ಸನ್ನಡತೆಯ ಕಾರಣಕ್ಕೆ ಜೈಲಿನಿಂದ ಬಿಡುಗಡೆಗೊಂಡ ಅತ್ಯಾಚಾರಿಯಿಂದ ಬಾಲಕಿ ಮೇಲೆ ಮತ್ತೆ ರೇಪ್

Published : Aug 18, 2023, 12:50 PM IST
ಸನ್ನಡತೆಯ ಕಾರಣಕ್ಕೆ ಜೈಲಿನಿಂದ ಬಿಡುಗಡೆಗೊಂಡ ಅತ್ಯಾಚಾರಿಯಿಂದ ಬಾಲಕಿ ಮೇಲೆ ಮತ್ತೆ ರೇಪ್

ಸಾರಾಂಶ

ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿ ಸನ್ನಡತೆಯ ಆಧಾರದ ಮೇಲೆ ಬಿಡುಗಡೆಗೊಂಡಿದ್ದ ಕೈದಿಯೋರ್ವ ಜೈಲಿನಿಂದ ಹೊರಬಂದ ನಂತರ ಮತ್ತೆ ಬಾಲಕಿಯೋರ್ವಳ ಮೇಲೆ ಅತ್ಯಾಚಾರವೆಸಗಿದ ಹೇಯ ಘಟನೆ ಮಧ್ಯಪ್ರದೇಶದ (Madhya Pradesh) ಸಾತ್ನಾ ಜಿಲ್ಲೆಯಲ್ಲಿ ನಡೆದಿದೆ.

ಸಾತ್ನಾ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿ ಸನ್ನಡತೆಯ ಆಧಾರದ ಮೇಲೆ ಬಿಡುಗಡೆಗೊಂಡಿದ್ದ ಕೈದಿಯೋರ್ವ ಜೈಲಿನಿಂದ ಹೊರಬಂದ ನಂತರ ಮತ್ತೆ ಬಾಲಕಿಯೋರ್ವಳ ಮೇಲೆ ಅತ್ಯಾಚಾರವೆಸಗಿದ ಹೇಯ ಘಟನೆ ಮಧ್ಯಪ್ರದೇಶದ (Madhya Pradesh) ಸಾತ್ನಾ ಜಿಲ್ಲೆಯಲ್ಲಿ  ನಡೆದಿದೆ. 35 ವರ್ಷದ ರಾಕೇಶ್ ವರ್ಮಾ ಬಂಧಿತ ಆರೋಪಿ, ಈತ ಅತ್ಯಾಚಾರ ಪ್ರಕರಣದಲ್ಲಿ 10 ವರ್ಷಗಳ ಕಾಲ ಜೈಲಿನಲ್ಲಿದ್ದು, ಕೆಲ ಸಮಯದ ಹಿಂದಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದ. 

ಇತ್ತ ಅತ್ಯಾಚಾರಕ್ಕೊಳಗಾದ ಬಾಲಕಿ ತನ್ನ ಅಜ್ಜಿಯ ಜೊತೆ ಸ್ಥಳೀಯ ದೇಗುಲವೊಂದರ ಬಳಿ ಭಿಕ್ಷೆ ಬೇಡುತ್ತಿದ್ದಳು, ಈಕೆಯನ್ನು ರಾಕೇಶ್ ವರ್ಮಾ ಅಪಹರಿಸಿದ್ದು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಅತ್ಯಾಚಾರವೆಸಗಿದ್ದಾನೆ. ಇದರಿಂದ ಬಾಲಕಿಯ ಸ್ಥಿತಿ ಗಂಭೀರವಾಗಿದ್ದು, ಆಕೆಗೆ ರೇವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳಿಂದ ನರ್ಸ್ ಮೇಲೆ ಗ್ಯಾಂಗ್ ರೇಪ್-ಹತ್ಯೆ, 4 ವರ್ಷದ ಮಗಳು ಅನಾಥ!

