಅದೊಂದು ಬೋಲ್ಟ್ ಸರಿ ಇದಿದ್ದರೆ ವೈದ್ಯೆ ಅನಾಹುತದಿಂದ ಪಾರಾಗುತ್ತಿದ್ದಳೆ ಎಂಬ ವಿಷಾದವೊಂದು ಪೋಷಕರು ಸೇರಿದಂತೆ ವೈದ್ಯೆಯ ಸ್ನೇಹಿತರು, ಸಹೋದ್ಯೋಗಿಗಳನ್ನು ಕಾಡುತ್ತಿದೆ.
ಕೋಲ್ಕತಾ: ದೇಶವನ್ನೇ ಬೆಚ್ಚಿ ಬೀಳಿಸಿದ ಕೋಲ್ಕತಾ ಟ್ರೈನಿ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಗ್ಗೆ ಸಿಬಿಐ ಕಠಿಣವಾದ ತನಿಖೆ ನಡೆಸುತ್ತಿದೆ. ಆಗಸ್ಟ್ 9 ರಂದು ಕೋಲ್ಕತಾ ಆರ್ ಜಿ ಕರ್ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಟ್ರೈನಿ ವೈದ್ಯೆಯನ್ನು ಅತ್ಯಾಚಾರವೆಸಗಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ವಿಚಾರಣೆಯನ್ನು ಸಿಬಿಐ ಕೈಗೆತ್ತಿಕೊಂಡಿದ್ದು, ಎಲ್ಲಾ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸುತ್ತಿದೆ. ಟ್ರೈನಿ ವೈದ್ಯೆ ಮಲಗಿದ್ದ ಸೆಮಿನಾರ್ ಹಾಲ್‌ನ ಬಾಗಿಲಿನ ಬೋಲ್ಟ್ ಸರಿ ಇರಲಿಲ್ಲ ಎಂಬ ವಿಚಾರವೂ ತನಿಖೆ ವೇಳೆ ಸಿಬಿಐ ಗಮನಕ್ಕೆ ಬಂದಿದ್ದು, ಬಾಗಿಲಿನ ಅದೊಂದು ಬೋಲ್ಟ್ ಸರಿ ಇದಿದ್ದರೆ ವೈದ್ಯೆ ಅನಾಹುತದಿಂದ ಪಾರಾಗುತ್ತಿದ್ದಳೆ ಎಂಬ ವಿಷಾದವೊಂದು ಪೋಷಕರು ಸೇರಿದಂತೆ ವೈದ್ಯೆಯ ಸ್ನೇಹಿತರು, ಸಹೋದ್ಯೋಗಿಗಳನ್ನು ಕಾಡುತ್ತಿದೆ.
ಕೋಲ್ಕತಾದ ಆರ್‌ಜಿ ಕಾರ್ ವೈದ್ಯಕೀಯ ಆಸ್ಪತ್ರೆಯಲ್ಲಿ ಅತ್ಯಾಚಾರಿ ವೈದ್ಯೆಯನ್ನು ಅಷ್ಟೊಂದು ಕ್ರೌರ್ಯವಾಗಿ ಕೊಂದು ಹಾಕಿದ್ದರು ಏಕೆ ಸೆಮಿನಾರ್ ಹಾಲ್‌ನಿಂದ ಹೊರಗೆ ಯಾವುದೇ ಸದ್ದು ಕೇಳಿ ಬಂದಿಲ್ಲ ಎಂಬ ವಿಚಾರದ ಬಗ್ಗೆ ಸಿಬಿಐ ಅಧಿಕಾರಿಗಳು ಗೊಂದಲಕ್ಕೊಳಗಾಗಿದ್ದಾರೆ. 31 ವರ್ಷದ ಟ್ರೈನಿ ವೈದ್ಯೆಯ ಮೃತದೇಹ ಆಗಸ್ಟ್ 9 ರಂದು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ರಕ್ತಸಿಕ್ತ ವಿವಸ್ತ್ರ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 36 ಗಂಟೆಗಳ ದೀರ್ಘ ಕರ್ತವ್ಯದ ನಂತರ ವಿಶ್ರಾಂತಿ ತೆಗೆದುಕೊಳ್ಳುವುದಕ್ಕಾಗಿ ಆಸ್ಪತ್ರೆಯ ಸೆಮಿನಾರ್ ಹಾಲ್‌ಗೆ ತೆರಳಿ ಮಲಗಿದ್ದ ವೇಳೆ ಅಲ್ಲಿಗೆ ಬಂದ ಹಂತಕ ಸಂಜಯ್ ರಾಯ್ ಆಕೆಯ ಮೇಲೆ ಅತ್ಯಾಚಾರವೆಸಗಿ ಅಮಾನುಷವಾಗಿ ಹತ್ಯೆ ಮಾಡಿದ್ದ.
