ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಕೋಚ್‌ನಲ್ಲಿ ಬೆಂಕಿ

Published : Jul 17, 2023, 10:41 AM IST
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಕೋಚ್‌ನಲ್ಲಿ ಬೆಂಕಿ

ಸಾರಾಂಶ

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಬ್ಯಾಟರಿ ಬಾಕ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಭೋಪಾಲ್‌ನಿಂದ ದೆಹಲಿಗೆ ಹೊರಟಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಮಧ್ಯಪ್ರದೇಶದ ಕುರವೈ ಕೆತೋರಾ ಸ್ಟೇಷನ್‌ನಲ್ಲಿ ಈ ಅನಾಹುತ ಸಂಭವಿಸಿದೆ.  ಕೂಡಲೇ ಬೆಂಕಿಯನ್ನು ನಂದಿಸಲಾಗಿದೆ.  

ವಿದಿಶಾ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಬ್ಯಾಟರಿ ಬಾಕ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಭೋಪಾಲ್‌ನಿಂದ ದೆಹಲಿಗೆ ಹೊರಟಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಮಧ್ಯಪ್ರದೇಶದ ಕುರವೈ ಕೆತೋರಾ ಸ್ಟೇಷನ್‌ನಲ್ಲಿ ಈ ಅನಾಹುತ ಸಂಭವಿಸಿದೆ.  ಕೂಡಲೇ ಬೆಂಕಿಯನ್ನು ನಂದಿಸಲಾಗಿದೆ.  ಇದರಿಂದ ಪ್ರಯಾಣಿಕರಿಗೆ ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾರತೀಯ ರೈಲ್ವೆ ನೀಡಿದ ಮಾಹಿತಿ ಪ್ರಕಾರ, ಕೋಚೊಂದರ ಬ್ಯಾಟರಿ ಬಾಕ್ಸ್‌ನಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ.  ರಾಣಿ ಕಮಲಾಪತಿ (Habibganj) ರೈಲು ನಿಲ್ದಾಣದಿಂದ ದೆಹಲಿಯ ನಿಜಾಮುದ್ದೀನ್‌ ರೈಲ್ವೆ (delhi nijamudddin Railway station) ನಿಲ್ದಾಣದತ್ತ ರೈಲು ಹೊರಟ ಸ್ವಲ್ಪ ಹೊತ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.  ಬೆಂಕಿಯನ್ನು ಕೂಡಲೇ ನಂದಿಸಲಾಗಿದೆ.  ಬಳಿಕ ಸಂಪೂರ್ಣ ತಪಾಸಣೆ ಬಳಿಕ ರೈಲು ಪ್ರಯಾಣ ಮುಂದುವರೆಸಿದೆ ಎಂದು ರೈಲ್ವೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.  ಬೆಂಕಿ ಕಾಣಿಸಿಕೊಂಡಿರುವ ವಿಚಾರ ತಿಳಿದು ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು ಎಂದು ರೈಲ್ವೆ ಸಿಬ್ಬಂದಿ ಹೇಳಿದ್ದಾರೆ. 

ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಆಹಾರದಲ್ಲಿ ಉಗುರು ಪತ್ತೆ, IRCTCಯಿಂದ ಅಡುಗೆ ಮಾಡಿದಾತನಿಗೆ ದಂಡ

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪಶ್ಚಿಮ ಮಧ್ಯ ರೈಲ್ವೆಯ ಮುಖ್ಯಸ್ಥ ರಾಹುಲ್ ಶ್ರೀವಾಸ್ತವ್,  ವಂದೇ ಭಾರತ್ ರೈಲು ಸಂಖ್ಯೆ 20171ರ  ಬ್ಯಾಟರಿ ಬಾಕ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆ ರೈಲು ರಾಣಿ ಕಮಲಾಪತಿ ರೈಲು ನಿಲ್ದಾಣದಿಂದ ದೆಹಲಿಯ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ಹೋಗುತ್ತಿತ್ತು. ಕೂಡಲೇ ಕುರವೈ ಕೆತೋರಾ ರೈಲು ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಲಾಯಿತು. ನಂತರ ಅಲ್ಲಿಗೆ ಬಂದ ಅಗ್ನಿಶಾಮಕ ಸಿಬ್ಬಂದಿ ರೈಲು ನಿಲ್ಲಿಸಿದರು. ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಈಗ ಬ್ಯಾಟರಿ ಬಾಕ್ಸ್ ಅನ್ನು ವಿದ್ಯುನ್ಮಾನವಾಗಿ ಪ್ರತ್ಯೇಕಿಸಲಾಗಿದ್ದು ರೈಲು ದೆಹಲಿಗೆ ಹೊರಡಲಿದೆ ಎಂದು ಹೇಳಿದರು.

Vande bharat: ವರ್ಷದಲ್ಲಿ 200+ ರೈಲಿಗೆ ಕಲ್ಲೆಸೆತ, ವಂದೇ ಭಾರತ್‌ ರೈಲಿಗೆ 24 ಬಾರಿ ಕಲ್ಲಿನ ದಾಳಿ!


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!
ದೆಹಲಿ ರಕ್ಷಣೆಗೆ ಸ್ವದೇಶಿ ಕ್ಷಿಪಣಿ ವ್ಯವಸ್ಥೆ