ಬುಧವಾರ ಸಂಜೆ 5.30 ರ ಸುಮಾರಿಗೆ ಬಾಲಕಿ ತನ್ನ ಅಜ್ಜಿಯ ಜೊತೆ ದೇಗುಲದ ಬಳಿ ಕುಳಿತಿದ್ದಳು. ಈಕೆಯ ಬಳಿ ಬಂದ ರಾಕೇಶ್ ವರ್ಮಾ (Rakesh verma) ಆಕೆಗೆ ಚಾಕೋಲೇಟ್ ನೀಡುವ ಆಮಿಷವೊಡ್ಡಿ ಆಕೆಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡಿದ್ದಾನೆ. ಈ ವೇಳೆ ಬಾಲಕಿ ಅಳಲು ಆರಂಭಿಸಿದ್ದು, ಆಕೆಯನ್ನು ಬಿಟ್ಟು ಬಿಡುವಂತೆ ಅಜ್ಜಿ ವರ್ಮಾಗೆ ಹೇಳಿದ್ದಾಳೆ. ಈ ವೇಳೆ ರಾಕೇಶ್ ವರ್ಮಾ ಆಕೆಯನ್ನು ಎತ್ತಿಕೊಂಡು ಅಲ್ಲಿಂದ ಓಡಿ ಹೋಗಿದ್ದಾನೆ ಎಂದು ಅಜ್ಜಿ ಹೇಳಿದ್ದಾಗಿ ಸತ್ನಾದ ಎಸ್‌ಪಿ ಅಶುತೋಷ್ ಗುಪ್ತಾ ಹೇಳಿದ್ದಾರೆ. 

ಉಚಿತ ಮೊಬೈಲ್‌ ಫೋನ್‌ ಭರವಸೆ: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಸರ್ಕಾರಿ ಉದ್ಯೋಗಿ

ಇದಾದ ನಂತರ ಅಜ್ಜಿ ಮತ್ತು ಸ್ಥಳೀಯರು ಬಾಲಕಿಗಾಗಿ ಹುಡುಕಾಟ ನಡೆಸಿದ್ದು, ಈ ವೇಳೆ ಬಾಲಕಿ ರಕ್ತಸ್ರಾವದ ಜೊತೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರಿಗೆ ಪತ್ತೆಯಾಗಿದ್ದಾಳೆ. ಅಲ್ಲದೇ ಸಂಜೆ 7 ಗಂಟೆ ಸುಮಾರಿಗೆ ಆರೋಪಿ ರಾಕೇಶ್ ವರ್ಮಾ, ಜಗತ್ ದೇವ್ ತಲಾಬ್(ಕೆರೆ) ಬಳಿ ಪತ್ತೆಯಾಗಿದ್ದಾನೆ. ನಂತರ ಆತನನ್ನು ಬಂಧಿಸಿದ ಪೊಲೀಸರು ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿನ ವೈದ್ಯರು ಆಕೆಯನ್ನು ರೇವಾದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

2012ರಲ್ಲಿ ಈ ರಾಕೇಶ್ ವರ್ಮಾ ಅಪ್ರಾಪ್ತೆಯೋರ್ವಳ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಜೈಲು ಸೇರಿದ್ದ, ಈ ಪ್ರಕರಣದಲ್ಲಿ ದಶಕಗಳ ಕಾಲ ಜೈಲಿನಲ್ಲಿ ಕಳೆದ ಆರೋಪಿ ಕೆಲ ಸಮಯದ ಹಿಂದಷ್ಟೇ ಜೈಲಿನಿಂದ ಹೊರ ಬಂದಿದ್ದ, ಸನ್ನಡತೆಯ ಆಧಾರದ ಮೇಲೆ ಆತನನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗಿತ್ತು.  ಆರೋಪಿ ರಾಕೇಶ್ ವರ್ಮಾ ವಿರುದ್ಧ ಕಿಡ್ನಾಪ್ (ಸೆಕ್ಷನ್ 363), ರೇಪ್‌ (ಸೆಕ್ಷನ್ 376) ಹಾಗೂ ಪೋಸ್ಕೊದಡಿ ಪ್ರಕರಣ ದಾಖಲಿಸಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುಸ್ಲಿಂ ಲೀಗ್‌, ಜಿನ್ನಾಗೆ ಮಣಿದ ನೆಹರು, ವಂದೇ ಮಾತರಂ ಅನ್ನು ಹರಿದು ಹಾಕಿದ್ದು ಕಾಂಗ್ರೆಸ್‌: ಮೋದಿ ವಾಗ್ದಾಳಿ
ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