ರಾಜ್ಯದ ಸರ್ಕಾರಿ ಆಸ್ಪತ್ರೆಯಾಗಿರುವ ಆರ್‌ಜಿ ಕಾರ್ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಯಾವುದೇ ಅಡೆತಡೆಯಿಲ್ಲದೇ ಹೇಗೆ ಈ ಕೃತ್ಯ ನಡೆಯಿತು ಎಂಬ ಬಗ್ಗೆ ತನಿಖಾ ಸಂಸ್ಥೆ ಗಮನ ಕೇಂದ್ರೀಕರಿಸಿದೆ. ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾದಂತೆ ಮುರಿದ ಬೋಲ್ಟ್‌ನಿಂದಾಗಿ ಬಾಗಿಲು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ, ವೈದ್ಯೆ ಆಗಸ್ಟ್ 9ರ ನಸುಕಿನ ಜಾವ 2 ಗಂಟೆಯಿಂದ 3 ಗಂಟೆ ಮಧ್ಯದಲ್ಲಿ ಈ ಸೆಮಿನಾರ್ ಹಾಲ್‌ಗೆ ಬಂದಿದ್ದಳು. ಕರ್ತವ್ಯದಲ್ಲಿದ್ದ ವೈದ್ಯರೊಬ್ಬರು ಆಕೆ ಹಾಲ್‌ನಲ್ಲಿ ಮಲಗಿರುವುದನ್ನು ನೋಡಿದ್ದರು. ವೈದ್ಯರು, ಜೂನಿಯರ್ ಡಾಕ್ಟರ್‌ಗಳು,ಇಂಟರ್ನಿಗಳ ಜೊತೆ ಈ ಬಗ್ಗೆ ಸಿಬಿಐ ವಿಚಾರಿಸಿದಾಗ ಈ ಮುರಿದು ಹೋಗಿದ್ದ ಬಾಗಿಲಿನ ಬೋಲ್ಟ್ ಎಲ್ಲರಿಗೂ ಗೊತ್ತಿರುವ ವಿಚಾರವಾಗಿತ್ತು. ಬೋಲ್ಟ್ ಸರಿ ಇಲ್ಲದ ಕಾರಣವೇ ವೈದ್ಯೆ ಡೋರ್ ಲಾಕ್ ಮಾಡದೇ ಮಲಗಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಯಾರಾದರೂ ಹೊರಗೆ ನಿಂತಿದ್ದಿರಬಹುದೇ ಎಂಬ ಬಗ್ಗೆ ಸಿಬಿಐ ಅನುಮಾನ:
ಯಾವುದೇ ಅಡೆತಡೆಯಿಲ್ಲದೇ ಕೃತ್ಯ ನಡೆಯುವಂತಾಗಲೂ ಯಾರಾದರೂ ಬಾಗಿಲಿನ ಹೊರಗೆ ನಿಂತು ಕಾಯುತ್ತಿದ್ದಿರಬಹುದೇ ಎಂಬ ಬಗ್ಗೆಯೂ ಸಿಬಿಐ ಅನುಮಾನ ವ್ಯಕ್ತಪಡಿಸಿ ತನಿಖೆ ನಡೆಸಿತ್ತು. ಈ ವಿಚಾರದ ಪರಿಶೀಲನೆಗೆ ಅವರು ಸಿಸಿಟಿವಿ ದೃಶ್ಯಾವಳಿಯನ್ನು ಚೆಕ್ ಮಾಡಿದ್ದರು. ಸಂತ್ರಸ್ತೆ ಮೇಲೆ ಈ ರೀತಿ ಮಾರಣಾಂತಿಕವಾಗಿ ಹಲ್ಲೆಯಾಗಿದ್ರು ಕೂಡ ಯಾಕೆ ಯಾರಿಗೂ ಗೊತ್ತೆ ಆಗಲಿಲ್ಲ ಎಂಬ ವಿಚಾರ ಸಿಬಿಐ ಅಧಿಕಾರಿಗಳಿಗೆ ಅಚ್ಚರಿಯನ್ನುಂಟು ಮಾಡಿದೆ.
ಕೋಲ್ಕತಾದಲ್ಲಿ ಆದಂತೆ ನಿಮಗೂ ಮಾಡ್ತಿನಿ ಎಂದು ಹೆದರಿಸಿದ ಆಟೋ ಚಾಲಕನಿಗೆ ಸರಿಯಾಗಿ ಬಾರಿಸಿದ ಬಾಲಕಿ
ತಮ್ಮ ತನಿಖೆಯ ಭಾಗವಾಗಿ ಸಿಬಿಐ ಅಧಿಕಾರಿಗಳು ಈಗಾಗಲೇ ಆರ್‌ಜಿ ಕರ್ ಆಸ್ಪತ್ರೆಯ ನಾಲ್ವರು ಉದ್ಯೋಗಿಗಳಿಗೆ ಪಾಲಿಗ್ರಾಫ್ ಪರೀಕ್ಷೆಯನ್ನು ಮಾಡಿದ್ದಾರೆ. ಅದರಲ್ಲಿ ಮೂವರು ಜೂನಿಯರ್ ವೈದ್ಯರು ಕೂಡ ಸೇರಿದ್ದಾರೆ. ಈ ಟ್ರೈನಿ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಅವರ ಕೃತ್ಯ ಇರಬಹುದೇ ಎಂಬ ಬಗ್ಗೆ ತನಿಖೆಗೆ ಈ ಪಾಲಿಗ್ರಾಫ್ ಪರೀಕ್ಷೆ ಮಾಡಲಾಗಿದೆ.
ಘಟನೆ ನಡೆದ ಎರಡು ದಿನಗಳ ನಂತರ ರಾಜೀನಾಮೆ ನೀಡಿದ ಆರ್‌ಜಿ ಕರ್ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್‌ಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸಲು ಕೂಡ ಅಧಿಕಾರಿಗಳು ಅನುಮತಿ ಪಡೆದಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ಡಿವೈ ಚಂದ್ರಚೂಡ್ ಅವರು ಘಟನೆ ನಡೆದು 14 ಗಂಟೆಗಳ ನಂತರ ತಡವಾಗಿ ಎಫ್‌ಐಆರ್ ದಾಖಲಾಗಿದ್ದಕ್ಕೆ ಹಾಗೂ ಹತ್ಯೆಯನ್ನು ಆತ್ಮಹತ್ಯೆ ಎಂದು ಉಲ್ಲೇಖಿಸಿದ್ದಕ್ಕೆ ಸಂದೀಪ್ ಘೋಷ್ ಅವರನ್ನು ಟೀಕಿಸಿದ್ದರು.