ವೀಡಿಯೊ ವೈರಲ್ ಆದ ನಂತರ, ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಘಟನೆಯನ್ನು ಗಮನಿಸಿ ಮತ್ತು ಈ ವಿಷಯದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ವಿಡಿಯೋ ಜುಲೈ 12ರದ್ದು ಎನ್ನಲಾಗಿದೆ.
ನವದೆಹಲಿ (ಜು.16): ಬಿಹಾರದ ಅಧಿಕಾರಶಾಹಿಗೆ ಮುಜುಗರ ಉಂಟು ಮಾಡಿರುವ ವಿಡಿಯೋವೊಂದರಲ್ಲಿ, ಬಿಹಾರದ ಖಗಾರಿಯಾದಲ್ಲಿ ಬ್ಲಾಕ್ ಡೆವಲಪ್‌ಮೆಂಟ್ ಆಫೀಸರ್‌ಗೆ (ಬಿಡಿಒ) ನೀಡಿದ ಬೀಳ್ಕೊಡುಗೆ ಸಮಾರಂಭ ವಿವಾದಕ್ಕೆ ಕಾರಣವಾಗಿದೆ. ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದರಿಂದ ಅವರಿಗೆ ಬೀಳ್ಕೊಡುಗೆಯ ಪಾರ್ಟಿ ಏರ್ಪಡಿಸಲಾಗಿತ್ತು. ಈ ವೇಳೆ ಮಹಿಳೆಯ ನಂಗಾನಾಚ್ ಮಾಡಿರುವ ದೃಶ್ಯಾವಳಿಗಳು ವೈರಲ್ ಆಗಿದೆ. ಈ ವಿಡಿಯೋ ಹಾಗೂ ಅದರ ಕುರಿತಾಗಿ ಮಾಡಿರುವ ವರದಿಗಳ ಅನುಸಾರ, ಬೀಳ್ಕೊಡುಗೆ ಸಮಾರಂಭದ ಪಾರ್ಟಿಯಲ್ಲಿ ಭೋಜಪುರಿ ಹಾಡುಗಳಿಗೆ ಡಾನ್ಸ್ ಮಾಡಲು ಬಾರ್ ಗರ್ಲ್ಸ್‌ಗಳನ್ನು ಕರೆಸಲಾಗಿತ್ತು ಎನ್ನಲಾಗಿದೆ. ಬಿಡಿಒ ಸುನೀಲ್ ಕುಮಾರ್ ಅವರನ್ನು ಬೀಳ್ಕೊಡುವ ಸಲುವಾಗಿ ಬೆಲ್ದೌರ್ ಬ್ಲಾಕ್ ಆವರಣದಲ್ಲಿ ಆರ್ಕೆಸ್ಟ್ರಾ ಪಾರ್ಟಿ ಆಯೋಜಿಸಲಾಗಿತ್ತು. ಇದರಲ್ಲಿ ಬಾರ್ ಗರ್ಲ್ಸ್‌ಗಳು ಅಶ್ಲೀಲವಾಗಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಪಾರ್ಟಿಯಲ್ಲಿ ಅಧಿಕಾರಿಗಳು ಮತ್ತು ಇಲಾಖೆ ಸಿಬ್ಬಂದಿ ಕುಣಿದು ಕುಪ್ಪಳಿಸಿದ್ದಾರೆ. ನೃತ್ಯ ಪಾರ್ಟಿ ಆಯೋಜಿಸಲು ಯಾವುದೇ ಅನುಮತಿ ಪಡೆದುಕೊಂಡಿರಲಿಲ್ಲ ಎಂದು ಹೇಳಲಾಗಿದೆ.
ಈ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಜಿಲ್ಲಾಧಿಕಾರಿ ಘಟನೆಯನ್ನು ಸಂಪೂರ್ಣವಾಗಿ ಗಮನಿಸಿದ್ದು, ಇದರ ಅಮೂಲಾಗ್ರ ತನಿಖೆಗೆ ಆದೇಶ ನೀಡಿದ್ದಾರೆ. ಜುಲೈ 12ರ ವಿಡಿಯೋ ಇದು ಎನ್ನಲಾಗಿದೆ. ಕಚೇರಿಯ ಅಧಿಕಾರಿಗಳು ಕುಣಿದು ಕುಪ್ಪಳಿಸಿದ್ದು ಮಾತ್ರವಲ್ಲ, ಅವರ ನೃತ್ಯಕ್ಕೆ ಬಹುಪರಾಕ್ ಎನ್ನುವಂತೆ ನೋಟುಗಳನ್ನು ಎಸೆದು ಸಂಭ್ರಮಿಸಿದ್ದಾರೆ.
ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಭಾರತೀಯ, ಇಂದಿಗೂ ಸಿಂಪಲ್ ಲೈಫ್ ಬದುಕುತ್ತಿರುವ ರಾಕೇಶ್ ಶರ್ಮ!
ಅಧಿಕಾರಿಗಳು, ಸಿಬ್ಬಂದಿಗಳ ಡಾನ್ಸ್: ವೈರಲ್ ಆಗಿರುವ ವೀಡಿಯೊದಲ್ಲಿ ಬಾರ್ ಗರ್ಲ್ ವೇದಿಕೆಯಲ್ಲಿ ಸ್ವತಃ ನೃತ್ಯ ಮಾಡುವುದನ್ನು ತೋರಿಸಿದ್ದರೂ, ಪಾರ್ಟಿಯಲ್ಲಿದ್ದ ಅಧಿಕಾರಿಗಳು ಮತ್ತು ಸರ್ಕಾರಿ ಕಾರ್ಯಕರ್ತರು ಸಂಜೆಯವರೆಗೂ ನೃತ್ಯ ಮಾಡಿದ್ದಾರೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಈಗ ಸರ್ಕಾರಿ ಅಧಿಕಾರಿಗಳು ಮತ್ತು ಸಾಮಾನ್ಯ ಜನರು ಖಂಡಿಸುತ್ತಿರುವ "ನೃತ್ಯ" ಪಾರ್ಟಿಯನ್ನು ಬಿಟ್ಟು, ಪಾರ್ಟಿಯನ್ನು ಆಯೋಜಿಸಲು ಯಾವುದೇ ಅನುಮತಿ ಪಡೆದುಕೊಂಡಿರಲಿಲ್ಲ.
ಆಸ್ಟ್ರೇಲಿಯಾದ ರಾತ್ರಿ ಆಕಾಶದಲ್ಲಿ ಕಂಡ ಚಂದ್ರಯಾನ-3, ಫೋಟೋ ವೈರಲ್!